ಬುಧವಾರ, ಸೆಪ್ಟೆಂಬರ್ 18, 2019
21 °C

ಆತ್ಮಾಹುತಿ ಬಾಂಬ್‌ ದಾಳಿ

Published:
Updated:

ಬಾಗ್ದಾದ್‌: ಪೂರ್ವ ಬಾಗ್ದಾದ್‌ನ ಮಾರುಕಟ್ಟೆಯೊಂದರಲ್ಲಿ ಗುರುವಾರ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

‘ಸ್ಫೋಟಕ ಹೊಂದಿದ ಬೆಲ್ಟ್‌ ಧರಿಸಿದ್ದ ದಾಳಿಕೋರ, ಹೆಚ್ಚು ಜನರು ಇರುವ ಜಾಮಿಲಾ ಮಾರುಕಟ್ಟೆಯ ಅಂಗಡಿಗಳ ಬಳಿಯಿದ್ದ’ ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು. ಕೃತ್ಯದ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ ಹೊತ್ತುಕೊಂಡಿದೆ.

Post Comments (+)