ಶ್ರೀ ವಿಜಯ ಪುರಂ: ಉತ್ತರ ಹಾಗೂ ಮಧ್ಯ ಅಂಡಮಾನ್ ಜಿಲ್ಲೆಯ ರಂಗತ್ನಿಂದ ಹೊರಟಿದ್ದ ಪವನ್ ಹಂಸ್ ಸಂಸ್ಥೆಯ ಹೆಲಿಕಾಪ್ಟರ್ವೊಂದು ಮಂಗಳವಾರ ಸಮುದ್ರದಲ್ಲಿ ಪತನಗೊಂಡಿದ್ದು, ಹೆಲಿಕಾಪ್ಟರ್ನಲ್ಲಿದ್ದ 7 ಮಂದಿಯನ್ನು ರಕ್ಷಿಸಲಾಗಿದೆ.

ಮಾಯಾಬಂದರ್ನಲ್ಲಿ ಹೆಲಿಕಾಪ್ಟರ್ ಇಳಿಯಬೇಕಿತ್ತು. ಅದಕ್ಕೂ ಮುನ್ನ ಬೆಳಿಗ್ಗೆ 9.30ರ ಸುಮಾರಿಗೆ ಸಮುದ್ರದ ಮಧ್ಯೆ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ಹೆಲಿಕಾಪ್ಟರ್ನಲ್ಲಿದ್ದ ಇಬ್ಬರು ಸಿಬ್ಬಂದಿ ಮತ್ತು ಐವರು ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

‘ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಉಂಟಾಗಿರಬಹುದು ಮತ್ತು ಪೈಲಟ್ ಸಮುದ್ರದ ಮೇಲೆ ಕ್ರಾಶ್ ಲ್ಯಾಂಡಿಂಗ್ ಮಾಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ’ ಎಂದು ಹೇಳಿದರು.

‘ಕರಾವಳಿ ಗಸ್ತು ಪಡೆಯ ಕ್ಷಿಪ್ರ ಪ್ರತಿಕ್ರಿಯೆಯಿಂದಾಗಿ ಎಲ್ಲಾ ಪ್ರಯಾಣಿಕರು ಮತ್ತು ಪೈಲಟ್ಗಳನ್ನು ರಕ್ಷಿಸಲು ಸಾಧ್ಯವಾಗಿದೆ’ ಎಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಡಿಜಿಪಿ ಹರಗೋವಿಂದರ್ ಸಿಂಗ್ ಧಾಲೀವಾಲ್ ತಿಳಿಸಿದರು.
.ಎವರೆಸ್ಟ್ ಏರಬಲ್ಲ ಹೆಲಿಕಾಪ್ಟರ್ ಕಾರ್ಖಾನೆ ಬೆಂಗಳೂರಲ್ಲಿ; ಚಾಲನೆ ನೀಡಲಿರುವ ಸಿಂಗ್.ಹೆಲಿಕಾಪ್ಟರ್ನಲ್ಲಿ ಚಾಲುಕ್ಯರ ಸ್ಮಾರಕಗಳ ವೀಕ್ಷಣೆಗೆ ಅವಕಾಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.