ಗುರುವಾರ , ಅಕ್ಟೋಬರ್ 17, 2019
28 °C

ಮಹಿಳೆಯರಿಗೆ ಬಾಗಿನ ವಿತರಣೆ

Published:
Updated:
Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನ ಹಾರೋಬಂಡೆ ಗ್ರಾಮದಲ್ಲಿರುವ ಸಾಯಿ ಮಂದಿರದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಗಣಪತಿ ಮತ್ತು ಲಕ್ಷ್ಮೀನಾರಾಯಣ ಹೋಮ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಜಿಎಚ್ಎನ್ ಫೌಂಡೇಷನ್ ವತಿಯಿಂದ ಸಾಯಿ ಮಂದಿರದ ಧರ್ಮಾಧಿಕಾರಿ ಜಿ.ಎಚ್.ನಾಗರಾಜ್, ಧರ್ಮದರ್ಶಿ ಎನ್.ವಿನಯ್ ಶ್ಯಾಮ್ ಅವರು ಬಾಗಿನ ನೀಡಿದರು.

ಈ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ, ಮಾಜಿ ಶಾಸಕ ಎನ್.ಸಂಪಂಗಿ, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್, ಮುಖಂಡರಾದ ನಂದಿ ಆಂಜನಪ್ಪ ನವೀನ್ ಕಿರಣ್, ಅಜಿತ್ ಪ್ರಸಾದ್ ಭಾಗವಹಿಸಿದ್ದರು.

Post Comments (+)