ಮ್ಯಾನ್‌ಹಂಟ್‌ಗೆ ದಕ್ಷಿಣದಿಂದ ಐವರು ಆಯ್ಕೆ

7

ಮ್ಯಾನ್‌ಹಂಟ್‌ಗೆ ದಕ್ಷಿಣದಿಂದ ಐವರು ಆಯ್ಕೆ

Published:
Updated:
Deccan Herald

‘ಮ್ಯಾನ್‌ಹಂಟ್‌ 2018’ ದಕ್ಷಿಣ ಭಾರತದಿಂದ ಐವರು ಯುವ ಮಾಡೆಲ್ ಗಳು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಝೋನ್ ದಿ ಪಾರ್ಕ್ ಹೋಟೆಲ್ ನಲ್ಲಿ ನಡೆದ ಮ್ಯಾನ್ ಹಂಟ್ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಭಾರತದ ಹೈದರಾಬಾದ್, ಬೆಂಗಳೂರು, ಕೊಚ್ಚಿ, ಚೆನೈನಿಂದ ಆಗಮಿಸಿದ್ದ ಪುರುಷ ಮಾಡೆಲ್ ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಅಭಿನಿತ್ ಸಿನ್ಹ (ಜೆಮ್‌ಷೆಡ್‌ಪುರ್), ಪ್ರಸಾದ್ ಕಾರ್ಯಪ್ಪ (ಕೊಡಗು), ಆರ್. ಅರ್ಜುನ್ (ಬೆಂಗಳೂರು), ನಿತೇಶ್ ಗರ್ಗ್ (ಮಧ್ಯಪ್ರದೇಶ), ಪುನೀತ್ ಅಗರವಾಲ್ (ಹೈದರಾಬಾದ್) ರಾಷ್ಟ್ರೀಯ ಮಟ್ಟದ ಮ್ಯಾನ್ ಹಂಟ್‍ಗೆ ಆಯ್ಕೆಯಾಗಿದ್ದಾರೆ.

ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ನಡೆದ ಮ್ಯಾನ್ ಹಂಟ್‌ ಶೋದಲ್ಲಿ ಮಾಡೆಲ್‍ಗಳು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುವುದರ ಜೊತೆಗೆ ತೀರ್ಪುಗಾರರು ಕೇಳಿದ ಕ್ಲಿಷ್ಟ ಪ್ರಶ್ನೆಗಳಿಗೆ ಜಾಣ್ಮೆಯ ಉತ್ತರ ನೀಡಿ ತೀರ್ಪುಗಾರರ ಮನ ಗೆದ್ದರು.

ಈ ಐವರು ಯುವ ಮಾಡೆಲ್ ಗಳು ದೆಹಲಿಯಲ್ಲಿ ಅಕ್ಟೋಬರ್ 25-27 ರಂದು ನಡೆಯುವ ರಾಷ್ಟ್ರೀಯ ಮಟ್ಟದ ಮ್ಯಾನ್ ಹಂಟ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ.  ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಮ್ಯಾನ್ ಹಂಟ್ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಮಾಡೆಲ್‍ಗಳು ನವೆಂಬರ್ 26 ರಿಂದ ಡಿಸೆಂಬರ್ 2 ರ ವರೆಗೆ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಮೂ

ವತ್ತು ವರ್ಷಗಳ ಇತಿಹಾಸ
ಮೂವತ್ತು ವರ್ಷಗಳ ಹಿಂದೆ ಪುರುಷ ಮಾಡಲ್‌ಗಳಿಗಾಗಿ 3 ದಶಕಗಳಿಂದ ಈ ವೇದಿಕೆಯು ಪುರುಷ ಮಾಡಲ್‍ಗಳಿಗೆ ಅದ್ಭುತ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಬಾಲಿವುಡ್ ಜಗತ್ತಿನಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಜಾನ್ ಇಬ್ರಾಹಿಂ, ಡಿನೋ ಮೊರಿಯಾ, ರಾಜೀವ್ ಸಿಂಗ್ ಇದೇ ವೇದಿಕೆಯಿಂದ ಹೊರಹೊಮ್ಮಿದ ಪ್ರತಿಭೆಗಳು. ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ನಮಗೆ ಹೆಮ್ಮೆಯೆನಿಸಿದೆ ಎಂದು ದಕ್ಷಿಣ ಭಾರತ ಮ್ಯಾನ್ ಹಂಟ್ ಫ್ಯಾಶನ್ ಶೋ ಮುಖ್ಯಸ್ಥೆ ಪ್ರತಿಭಾ ಸಂಶಿಮಠ ಹೇಳಿದ್ದಾರೆ.
ಫ್ಯಾಶನ್ ಶೋ ತೀರ್ಪುಗಾರರಾಗಿ ದೆಹಲಿಯ ದೀಪಾಲಿ ಫಡ್ನವೀಸ್ ಆಗಮಿಸಿದ್ದರು.

ಹೆಚ್ಚಿನ ಮಾಹಿತಿಗಾಗಿ: ಪ್ರತಿಭಾ ಸಂಶಿಮಠ – 9611455866

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !