283 ಚಾಲಕರಿಗೆ ಬೆಳ್ಳಿ ಪದಕ

7

283 ಚಾಲಕರಿಗೆ ಬೆಳ್ಳಿ ಪದಕ

Published:
Updated:

ಬೆಂಗಳೂರು: 17 ವಿಭಾಗಗಳಲ್ಲಿ ಅಪಘಾತರಹಿತ ಮತ್ತು ಅಪರಾಧರಹಿತ ಕರ್ತವ್ಯ ಸಲ್ಲಿಸಿದ ಒಟ್ಟು 283 ಚಾಲಕರಿಗೆ ರಾಜ್ಯ ರಸ್ತೆ ಸರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಗಣರಾಜ್ಯೋತ್ಸವ ದಿನ (ಜ. 26) ಬೆಳ್ಳಿ ಪದಕ ನೀಡಿ ಗೌರವಿಸಲಿದೆ.

‘ನಿತ್ಯ 8,750 ಬಸ್ಸುಗಳು 28.95 ಲಕ್ಷ ಕಿ.ಮೀ ಕಾರ್ಯಾಚರಣೆ ನಡೆಸುತ್ತಿದ್ದು, 29 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಶ್ರದ್ಧೆ ಮತ್ತು ದಕ್ಷತೆಯಿಂದ ಕರ್ತವ್ಯ ಸಲ್ಲಿಸುವ ಚಾಲಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮತ್ತು ಉಳಿದವರಿಗೆ ಮಾದರಿಯಾಗಲಿ ಎಂಬ ಆಶಯದಿಂದ ಈ ರೀತಿ ಗೌರವಿಸಲಾಗುತ್ತಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.

‘ಅಪಘಾತರಹಿತ ಮತ್ತು ಅಪರಾಧರಹಿತವಾಗಿ 5 ವರ್ಷ ಕರ್ತವ್ಯ ಸಲ್ಲಿಸಿದ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರಿಗೆ ‘ಸುರಕ್ಷಾ ಚಾಲಕ’ ಬಿರುದು ಮತ್ತು ಗಂಡಭೇರುಂಡ ಲಾಂಛನ ಇರುವ 32 ಗ್ರಾಂನ ಬೆಳ್ಳಿಪದಕ ನೀಡಲಾಗುತ್ತಿದೆ. ಅಲ್ಲದೆ ₹ 2 ಸಾವಿರ ನಗದು ಮತ್ತು ಮುಂದಿನ ದಿನಗಳಲ್ಲೂ ಇದೇ ರೀತಿ ಕರ್ತವ್ಯ ನಿರ್ವಹಿಸುವಂತೆ ಪ್ರೋತ್ಸಾಹಿಸಲು ಪ್ರತಿ ತಿಂಗಳು ₹ 50 ಮಾಸಿಕ ಭತ್ಯೆ ನೀಡಲಾಗುವುದು‘ ಎಂದೂ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !