ವಿಜಯಪುರ:‘ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್–ಕಾಂಗ್ರೆಸ್ನ ಮೈತ್ರಿ ಅಭ್ಯರ್ಥಿ ಪರವಾಗಿ, ಎಲ್ಲೆಡೆ ಹಣದ ಹೊಳೆ ಹರಿಸಿದರೂ; ಗೆಲುವು ನಮ್ಮದೇ’ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಶಿವಶರಣೆ ನೀಲೂರ ನಿಂಬೆಕ್ಕ ಮಂಗಲ ಕಾರ್ಯಾಲಯದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು ‘ಚುನಾವಣೆಯಲ್ಲಿ ಬಿಜೆಪಿ ಯಾವುದೇ ಆಮಿಷ ಒಡ್ಡದೆ ಹೋರಾಟ ನಡೆಸಿದೆ. ಇದರಲ್ಲಿ ನಮ್ಮ ಜಯ ನಿಶ್ಚಿತ. ಹಣ, ದುಷ್ಟಶಕ್ತಿ ವಿರುದ್ಧ, ಅಭಿವೃದ್ಧಿ ಪರವಾಗಿ ನಾವು ಎದುರಿಸಿದ ಚುನಾವಣೆಯಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ’ ಎಂದರು.

‘ಭೀಕರ ಬರ, ಬಿಸಿಲು, ಕುಡಿಯುವ ನೀರಿನ ಸಮಸ್ಯೆ ನಡುವೆಯೂ ಬಿಜೆಪಿ ಕಾರ್ಯಕರ್ತರು ಜಿಲ್ಲೆಯಾದ್ಯಂಥಹ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. 2019ರ ಲೋಕಸಭೆ ಚುನಾವಣೆ ಐತಿಹಾಸಿಕ ಚುನಾವಣೆ. ದೇಶದ ರಕ್ಷಣೆ, ಸುರಕ್ಷತೆ, ಅಭಿವೃದ್ಧಿ ಕಾಳಜಿಯಿಂದ ಜನ ಈ ಚುನಾವಣೆಯಲ್ಲಿ ಭಾಗಿಯಾಗಿದ್ದಾರೆ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರಧಾನಿ ಮೋದಿ ಅಲೆಯಿದೆ. ದೇಶದ ಇತಿಹಾಸದಲ್ಲೇ ಇಂಥಹ ಅಲೆ ಇರಲಿಲ್ಲ. ದೇಶದ ಅಭಿವೃದ್ಧಿಗಾಗಿ ಜನರು ಮೋದಿ ಪರ ಮತ ಚಲಾಯಿಸಿದ್ದಾರೆ. ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬ ಸಂಕಲ್ಪದೊಂದಿಗೆ ಜಾತಿ, ಮತ, ಪಂಥ ಮರೆತು ಬಿಜೆಪಿ ಬೆಂಬಲಿಸಿದ್ದಾರೆ’ ಎಂದು ಕಾರಜೋಳ ಹೇಳಿದರು.

ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ‘ಕಾಂಗ್ರೆಸ್ನವರು ಪ್ರತಿ ಗ್ರಾಮದಲ್ಲೂ ಹಣ ಹಂಚಿದ್ದರೂ, ಬಿಜೆಪಿ ಗೆಲುವು ನಿಶ್ಚಿತ. ಈ ಬಾರಿ ಕ್ಷೇತ್ರದಲ್ಲಿ ಎಲ್ಲೆಡೆ ಮೋದಿ ಅಲೆ ಇತ್ತು. ಬಬಲೇಶ್ವರ ವಿಧಾನಸಭೆ ಕ್ಷೇತ್ರದಿಂದ ಹೆಚ್ಚಿನ ಮತಗಳ ಅಂತರ ದೊರಕಿರುವುದು ಖಚಿತ’ ಎಂದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮುಖಂಡರಾದ ಸಂಗರಾಜ ದೇಸಾಯಿ, ಆರ್.ಎಸ್.ಪಾಟೀಲ ಕೂಚಬಾಳ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮಲ್ಲಮ್ಮ ಜೋಗೂರ, ಜಿ.ಪಂ.ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಿವೇಕಾನಂದ ಡಬ್ಬಿ, ರವಿಕಾಂತ ಬಗಲಿ, ಗೂಳಪ್ಪ ಶಟಗಾರ ಸಭೆಯಲ್ಲಿ ಉಪಸ್ಥಿತರಿದ್ದರು.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್.ಪಾಟೀಲ ನಡಹಳ್ಳಿ, ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ, ಹಣಮಂತ ನಿರಾಣಿ ಸೇರಿದಂತೆ ಅನೇಕರು ಗೈರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.