ಶನಿವಾರ, ಸೆಪ್ಟೆಂಬರ್ 18, 2021
28 °C

ಬೇಸಿಗೆ ಬಿಸಿಲು

ಲಲಿತಾ ಕೆ. ಹೊಸಪ್ಯಾಟಿ Updated:

ಅಕ್ಷರ ಗಾತ್ರ : | |

Prajavani

ಆಗಸದಲ್ಲಿ
ಸೂರ್ಯನ ಠಾವು
ಏರಿದೆ ನೆಲದಲಿ ಬಿಸಿಲಿನ ಕಾವು

ಬೇಸಿಗೆ ಬಿಸಿಲಿಗೆ
ಸುಟ್ಟಿದೆ ನೆತ್ತಿಯು
ಹರಿದಿದೆ ಮೊಗದಲಿ ದಳದಳ ಬೆವರು

ಅಲುಗಾಡದೆ
ನಿಂತಿದೆ ಗಿಡಮರಗಳು
ಓಡಿದೆ ದೂರಕೆ ತಣ್ಣನೆ ಗಾಳಿಯು

ನಿತ್ಯವು ಸೆಕೆ ಸೆಕೆ
ಒಳಗು ಹೊರಗು
ಉರಿದಿದೆ ಮೈಕೈ ಚುರು ಚುರು

ಉಸುಕಿನ ಹೊಂಡ
ಹರಿಯುವ ಹೊಳೆಯು
ಬತ್ತಿದೆ ಬಾವಿಯ ನೀರಿನ ಸೆಲೆಯು

ಝರಿ ತೊರೆ ಹಳ್ಳದಿ
ತುಂಬದು ಬೊಗಸೆ
ಬುಗಿಲೆದ್ದಿದೆ ನೀರಿಗೆ ಹಾಹಾಕಾರವು

ದುಡ್ಡು ಕೊಟ್ಟರು
ಸಿಗದೆ ಹೋಗಿದೆ
ಮೊಸರು ಮಜ್ಜಿಗೆ ಶರಬತ್ತು

ಐಸ್ಕ್ರೀಮ್‍ವಾಲಾ
ಗಂಟೆ ಹೊಡೆದರೆ
ಮುಗಿಬಿದ್ದು ತಿನುವರು ಹತ್ತತ್ತು

ಒಣಗಿದ ಗಂಟಲು
ತಂಪಾಗುವುದು
ಕುಡಿದರೆ ಒಂದು ಎಳೆನೀರು

ಅಜ್ಜಿಯು ಬೆಳೆಸಿದ
ತೆಂಗಿನ ಮರದಲಿ
ನೂರಿವೆ ಕಾಯಿ ಏನ್ಬಂತು

ಉಂಡರು ಉಟ್ಟರು
ಕುಂತರು ಎದ್ದರು
ಹೊಟ್ಟೆಲಿ ತುಂಬಿದೆ ಸಂಕಟವು

ಬಿಸಿಲಿನ ತಾಪಕೆ
ದಾರಿ ದಾರಿಗೂ
ಇರಬೇಕಿತ್ತು ಗಿಡಮರವು

ಮದುವೆ ದಿಬ್ಬಣ
ತೇರಿನ ಜಾತ್ರೆ
ರಜೆಯ ಸಂಭ್ರಮ ಬೇಸಿಗೆಗೆ

ಬೇಸಿಗೆ ಬಿಸಿಲಿಗೆ
ಸುರಿದರೆ ಜಡಿಮಳೆ
ತಂಪು ತಂಪು ಮೈಮನಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.