ಮಹರ್ಷಿ ಭಗೀರಥ ಜಯಂತಿ

ಬುಧವಾರ, ಮೇ 22, 2019
29 °C

ಮಹರ್ಷಿ ಭಗೀರಥ ಜಯಂತಿ

Published:
Updated:
Prajavani

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಮಹರ್ಷಿ ಭಗೀರಥರ ಜಯಂತಿಯನ್ನು ಶಾಸ್ತ್ರೋಕ್ತವಾಗಿ ಆಚರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ದೀಪ ಬೆಳಗಿಸುವುದರ ಮೂಲಕ ಜಯಂತಿ ಸಮಾರಂಭ ಉದ್ಘಾಟಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ, ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ಸೋಮನಗೌಡ ಕಲ್ಲೂರ, ಉಪ್ಪಾರ ಸಮಾಜದ ಅಧ್ಯಕ್ಷ ಜಕ್ಕಪ್ಪ ಎಸ್.ಎಡವೆ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಕೆ.ಶಿವಣ್ಣವರ, ಭಾರತಿ ಗೋವಿಂದರಾವ್ ಟಂಕಸಾಲಿ, ಗೌರವಾಧ್ಯಕ್ಷ ವಿಶ್ವನಾಥ ನರಳಿ, ಮಾಲಿಂಗ ಉಪ್ಪಾರ, ಲಕ್ಷ್ಮಣ ಉಪ್ಪಾರ, ಸಹದೇಶ ಬೆಳಗಲಿ, ಮಲ್ಲು ಶಿವಣ್ಣವರ, ಪೂಗ್ಲಿ ಉಪ್ಪಾರ, ಬಸವರಾಜ್, ರಂಗು ಮಂಜೆ, ಶಿವಾನಂದ ಎನ್.ಕಟ್ಟಿಮನಿ, ಸಿದ್ದು ಬಾವಿಕಟ್ಟಿ, ಸಂತೋಷ್ ರಾಥೋಡ್, ರಾಜೇಂದ್ರ ಉಪ್ಪಾರ, ಅನಿಲ ಉಪ್ಪಾರ, ಆನಂದ ಗಣಗಾರ, ಡಿ.ವೈ.ಉಪ್ಪಾರ, ಸಂಗನಬಸವ ಹಳಕಟ್ಟಿ, ಕಾಶಿನಾಥ ಹಳಕಟ್ಟಿ ಉಪಸ್ಥಿತರಿದ್ದರು.

ಜ್ಯೋತಿರ್ಲಿಂಗ ದರ್ಶನಕ್ಕೆ ಪಯಣ: ವಿಜಯಪುರ ತಾಲ್ಲೂಕಿನ ಐನಾಪುರ ಮಹಲ್ ಗ್ರಾಮದ 48 ಜನರು ದೇಶದ ವಿವಿಧೆಡೆಯಿರುವ ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ 16 ದಿನದ ಬಸ್‌ ಪ್ರಯಾಣವನ್ನು ಶುಕ್ರವಾರ ಸಂಜೆ ಗ್ರಾಮದಿಂದ ಆರಂಭಿಸಿದರು. ಸ್ಥಳೀಯರು ಶುಭ ಹಾರೈಸಿ ಬೀಳ್ಕೊಟ್ಟರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !