ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾ ನಿರಂಜನ್ ಮುಡಿಗೆ ಪರ್ಸೋನಾ ಮಿಸೆಸ್‌ ಇಂಡಿಯಾ ಕಿರೀಟ

Last Updated 24 ಜುಲೈ 2022, 7:47 IST
ಅಕ್ಷರ ಗಾತ್ರ

ಪ್ರತಿಷ್ಠಿತ ಪರ್ಸೋನಾ ಮಿಸೆಸ್‌ಇಂಡಿಯಾ ಸ್ಪರ್ಧೆಯಲ್ಲಿ ಬೆಂಗಳೂರಿನ ಹೇಮಾ ನಿರಂಜನ್ ಗೆದ್ದಿದ್ದಾರೆ. ಪರ್ಸೋನಾ ಮಿಸೆಸ್‌ ಇಂಡಿಯಾ ಪ್ರಶಸ್ತಿ ಅವರ ಮುಡಿಗೇರಿದೆ.

‘ಮೂಲತಃ ಹೊಳೆನರಸೀಪುರದವರಾದ ಹೇಮಾ ಸದ್ಯ ಬೆಂಗಳೂರಿನಲ್ಲಿ ನೆಲೆಯಾಗಿದ್ದಾರೆ. ಫ್ಯಾಷನ್‌ ಸ್ಪರ್ಧೆಗಳಲ್ಲಿ ಭಾಗವಹಿಸುವುದು ತಂದೆ ತಾಯಿಗೆ ಇಷ್ಟವಿರಲಿಲ್ಲ. ಆದರೆ, ಪತಿಯ ಬೆಂಬಲದಿಂದ ಇದು ಸಾಧ್ಯವಾಯಿತು’ ಎಂದರು ಅವರು.

‘ಸ್ಪರ್ಧೆಗೆ ಸೌಂದರ್ಯ ಒಂದೇ ಮಾನದಂಡವಲ್ಲ. ತುಂಡು ಬಟ್ಟೆಗಳನ್ನು ಧರಿಸುವುದೂ ಅಲ್ಲ. ಸಾಕಷ್ಟು ಪೂರ್ವ ತಯಾರಿಬೇಕು. ಅಷ್ಟೇ ಅಲ್ಲದೇ ಕೆಲವಾರು ಸುತ್ತುಗಳ ಪರೀಕ್ಷೆ ಇಲ್ಲಿರುತ್ತದೆ. ತುಂಡು ಉಡುಗೆ ಧರಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಲು ನಾನು ಇಷ್ಟಪಡುವುದಿಲ್ಲ. ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸಲು ವ್ಯಾಯಾಮ ಮಾಡಿ ಆರು ಕೆಜಿ ತೂಕ ಇಳಿಸಿಕೊಂಡಿದ್ದೇನೆ. 33 ಜನ ಸ್ಪರ್ಧಿಗಳು ಭಾಗವಹಿಸಿದ್ದ ಪರ್ಸೋನಾ ಮಿಸೆಸ್‌ ಇಂಡಿಯಾ‌ 2022 ಸ್ಪರ್ಧೆಯಲ್ಲಿ ನಾನು ವಿಜೇತಳಾಗಿದ್ದು ಸಂತೋಷವಾಗಿದೆ’ ಎಂದರು.

‘ಉದ್ಯಮಿಯಾಗಿಯೂ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಒಳ್ಳೆಯ ಅವಕಾಶ ಸಿಕ್ಕರೆ ಸಿನಿಮಾದಲ್ಲಿ ನಟಿಸುತ್ತೇನೆ. ನನ್ನ ಇಷ್ಟದ ಹೀರೋ ಕಿಚ್ಚ ಸುದೀಪ್‌. ಅವರೊಡನೆ ಅಭಿನಯಿಸುವ ಆಸೆ ಇದೆ’ ಎಂದರು ಹೇಮಾ ನಿರಂಜನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT