ಬೆಂಗಳೂರು: ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಪ್ರಾಧ್ಯಾಪಕರ ಸೇವಾ ಹಿರಿತನ ಪರಿಗಣಿಸುವಲ್ಲಿ ತಾರತಮ್ಯ ಆಗಿದೆ ಎಂದು ಆರೋಪಿಸಿ ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಪರಿಷತ್ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಬಳಿ ಸೋಮವಾರ ಸಾಂಕೇತಿಕ ಧರಣಿ ನಡೆಯಿತು.

ನೇರವಾಗಿ ನೇಮಕಗೊಂಡ ಪ್ರಾಧ್ಯಾಪಕರು ಹಾಗೂ ವೃತ್ತಿ ಸುಧಾರಣಾ ಯೋಜನೆಯಡಿಯಲ್ಲಿ (ಸಿಎಎಸ್) ಬಡ್ತಿ ಪಡೆದ ಪ್ರಾಧ್ಯಾಪಕರ ಹಿರಿತನವನ್ನು ಗುರುತಿಸುವಲ್ಲಿ ಕೇಂದ್ರ, ರಾಜ್ಯಗಳ ಇತರ ನಿಯಮಗಳೇ ಅನ್ವಯವಾಗಬೇಕು. ಎಂಜಿನಿಯರಿಂಗ್ ಮತ್ತು ಇತರ ವಿಭಾಗಗಳ ಪ್ರೊಫೆಸರ್ಗಳ ಹಿರಿತನ ವಿಷಯ ಅಂತಿಮಗೊಳಿಸಲು ನ್ಯಾಯಾಂಗ ಸಮಿತಿ ರಚಿಸಬೇಕು ಎಂಬ ಮನವಿಯನ್ನು ಧರಣಿ ನಿರತರು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅವರಿಗೆ ಸಲ್ಲಿಸಿದರು.ಪರಿಷತ್ನ ಅಧ್ಯಕ್ಷ ಡಾ.ಎಂ.ಮುನಿರಾಜಪ್ಪ, ಉಪಾಧ್ಯಕ್ಷ ಡಾ.ಬಿ.ಶಾಂತವೀರನಗೌಡ ನೇತೃತ್ವ ವಹಿಸಿದ್ದರು.

ಕ್ರಮಬದ್ಧ: ಇದೀಗ ಪ್ರಕಟಿಸಿರುವ ಸೇವಾ ಹಿರಿತನ ಪಟ್ಟಿ ಕ್ರಮಬದ್ಧವಾಗಿದೆ. ಅನ್ಯಾಯವಾಗಿದೆ ಎಂಬ ಭಾವನೆ ಇದ್ದರೆ ನ್ಯಾಯಾಲಯಕ್ಕೆ ಹೋಗಲು ಮುಕ್ತ ಅವಕಾಶ ಇದೆ ಎಂದು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.