ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಿಕಾ' ಧಾರಾವಾಹಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ತೇಜಸ್ವಿನಿ ಹಾಗೂ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದ ವಿರಾಟ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಇದೀಗ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ನಟ ವಿರಾಟ್ ಪ್ರೇಮ ನಿವೇದನೆ ಮಾಡುವುದು, ಕೈಗೆ ಉಂಗುರ ತೊಡಿಸುವ ಫೋಟೊಗಳನ್ನು ನಟಿ ತೇಜಸ್ವಿನಿ ಹಂಚಿಕೊಂಡಿದ್ದಾರೆ. ಜೊತೆಗೆ ‘ನಾವಿಬ್ಬರೂ ಸರಿಯಾದ ಸಮಯದಲ್ಲಿ ಭೇಟಿಯಾದೆವು. ನಾವು ಜೀವನ ಪರ್ಯಂತ ಒಟ್ಟಿಗೆ ಇರಲು ನಿರ್ಧರಿಸಿದ್ದೇವೆ. ಈಗ ಅಧಿಕೃತವಾಗಿ ಘೋಷಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಟ ವಿರಾಟ್ ಹಾಗೂ ತೇಜಸ್ವಿನಿ ತಮ್ಮ ಪ್ರೇಮ ಸಂಬಂಧದ ಬಗ್ಗೆ ಅಧಿಕೃತವಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಇನ್ನು, ನಟಿ ತೇಜಸ್ವಿನಿ ಮೈಸೂರಿನವರು. ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹು ಭಾಷೆಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ನಟ ವಿರಾಟ್ ಅವರು ದಾವಣಗೆರೆ ಮೂಲದವರು. ಇವರ ತಾಯಿ ನಾಗವೇಣಿ ಅವರು ರಂಗಭೂಮಿ ಕಲಾವಿದೆ. ಬಣ್ಣದ ನಂಟು ಚಿಕ್ಕವಯಸ್ಸನಿಂದ ವಿರಾಟ್ಗೆ ಒಲಿದು ಬಂದಿದೆ. ‘ಸಂಘರ್ಷ’, ‘ರಾಧಿಕಾ’, ‘ನನ್ನ ದೇವ್ರು’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ತೇಜಸ್ವಿನಿ ಹಾಗೂ ವಿರಾಟ್ ‘ಸಂಘರ್ಷ’ ಧಾರಾವಾಹಿ ಮೂಲಕ ಪರಿಚಯವಾಗಿತ್ತು. ಅಲ್ಲಿಂದ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರೂ ಮತ್ತೊಮ್ಮೆ ‘ರಾಧಿಕಾ’ ಧಾರಾವಾಹಿಯಲ್ಲಿ ಜೋಡಿಯಾಗಿ ಮಿಂಚಿದ್ದರು. ಈಗಾಗಲೇ ಈ ಇಬ್ಬರ ಪ್ರೀತಿಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದು, ತೇಜಸ್ವಿನಿ ಹಾಗೂ ವಿರಾಟ್ ಜೋಡಿ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ದಿನಾಂಕದ ಬಗ್ಗೆ ಈ ಜೋಡಿ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.