ನದಿಯಲ್ಲಿ ಮುಳುಗಿ ಬಾಲಕ ಸಾವು

ಭಾನುವಾರ, ಏಪ್ರಿಲ್ 21, 2019
26 °C

ನದಿಯಲ್ಲಿ ಮುಳುಗಿ ಬಾಲಕ ಸಾವು

Published:
Updated:

ತಿಕೋಟಾ: ತಾಲ್ಲೂಕಿನ ಕನಮಡಿ ಗ್ರಾಮದ ಬಾಲಕ, ಎಂಟನೇ ತರಗತಿ ವಿದ್ಯಾರ್ಥಿ ಪ್ರಶಾಂತ ಕಲ್ಲಪ್ಪ ನಾಟಿಕಾರ (15) ಚಿಕ್ಕಪಡಸಲಗಿ ಹತ್ತಿರ ಕೃಷ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಕನಮಡಿ ಗ್ರಾಮದ ಕೆಂಚರಾಯ ದೇವರ ಮೂರ್ತಿಯ ಹೊಳೆ ಸ್ನಾನಕ್ಕಾಗಿ, ಪ್ರತಿ ವರ್ಷದಂತೆ ಈ ಬಾರಿಯೂ ಯುಗಾದಿ ಅಮಾವಾಸ್ಯೆಯಂದು ತೆರಳಲಾಗಿತ್ತು. ಆ ಸಂದರ್ಭ ಈ ಘಟನೆ ನಡೆದಿದೆ.

ದೇವರ ಸ್ನಾನದ ಬಳಿಕ ಪೂಜೆಗಾಗಿ ಪ್ರಶಾಂತ ನದಿಯಲ್ಲಿ ಮೀಯಲು ಹೋದಾಗ ನೀರಿನ ಸುಳಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆ ಎಂದು ನೆರೆಯ ಬಾಗಲಕೋಟೆ ಜಿಲ್ಲೆಯ ಸಾವಳಗಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಪಘಾತ; ಯುವಕನಿಗೆ ಗಾಯ

ತಿಕೋಟಾ ತಾಲ್ಲೂಕಿನ ಘೊಣಸಗಿ ಗ್ರಾಮದ ಬಳಿ ಲಘು ಅಪಘಾತವಾಗಿದ್ದು, ಗ್ರಾಮದ ಸೋಮನಿಂಗ ಪೂಜೇರಿ (28) ಗಾಯಗೊಂಡು, ಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದಾರೆ.

ಗುಡ್ಡಾಪುರಕ್ಕೆ ತೆರಳುವ ರಸ್ತೆಯಲ್ಲಿ ಬೈಕ್‌ ಚಾಲಕ, ಕಾರಿನ ನಡುವೆ ಅಪಘಾತ ನಡೆದಿದೆ. ಗಾಯಾಳುವನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !