ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಕ್ರೋಮಾದ 5 ಇನ್ 1 ಕನ್ವರ್ಟಬಲ್ 1.4 ಟನ್ 3-ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎ.ಸಿ. ನ್ಯಾನೊ-ಶೀಲ್ಡ್ ಲೇಪನ ಹಾಗೂ ಸ್ವಯಂಚಾಲಿತ ಸ್ವಿಂಗ್

Published 22 ಮೇ 2023, 11:45 IST
Last Updated 23 ಮೇ 2023, 6:29 IST
ಅಕ್ಷರ ಗಾತ್ರ

ಈ ಎ.ಸಿ.ಯು ವಿಶಿಷ್ಟವಾದ ಅಂಶಗಳನ್ನು ಹೊಂದಿದ್ದು ಮನೆ ಹಾಗೂ ಉದ್ಯೋಗ ನಿರ್ವಹಿಸುವ ಸ್ಥಳದಲ್ಲಿನ  ಗಾಳಿಯ ಗುಣಮಟ್ಟ ಹೆಚ್ಚಿಸಿ ಆರಾಮದಾಯಕ ಅನುಭವ ನೀಡುತ್ತದೆ.

ಬೇಸಿಗೆಯ ಬಿಸಿಲು ದಿನೇ ದಿನೇ ತೀವ್ರವಾಗುತ್ತಿರುವುದು ನಮ್ಮ ಅನುಭವಕ್ಕೆ ಬರುತ್ತಿದೆ. ಈ ಬಿರು ಬೇಸಿಗೆಯ ದಿನಗಳು ಮತ್ತಷ್ಟು ಮುಂದುವರಿಯುವ ಲಕ್ಷಣಗಳು ಕಾಣುತ್ತಿವೆ. ದೇಶದ ಎಲ್ಲ ಕಡೆಯೂ ತಾಪಮಾನ ಹೆಚ್ಚಾಗಿರುವುದು ಕಂಡುಬಂದಿದೆ ಈ ಕಡುಬಿಸಿಲು ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳಂತೂ ಕಾಣುತ್ತಿಲ್ಲ. ಬಿಸಿಲಿನ ಬೇಗೆಯಿಂದ ಪಾರಾಗಲು ಮನೆ ಅಥವಾ ಕಚೇರಿಯಲ್ಲಿ ಏರ್ ಕಂಡೀಷನಿಂಗ್ ವ್ಯವಸ್ಥೆ ಹೊಂದುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯಂತ ಅಗತ್ಯವಾಗಿದೆ. ಈ ರಣಬಿಸಿಲಿನ ಬಿಸಿತಾಪದಿಂದ ರಕ್ಷಿಸಿಕೊಳ್ಳಲು ಹೆಚ್ಚು ಹೆಚ್ಚು ಜನರು ಕ್ರೋಮಾದ ಸ್ಪ್ಲಿಟ್ ಏರ್ ಕಂಡೀಷನರ್ ಗಳನ್ನು ತಮ್ಮ ಮನೆಗಳು ಹಾಗೂ ಕಚೇರಿಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.

ಯಾವುದೇ ಕಚೇರಿಯ ಸ್ಥಳದಲ್ಲಿ ಉತ್ಪಾದಕತೆ ಹೆಚ್ಚಿಸಲು ಮತ್ತು ಮನೆಯಲ್ಲಿ ನಿರಾತಂಕವಾಗಿ ವಿಶ್ರಾಂತಿ ಪಡೆಯಲು ತಂಪಾದ ವಾತಾವರಣ ಅತ್ಯಂತ ಅಗತ್ಯವಾಗಿದೆ. ಹೀಗಾಗಿ  ಇಂದು ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನದ ನಿರ್ದಿಷ್ಟ ವಿಶೇಷತೆಗಳು ಮತ್ತು ಕಾರ್ಯಕ್ಷಮತೆಯ ಮಾನದಂಡಗಳಿಗೆ ಅನುಗುಣವಾದ ಏರ್ ಕಂಡೀಷನರ್ ಪಡೆಯುವುದು ಅತ್ಯಂತ ಸೂಕ್ತವಾಗಿದೆ.

ಕ್ರೋಮಾದ 5 ಇನ್ 1 ಎ.ಸಿ. ಅಷ್ಟೊಂದು ಪರಿಣಾಮಕಾರಿಯಾಗಿರುವುದಾದರು ಹೇಗೆ?

ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಅತ್ಯಾಧುನಿಕ ಏರ್ ಕಂಡೀಷನರ್ ಎಂದರೆ ಕ್ರೋಮಾದ 5 ಇನ್ 1 ಕನ್ವರ್ಟಬಲ್ 1.4 ಟನ್ ಸ್ಪ್ಲಿಟ್ ಏರ್ ಕಂಡೀಷನರ್.ಈ ಏರ್ ಕಂಡೀಷನರ್ 3-ಸ್ಟಾರ್ ರೇಟಿಂಗ್  ಹೊಂದಿದ್ದು ಅತ್ಯಂತ ಹೆಚ್ಚು ವಿದ್ಯುತ್ ಕ್ಷಮತೆಯೊಂದಿಗೆ ವಾತಾವರಣವನ್ನು ಬಹಳ ಬೇಗ ತಂಪಾಗಿಸುತ್ತದೆ. ಅಂದರೆ 170 ಚದರ ಅಡಿ ವಿಸ್ತೀರ್ಣದ  ಕೋಣೆಯನ್ನು ತಂಪಾಗಿಸಲು  ಖರ್ಚಾಗುವ ವಿದ್ಯುತ್ ಕೇವಲ 1,540 ವ್ಯಾಟ್ ಗಳು ಮಾತ್ರ. ಈ ಏರ್ ಕಂಡೀಷನರ್ 100 ಪರ್ಸೆಂಟ್  ಕಾಪರ್ ಕಂಡೆನ್ಸರ್ ಮತ್ತು ಎವಾಪೊರೇಟರ್ ನೊಂದಿಗೆ ಬಂದಿದ್ದು ಅದರೊಂದಿಗಿರುವ ನೀಲಿ ಲೇಪಿತ ಫಿನ್ ಗಳು ಎಸಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಎ ಸಿ   ಹಲವಾರು ವರ್ಷಗಳಕಾಲ ಪರಿಣಾಮಕಾರಿ ತಂಪಿನ ಅನುಭವ  ನೀಡಿ ದೀರ್ಘಬಾಳಿಕೆಯನ್ನೂ ಹೊಂದುತ್ತದೆ.

ಗ್ರಾಹಕರಲ್ಲಿ ಆರಾಮದಾಯಕ ಅನುಭವ ಮತ್ತು ಭರವಸೆಯನ್ನು ಮತ್ತಷ್ಟು ವಿಸ್ತರಿಸಿದ ಈ ಉತ್ಪನ್ನವು ಒಂದು ವರ್ಷ ಸಮಗ್ರ ವಾರೆಂಟಿ ಮತ್ತು 10-ವರ್ಷ ಕಂಪ್ರೆಸರ್ ವಾರೆಂಟಿಯೊಂದಿಗೆ ಬಂದಿದೆ. ಇದರೊಂದಿಗೆ ವಿಸ್ತರಿಸಿದ ವಾರೆಂಟಿಯೂ ಸೇರಿ ಉತ್ಪನ್ನಕ್ಕೆ ಹೆಚ್ಚುವರಿ ರಕ್ಷಣೆ ನೀಡಿದೆ. ಇದರಿಂದಾಗಿ ಉತ್ಪಾದನೆಯ ಎಲ್ಲ ದೋಷಗಳಿಗೂ ಉತ್ಪಾದಕರ ವಾರೆಂಟಿಯ ಆಚೆಗೂ ನೀವು ರಕ್ಷಣೆಯನ್ನು ವಿಸ್ತರಿಸಿಕೊಳ್ಳುವ ಸಾಧ್ಯತೆ ಇದೆ. ಈ ವಿಸ್ತರಿಸಿದ ವಾರೆಂಟಿಯು ಮೂರು ವರ್ಷಗಳವರೆಗೆ ಲಭ್ಯವಿರುತ್ತದೆ. ವಾರೆಂಟಿ ಅವಧಿಯಲ್ಲಿ ರಿಪೇರಿಯಾಗದೇ ಇದ್ದಲ್ಲಿ ಏರ್ ಕಂಡೀಷನರ್ ಬದಲಾಯಿಸಿಕೊಡಲಾಗುತ್ತದೆ- “ಅದನ್ನು ರಿಪೇರಿ ಮಾಡಲಾಗದೇ ಇದ್ದಲ್ಲಿ ಹೊಸದನ್ನೇ ನಾವು ನೀಡುತ್ತೇವೆ” ಎನ್ನುವುದು ಕಂಪನಿಯು ತನ್ನ ಗ್ರಾಹಕರಿಗೆ ನೀಡುತ್ತಿರುವ ಸರಳ ಭರವಸೆಯಾಗಿದೆ. ಈ ಸೇವಾ ಮಾನದಂಡಗಳು ಮತ್ತು ತಂತ್ರಜ್ಞಾನದ ಗುಣಮಟ್ಟದ ಬೆಂಬಲ ಈ ಉತ್ಪನ್ನ ಕೊಳ್ಳಲು ಸೂಕ್ತ ವಾಗಿದೆ.

ಕ್ರೋಮಾ 5 ಇನ್ 1 ಕನ್ವರ್ಟಬಲ್ 1.4 ಟನ್ ಎ.ಸಿ. ಏಕೆ ಖರೀದಿಸಬೇಕು?

ಉತ್ತಮ ಏರ್ ಕಂಡೀಷನರ್ ಉನ್ನತ ದಕ್ಷತೆ ನೀಡಬೇಕು ಮತ್ತು ಕಡಿಮೆ ವಿದ್ಯುತ್ ಬಳಸಬೇಕು. ಹಲವು ವರ್ಷಗಳ ಕಾಲ ಚೆನ್ನಾಗಿ ಕಾರ್ಯ ನಿರ್ವಹಿಸಬೇಕು ಮತ್ತು ನಿಶ್ಚಿತ ಮಾರಾಟ ನಂತರದ ಸೇವೆಯೊಂದಿಗೆ ಬರಬೇಕು.

ಈ ಉತ್ಪನ್ನದ‍ಲ್ಲಿ ಇನ್ವರ್ಟರ್ ರೋಟರಿ ಕಂಪ್ರೆಸರ್ ಇದ್ದು ಅದು ಹೆಚ್ಚಿನ ದಕ್ಷತೆಯೊಂದಿಗೆ ಕೆಲಸ ಮಾಡುತ್ತದೆ ಮತ್ತು ಕಡಿಮೆ ವಿದ್ಯುತ್ ಬಳಸಿ ಬಲವಾದ, ಸತತ ತಂಗಾಳಿಯ ಹರಿವನ್ನು ನೀಡುತ್ತದೆ. 1.4 ಟನ್ ಸಾಮರ್ಥ್ಯವು ವಾತವರಣವನ್ನು ತಕ್ಷಣ ತಂಪಾಗಿಸುತ್ತದೆ. ಈ ಏರ್ ಕಂಡೀಷನರ್ ಆರ್32 ರೆಫ್ರಿಜಿರೆಂಟ್ ಹೊಂದಿದ್ದು ಅದು ಯಾವುದೇ ಬಗೆಯಲ್ಲಿ ಓಝೋನ್ ಗೆ ಹಾನಿಯುಂಟು ಮಾಡುವುದಿಲ್ಲ ಮತ್ತು ಅದೇ ಸಮಯಕ್ಕೆ ಸುತ್ತಮುತ್ತಲೂ ಹೆಚ್ಚಿನ ಉಷ್ಣತೆಯಿದ್ದರೂ ಅದನ್ನು ಉತ್ತಮವಾಗಿ ತಂಪಾಗಿಸುತ್ತದೆ. ಈ ಉತ್ಪನ್ನದ ಸಂಪೂರ್ಣ ತಾಮ್ರದ ಕಂಡೆನ್ಸರ್ ಮತ್ತು ಎವಾಪೊರೇಟರ್ ಕಾಯಿಲ್ ಗಳು ಏರ್ ಕಂಡೀಷನರ್ನ  ಕಾರ್ಯಕ್ಷಮತೆ ಹೆಚ್ಚಿಸಿ ದೀರ್ಘಬಾಳಿಕೆಯನ್ನು ನೀಡುತ್ತವೆ. ಈ ಏರ್ ಕಂಡೀಷನರ್ ಉತ್ತಮ ರೀತಿಯಲ್ಲಿ ಉಷ್ಣತೆ ವಿನಿಮಯ ನೀಡುತ್ತದೆ ಮತ್ತು ತಂಪಾಗಿಸುವಿಕೆಯನ್ನು ಹೆಚ್ಚಿಸುತ್ತದೆ. ಇದು ಸವೆತ ತಡೆಯುವ ಬ್ಲೂ-ಫಿನ್ಸ್ ಹೊಂದಿದೆ ಮತ್ತು ಅದರ ಕಾಯಿಲ್ ಗಳಲ್ಲಿ ನ್ಯಾನೊ-ಶೀಲ್ಡ್ ಲೇಪನ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ ದೀರ್ಘ ಬಾಳಿಕೆ ನೀಡುತ್ತದೆ.

ಕ್ರೋಮಾ 5 ಇನ್ 1 ಕನ್ವರ್ಟಬಲ್ 1.4 ಟನ್ ಇನ್ವರ್ಟರ್ ಸ್ಪ್ಲಿಟ್ ಏರ್ ಕಂಡೀಷನರ್ ಅನ್ನು ಪ್ರತಿನಿತ್ಯ ಹೆಚ್ಚುವರಿ ಆರಾಮದಾಯಕ ಅನುಭವ ನೀಡುವ ಆಧುನಿಕ ಮತ್ತು ಹೆಚ್ಚು ಅನುಕೂಲಕರ  ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಡಸ್ಟ್ ಫಿಲ್ಟರ್ ನೊಂದಿಗೆ ಬಂದಿದ್ದು ಅದು ಧೂಳು  ಹೀರಿಕೊಂಡು ಕೋಣೆಯ ಒಳಗಡೆ ಶುದ್ಧ ಗಾಳಿಯನ್ನು ಮಾತ್ರ ಪಸರಿಸುತ್ತದೆ. ಇದು ಹೊರಗಿನ ತಾಪಮಾನ 52° ಸೆ. ಮುಟ್ಟಿದರೂ ಅಗತ್ಯವಾದ ತಂಪಾಗಿಸುವಿಕೆಯನ್ನು ಪರಿಣಾಮಕಾರಿಯಾಗಿ ಮಾಡುತ್ತದೆ. ಇದು ಟರ್ಬೊ ಕೂಲಿಂಗ್ ಕಾರ್ಯದೊಂದಿಗೆ ಸನ್ನದ್ಧವಾಗಿದ್ದು ಅದು ಕೋಣೆಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಂಪಾಗಿಸಲು ನೆರವಾಗುತ್ತದೆ. ಇದು ಸ್ಲೀಪ್ ಮೋಡ್ ಗಳನ್ನು ಹೊಂದಿದ್ದು ಅದನ್ನು ನಿಮ್ಮ ಅಗತ್ಯಗಳಿಗೆ ಹೊಂದುವಂತೆ ಬದಲಾಯಿಸಬಹುದು ಇದರಿಂದ ಆರಾಮದಾಯಕ   ಸುಖ ನಿದ್ರೆ ನಿಮ್ಮದಾಗುತ್ತದೆ. ಈ ಆಧುನಿಕ ವಿನ್ಯಾಸಗಳು ಮತ್ತು ಗರಿಷ್ಠ ಕಾರ್ಯಕ್ಷಮತೆ ಇದನ್ನು ಖರೀದಿಸಲು ಅತ್ಯಂತ ಸೂಕ್ತವಾದ ಏರ್ ಕಂಡೀಷನರ್ ಆಗಿಸಿದೆ.

ಆಕರ್ಷಕ ಬೆಲೆ

ಕ್ರೋಮಾ 5 ಇನ್ 1 ಕನ್ವರ್ಟಬಲ್ 1.4 ಟನ್ ಇನ್ವರ್ಟರ್ ಸ್ಪ್ಲಿಟ್ ಏರ್ ಕಂಡೀಷನರ್ ಕೇವಲ ರೂ.32,490 (ಭಾರತೀಯ ರೂಪಾಯಿಗಳು)ಗಳ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಇದರಲ್ಲಿ ಎಲ್ಲ ತೆರಿಗೆಗಳೂ ಸೇರಿವೆ. ಇದು ರೂ.1,529ರ ಇಎಂಐ ಆಯ್ಕೆಗಳಲ್ಲೂ ಲಭ್ಯವಿದೆ. ಇದು ಒದಗಿಸುವ ವಿಶೇಷತೆಗಳು ಮತ್ತು ಕಾರ್ಯಕ್ಷಮತೆಯಿಂದ ಇದರ ಬೆಲೆಗೆ ತಕ್ಕುದಾದ ಉತ್ಪನ್ನವಾಗಿಸಿದೆ.

ಈ ಉತ್ಪನ್ನವು ಆನ್ ಲೈನ್ ನಲ್ಲಿCroma 5 in 1 convertible 1.4 ton inverter split air conditioner ಹಾಗೂ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT