ಮಂಗಳವಾರ, ಸೆಪ್ಟೆಂಬರ್ 21, 2021
21 °C

ಮಾರುತಿ ತಯಾರಿಕೆ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಆಗಸ್ಟ್‌ನಲ್ಲಿ ಒಟ್ಟಾರೆ 1.24 ಲಕ್ಷ ವಾಹನಗಳನ್ನು ತಯಾರಿಸಿದ್ದು, ಹಿಂದಿನ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ತಯಾರಿಕೆಯು ಶೇಕಡ 11ರಷ್ಟು ಹೆಚ್ಚಾಗಿದೆ. 2019ರ ಆಗಸ್ಟ್‌ನಲ್ಲಿ ಕಂಪನಿಯು 1.11 ಲಕ್ಷ ವಾಹನಗಳನ್ನು ತಯಾರಿಸಿತ್ತು.

ಪ್ರಯಾಣಿಕ ವಾಹನಗಳ ತಯಾರಿಕೆ 1.10 ಲಕ್ಷದಿಂದ 1.21 ಲಕ್ಷಕ್ಕೆ ಹೆಚ್ಚಳ ಕಂಡಿದೆ. ಸಣ್ಣ ಕಾರುಗಳಾದ ಆಲ್ಟೊ ಮತ್ತು ಎಸ್‌–ಪ್ರೆಸೊ ತಯಾರಿಕೆ ಶೇ 61ರಷ್ಟು ಹೆಚ್ಚಾಗಿದೆ. ಕಾಂಪ್ಯಾಕ್ಟ್‌ ಕಾರು ಮತ್ತು ಯುಟಿಲಿಟಿ ವಾಹನಗಳ ತಯಾರಿಕೆಯೂ ಹೆಚ್ಚಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.