ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಕೂಡ್ಲೂರು: ಬಿರುಗಾಳಿಗೆ ನೆಲಕಚ್ಚಿದ ಬಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ ಕೂಡ್ಲೂರು ಗ್ರಾಮದಲ್ಲಿ ಮಂಗಳವಾರ ಬೀಸಿದ ಭಾರಿ ಬಿರುಗಾಳಿಗೆ ವಿದ್ಯುತ್ ಕಂಬ ಹಾಗೂ ಬಾಳೆಗಿಡಗಳು ನೆಲಕ್ಕುರುಳಿದ್ದು, ರೈತರ ಪರದಾಡುವಂತಾಗಿದೆ.

ಗ್ರಾಮದ ನಾಗರಾಜು, ಹೂಗ್ಯಂ ಎಚ್.ಡಿ.ಪಿ.ಪಳನಿಸ್ವಾಮಿ ಹಾಗೂ ಉಪ್ಪರಹಳ್ಳಿ ಮಠ ಮಾದಪ್ಪ ಹಾಗೂ ಪೆರುಮಾಳ್ ಅವರ ಜಮೀನುಗಳಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಬಾಳೆ ಬೆಳೆ ಬಿರುಗಾಳಿ ಸಿಲುಕಿ ನೆಲಕಚ್ಚಿವೆ.

ತಾಲ್ಲೂಕಿನ ಹೂಗ್ಯಂ ಸೇರಿದಂತೆ ಕೂಡ್ಲೂರು ಸುತ್ತಮುತ್ತ ಏಲಕ್ಕಿ ಬಾಳೆ ಗೊನೆ ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರುತ್ತಿದ್ದವು. ಅಷ್ಟರಲ್ಲೇ ಬಿರುಗಾಳಿ ಮಳೆಗೆ ಸಿಲುಕಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಾಳೆ ನಷ್ಟವಾಗಿದೆ.

ರೈತರ ಜಮೀನುಗಳಲ್ಲಿ ಹುಲುಸಾಗಿ ಬೆಳೆದಿದ್ದ ಬಾಳೆ ಫಸಲು ಕೈ ಸೇರುವ ಮುನ್ನ ಮಣ್ಣು ಪಾಲಾಗಿದ್ದು, ಜಿಲ್ಲಾಡಳಿತ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು