ಸಿದ್ದರಾಮಯ್ಯ ಸಿಎಂ ಆಗಲು ದೇವೇಗೌಡ ಬಿಡಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಭಾನುವಾರ, ಮೇ 26, 2019
32 °C

ಸಿದ್ದರಾಮಯ್ಯ ಸಿಎಂ ಆಗಲು ದೇವೇಗೌಡ ಬಿಡಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ

Published:
Updated:

ವಿಜಯಪುರ: ‘ಸಿದ್ದರಾಮಯ್ಯ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲು ದೇವೇಗೌಡರು ಬಿಡಲ್ಲ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಕಾಂಗ್ರೆಸ್‌ಗೆ ಬಹುಮತವಿಲ್ಲ. ಬದಲಾದ ಕಾಲಘಟ್ಟದಲ್ಲೂ ದೇವೇಗೌಡರು ಕಾಂಗ್ರೆಸ್‌ಗೆ ಬೆಂಬಲ ನೀಡಲ್ಲ. ಅವರೇನಿದ್ದರೂ ತಮ್ಮ ಕುಟುಂಬದ ಹಿತ ಕಾಯುವವರಷ್ಟೇ’ ಎಂದು ಭಾನುವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

‘ಮೇ 23ರ ತನಕ ಸರ್ಕಾರದ ಅಸ್ಥಿರ ತಪ್ಪಿಸಲಿಕ್ಕಾಗಿಯೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರೆಸಾರ್ಟ್‌ಗೆ ಮೊರೆ ಹೋಗಿದ್ದಾರೆ’ ಎಂದು ಲೇವಡಿ ಮಾಡಿದರು.

‘ಉತ್ತರ ಕರ್ನಾಟಕದ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್‌ ಹಸ್ತಕ್ಷೇಪ ನಡೆಸುವುದು ಸರಿಯಲ್ಲ. ಇಲ್ಲಿ ನಾವೇ ಸಾಕಷ್ಟು ಮಂದಿ ಇದ್ದೇವೆ. ಮೊದಲು ಈ ಭಾಗದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಿ’ ಎಂದು ಬಸನಗೌಡ ಹೇಳಿದರು.

‘ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾದ ಬಳಿಕ ಇಲ್ಲಿನ ಬಹುತೇಕ ನೀರಾವರಿ ಯೋಜನೆಗಳ ಕಾಮಗಾರಿಗಳು ಸ್ಥಗಿತಗೊಂಡಿವೆ. ಕಮಿಷನ್‌ ಕೇಳುತ್ತಿರುವುದರಿಂದ ಗುತ್ತಿಗೆದಾರರ ಬಿಲ್‌ಗಳು ಮಂಜೂರಾಗದಾಗಿವೆ’ ಎಂದು ಯತ್ನಾಳ ದೂರಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !