ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಸ್ಥಾನಕ್ಕೆ ಏರಲಿರುವ ಭಾರತದ ಆಟೊಮೋಟಿವ್‌ ಉದ್ಯಮ

Published 28 ಆಗಸ್ಟ್ 2023, 16:36 IST
Last Updated 28 ಆಗಸ್ಟ್ 2023, 16:36 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಆಟೊಮೋಟಿವ್‌ ಉದ್ಯಮವು 2030ರ ವೇಳೆಗೆ ಜಾಗತಿಕವಾಗಿ ಮೂರನೇ ಸ್ಥಾನಕ್ಕೆ ಏರುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯ ಅಡಿ ₹25,938 ಕೋಟಿ ನೀಡಿರುವುದು ಹಾಗೂ ವಾಹನ ಬಿಡಿಭಾಗಗಳಿಗೆ ಉತ್ತೇಜನ ನೀಡಿರುವುದು ವಲಯದ ಬೆಳವಣಿಗೆಗೆ ನೆರವಾಗಲಿದೆ ಎಂದು ತಿಳಿಸಿದೆ.

ಪಿಎಲ್‌ಐ ಯೋಜನೆಯ ಕುರಿತು ಬೃಹತ್‌ ಉದ್ದಿಮೆಗಳ ಸಚಿವಾಲಯವು ಮಂಗಳವಾರ ಪರಿಶೀಲನೆ ನಡೆಸಲಿದೆ. ಬೃಹತ್‌ ಉದ್ದಿಮೆಗಳ ಸಚಿವ ಮಹೇಂದ್ರನಾಥ್ ಪಾಂಡೆ ಅವರು ಕಂಪನಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಆಟೊಮೋಟಿವ್ ಉದ್ಯಮವು ದೇಶದ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭವಾಗಿದೆ. ದೇಶದ ಜಿಡಿಪಿಗೆ ಈ ಉದ್ಯಮದ ಕೊಡುಗೆಯು 1992–93ರಲ್ಲಿ ಶೇ 2.77ರಷ್ಟು ಇದ್ದಿದ್ದು ಸದ್ಯ ಶೇ 7.1ಕ್ಕೆ ಏರಿಕೆ ಕಂಡಿದೆ. 1.9 ಕೋಟಿಗೂ ಅಧಿಕ ಜನರಿಗೆ ನೇರ ಮತ್ತು ಪರೋಕ್ಷವಾಗಿ ಕೆಲಸ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದ ಆಟೊಮೊಬೈಲ್‌ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ಮತ್ತು ಪ್ರಯಾಣಿಕ ಕಾರುಗಳ ಪಾಲು 2021–22ರಲ್ಲಿ ಕ್ರಮವಾಗಿ ಶೇ 77 ಮತ್ತು ಶೇ 18ರಷ್ಟು ಇತ್ತು. ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ಸಣ್ಣ ಮತ್ತು ಮಧ್ಯಮಗಾತ್ರದ ಕಾರುಗಳ ಪಾಲು ಹೆಚ್ಚಿನದ್ದಾಗಿದೆ.

ಭಾರತವು 2024ರ ಅಂತ್ಯದ ವೇಳಗೆ ವಾಹನ ಉದ್ಯಮದ ಗಾತ್ರವನ್ನು ₹15 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡಿದೆ. 2000ದ ಏಪ್ರಿಲ್‌ನಿಂದ 2022ರ ಸೆಪ್ಟೆಂಬರ್‌ ಅವಧಿಯಲ್ಲಿ ₹2.79 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ಆಗಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ ಹೂಡಿಕೆ ಆಗಿರುವ ಒಟ್ಟು ಎಫ್‌ಡಿಐನಲ್ಲಿ ಶೇ 5.48ರಷ್ಟು ಪಾಲನ್ನು ಅದು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT