ಬೆಣ್ಣೆ ಹಣ್ಣಿನ ಗಿಡಗಳಿಗೆ ಹೆಚ್ಚಿದ ಬೇಡಿಕೆ

ಗುರುವಾರ , ಜೂನ್ 27, 2019
23 °C
ಕಿತ್ತಳೆ ಜಾಗಕ್ಕೆ ಹೊಸ ಹಣ್ಣು; ಕಾಫಿ ತೋಟಗಳಲ್ಲೂ ಸ್ಥಾನ

ಬೆಣ್ಣೆ ಹಣ್ಣಿನ ಗಿಡಗಳಿಗೆ ಹೆಚ್ಚಿದ ಬೇಡಿಕೆ

Published:
Updated:
Prajavani

ನಾಪೋಕ್ಲು: ಹಣ್ಣಿನ ಗಿಡಗಳನ್ನು ಬೆಳೆಯಲು ರೈತರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಖಾಲಿ ಜಾಗಗಳಲ್ಲಿ, ಕಾಫಿ ತೋಟಗಳಲ್ಲಿ ಅಂತರ ಬೆಳೆಯಾಗಿ ಹಣ್ಣಿನ ಗಿಡ ಬೆಳೆಯಲು ಮುಂದಾಗುತ್ತಿರುವವರ ಸಂಖ್ಯೆ ಹೆಚ್ಚಿದೆ.

ಬಾಳೆ, ಅನಾನಸು, ಸಪೋಟ, ಕಿತ್ತಳೆ ಮತ್ತಿತರ ಹಣ್ಣುಗಳ ಜತೆಗೆ ರಾಂಬುಟನ್, ಲಿಚಿ ಮುಂತಾದ ಹಣ್ಣುಗಳನ್ನು ಬೆಳೆಯಲು ರೈತರು ಮುಂದಾಗಿದ್ದಾರೆ. ಜಿಲ್ಲೆಯ ಹವಾಮಾನದಲ್ಲಿ ಈ ಹಣ್ಣುಗಳು, ಉತ್ತಮ ಇಳುವರಿಯನ್ನು ನೀಡುತ್ತಿರುವುದು ರೈತರ ಆಸಕ್ತಿಯನ್ನು ದುಪ್ಪಟ್ಟುಗೊಳಿಸಿದೆ.

ಈ ಹಣ್ಣುಗಳ ಜತೆಗೆ ಬೆಣ್ಣೆ ಹಣ್ಣಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಈಚೆಗಿನ ದಿನಗಳಲ್ಲಿ ಬೆಣ್ಣೆ ಹಣ್ಣಿನ ಗಿಡಗಳನ್ನು ಬೆಳೆಯುವಲ್ಲಿ ರೈತರು ಉತ್ಸುಕರಾಗಿದ್ದಾರೆ. ಕಾಫಿ ತೋಟಗಳಲ್ಲಿ ಕಿತ್ತಳೆಯನ್ನು ಉಪ ಬೆಳೆಯಾಗಿ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಗ್ರೇನಿಂಗ್ ರೋಗದಿಂದಾಗಿ ಕಿತ್ತಳೆ ಬಹುತೇಕ ತೋಟಗಳಲ್ಲಿ ಅವನತಿಯತ್ತ ಸಾಗಿದ್ದು, ಇದೀಗ ಇತರ ಹಣ್ಣುಗಳು ಆ ಜಾಗವನ್ನು ಆಕ್ರಮಿಸುತ್ತಿವೆ.

ಬೆಣ್ಣೆ ಹಣ್ಣು ಈಚೆಗಿನ ದಿನಗಳಲ್ಲಿ ಬೇಡಿಕೆ ಪಡೆದುಕೊಂಡಿರುವುದು ಕೃಷಿಕರ ಆಸಕ್ತಿಯನ್ನು ಹೆಚ್ಚಿಸಿದೆ. ನರ್ಸರಿಗಳಲ್ಲೂ ಬೆಣ್ಣೆ ಹಣ್ಣಿನ ಗಿಡಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುತ್ತಿದೆ. ರೈತರಿಂದಲೂ ಈ ಹಣ್ಣಿನ ಗಿಡಗಳಿಗೆ ಅಧಿಕ ಬೇಡಿಕೆಯಿದೆ.

ಬೀಜದಿಂದ ತಯಾರಿಸಿದ ಗಿಡವೊಂದು ₹ 60ರಿಂದ ₹ 80ರ ದರದಲ್ಲಿ ಸಿಗುತ್ತಿದೆ. ಕಸಿ ಗಿಡಗಳಿಗೆ ₹ 120ರ ಬೆಲೆಯಿದೆ. ಚೆಟ್ಟಳ್ಳಿಯ ಖಾಸಗಿ ನರ್ಸರಿಯೊಂದರಲ್ಲಿ ಪ್ರತಿ ವರ್ಷ 5000 ಬೆಣ್ಣೆ ಹಣ್ಣಿನ ಗಿಡಗಳನ್ನು ಬೆಳೆಯಲಾಗುತ್ತಿದ್ದು, ಎಲ್ಲವೂ ಮಾರಾಟವಾಗುತ್ತಿವೆ.

‘ಪುತ್ತೂರಿನ ಕೃಷಿಕರೊಬ್ಬರು 4000 ಗಿಡಗಳಿಗೆ ಬೇಡಿಕೆ ಕೊಟ್ಟಿದ್ದಾರೆ. ಆಗಸ್ಟ್ ತಿಂಗಳಲ್ಲಿ ಪೂರೈಸಬೇಕಿದೆ. ಬೀಜದಿಂದ ಬೆಳೆದ ಗಿಡಗಳು, ನಾಲ್ಕೈದು ವರ್ಷಗಳಲ್ಲಿ ಇಳುವರಿ ಕೊಟ್ಟರೆ, ಕಸಿ ಗಿಡಗಳು ಬಲುಬೇಗನೇ 2-3 ವರ್ಷಗಳಲ್ಲಿ ಫಲ ನೀಡುತ್ತವೆ. ಹೆಚ್ಚು ಪ್ರಮಾಣದಲ್ಲಿ ಬೆಣ್ಣೆ ಹಣ್ಣು ಬೆಳೆದವರಿದ್ದರೆ, ಒಂದು ಕೆ.ಜಿ. ಹಣ್ಣಿಗೆ ₹ 80ರಿಂದ ₹ 100 ನೀಡಿ ಖರೀದಿಸುವುದಾಗಿ’ ಪೊನ್ನತ್ ಮೊಟ್ಟೆಯ ಹಸಿರು ನರ್ಸರಿಯ ಮಾಲೀಕ ಆನಂದ್ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !