ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

15 ನಿಮಿಷ ಚಾರ್ಜ್‌ ಮಾಡಿ ದಿನವಿಡೀ ಫೋನ್‌ ಬಳಸಬಹುದೇ? 'Redmi Note 11'ನಲ್ಲಿದು ಸಾಧ್ಯ. ಹೇಗೆ? ಓದಲು ಕ್ಲಿಕ್‌ ಮಾಡಿ

Last Updated 8 ಮಾರ್ಚ್ 2022, 13:54 IST
ಅಕ್ಷರ ಗಾತ್ರ

ಬೃಹತ್‌ ತಂತ್ರಜ್ಞಾನ ಸಂಸ್ಥೆ ಶಓಮಿ 'ಫಾಸ್ಟ್‌ ಚಾರ್ಜಿಂಗ್‌' ವ್ಯವಸ್ಥೆಯನ್ನು ರೂಪಿಸುವುದಲ್ಲಿ ಮುಂಚೂಣಿಯಲ್ಲಿದೆ. ಇತ್ತೀಚೆಗಷ್ಟೇ 'Xiaomi 11ಐ' ಮಾದರಿಯ ಮೂಲಕ ಕ್ಷಿಪ್ರ ಚಾರ್ಜಿಂಗ್‌ ವ್ಯವಸ್ಥೆಯನ್ನು ಪರಿಚಯಿಸಿದೆ. ಇದೀಗ 'Redmi Note 11 Pro' ಸರಣಿಯಲ್ಲಿ ವೇಗದ ಚಾರ್ಜಿಂಗ್‌ ವ್ಯವಸ್ಥೆಯನ್ನು ಮುಂದುವರಿಸಲು ಸಜ್ಜಾಗಿದೆ.

ಉತ್ತಮವನ್ನು ಅತ್ಯುತ್ತಮವಾಗಿಸುವ ಭರವಸೆಯೊಂದಿಗೆ ರೆಡ್‌ಮಿ #RedmiNote11Pro ಸರಣಿಯ ಫೋನ್‌ಗಳನ್ನು ಪರಿಚಯಿಸಲು ಮುಂದಾಗಿದೆ.

ಪ್ರಾಮಾಣಿಕ ದರದೊಂದಿಗೆ ಅತ್ಯುತ್ತಮ ತಂತ್ರಜ್ಞಾನವನ್ನು ಒದಗಿಸುವುದಕ್ಕೆ ಹೆಸರಾಗಿರುವ Redmi ಈಗ ತನ್ನ ಹೊಸ ಸಾಧನದಲ್ಲಿ 67W ಟರ್ಬೋ ಚಾರ್ಜ್ ವ್ಯವಸ್ಥೆಯನ್ನು ಪರಿಚಯಿಸಿದ್ದು, ಇದು ಈ ವರ್ಗದಲ್ಲೇ ಅತ್ಯಂತ ವೇಗವಾದ ಚಾರ್ಜಿಂಗ್ ತಂತ್ರಜ್ಞಾನವಾಗಿದೆ.

Redmi Note 11 ಪ್ರೊ ಪ್ರತಿ ವಿಭಾಗದಲ್ಲಿ ತನ್ನ ಛಾಪು ಬೀರುವ ನಿರೀಕ್ಷೆಯಿದೆ. Redmi Note 11 Pro ಸರಣಿಯಲ್ಲಿ ಅತ್ಯದ್ಭುತ AMOLED ಸ್ಕ್ರೀನ್ ಇರಲಿದ್ದು, ಅತ್ಯುತ್ತಮ ವರ್ಣ ವ್ಯವಸ್ಥೆ ಮತ್ತು ಖಚಿತ ಬಣ್ಣಗಳನ್ನು ನಿಖರವಾಗಿ ಪ್ರದರ್ಶಿಸುತ್ತದೆ. ಔದ್ಯಮಿಕ ಮಾನದಂಡಗಳ ಪ್ರಕಾರ, ಗರಿಷ್ಠ ರೆಸಲ್ಯುಷನ್‌ನ ಇಮೇಜ್ ಸೆನ್ಸರ್ ಆಗಿರುವ 108MP ಪ್ರಧಾನ ಕ್ಯಾಮೆರಾವು ಕೇವಲ ಫ್ಲ್ಯಾಗ್‌ಶಿಪ್ ವೈಶಿಷ್ಟ್ಯವಷ್ಟೇ ಅಲ್ಲದ, ಈ ಬೆಲೆಯ ಶ್ರೇಣಿಯಲ್ಲಿ ಬೇರೆಲ್ಲೂ ಸಿಗುವುದು ಕಷ್ಟ.

120Hz ರಿಫ್ರೆಶ್ ರೇಟ್ ಇರುವ ಡಿಸ್‌ಪ್ಲೇ ಸುಲಲಿತವಾಗಿ ಮತ್ತು ಸೂಪರ್ ಫಾಸ್ಟ್ ಆಗಿ ಗಮನ ಸೆಳೆಯುತ್ತದೆ. ಆಂತರಿಕವಾಗಿ ಯಾವುದೇ ರೀತಿಯ ವಿಳಂಬವಾಗಲೀ ಅನಿಮೇಶನ್ ವಿಳಂಬವಾಗಲೀ, ಇರುವುದಿಲ್ಲ. 1200 ನಿಟ್ಸ್ ಸಾಮರ್ಥ್ಯದ ಬೆಳಕಿನ ಪ್ರಖರತೆ ಮತ್ತು ರೀಡಿಂಗ್ ಮೋಡ್ 3.0 ವ್ಯವಸ್ಥೆಯು ಹೆಚ್ಚು ಬಿಸಿಲಿರುವ ಪರಿಸ್ಥಿತಿಯಲ್ಲಿಯೂ ಓದುವುದನ್ನು ಹಿತವಾಗಿಸುತ್ತದೆ.

ಈ ರೀತಿಯ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ, Redmi Note 11 Pro ಸರಣಿಯು ಕೇವಲ 15 ನಿಮಿಷ ಚಾರ್ಜ್ ಮಾಡಿದರೆ ಇಡೀ ದಿನಕ್ಕೆ ಸಾಕಾಗುತ್ತದೆ. ಹೀಗಾಗಿ ಇದೊಂದು ಪರಿಪೂರ್ಣ ಪ್ಯಾಕೇಜ್‌ನಂತಿದೆ ಮತ್ತು ನಮ್ಮಲ್ಲಿರುವ ಅತ್ಯುತ್ತಮ ಫೋನ್ ಎಂಬ ಭಾವನೆ ಮೂಡಿಸುತ್ತದೆ.

ತೀವ್ರ ಪೈಪೋಟಿ ಇರುವ ಸ್ಮಾರ್ಟ್‌ಫೋನ್‌ ವಲಯದಲ್ಲಿ ಗ್ರಾಹಕರ ನಿರೀಕ್ಷೆಗಳನ್ನು ಪೂರ್ಣಗೊಳಿಸುವುದು ಹೇಗೆಂದು Redmi ತೋರಿಸಿಕೊಡುತ್ತಿದೆ!

#RedmiNote11Pro ಸರಣಿಯ ಫೋನ್‌ಅನ್ನು ಇಡೀ ದಿನ ಬಳಸಲು ಕೇವಲ 15 ನಿಮಿಷ  ಚಾರ್ಜ್‌ ಮಾಡಿದರೆ ಸಾಕು.

ಸದಾ ಹೊಸ ಮೈಲಿಗಲ್ಲು ಸೃಷ್ಟಿಸುವ ಹೆಗ್ಗಳಿಕೆ ಹೊಂದಿರುವ Redmi Note ಸರಣಿಯ ಫೋನ್‌ಗಳು, ಈಗ ಮತ್ತೆ ಭಾರತದ ಅತ್ಯಂತ ನೆಚ್ಚಿನ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಸರಣಿಯಾಗಿ ಮುಂದುವರಿಯಲು ಅಣಿಯಾಗಿವೆ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT