ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಪ್ಲಾಸ್ಟಿಕ್ ಪರ್ಯಾಯಗಳು: ಪರಿಸರಕ್ಕೆ ಒಳಿತಿಗಿಂತಲೂ ಹಾನಿಯೇ ಹೆಚ್ಚೇ?

Last Updated 21 ನವೆಂಬರ್ 2020, 5:02 IST
ಅಕ್ಷರ ಗಾತ್ರ

ನಾವು ಪ್ಲಾಸ್ಟಿಕ್ ಮೇಲೆ ಅವಲಂಬಿತರಾಗಿದ್ದೇವೆ. ಅದನ್ನು ನಿಷೇಧಿಸುವ ವಿಚಾರಕ್ಕಿಂತಲೂ ಹೆಚ್ಚಾಗಿ ಅದೊಂದು ವರವಾಗಿ ಪರಿಣಮಿಸಿದೆ. ಆದರೆ, ಪ್ಲಾಸ್ಟಿಕ್‌ನಲ್ಲಿ ಮಾನವನಿಗೆ ಮತ್ತು ಪರಿಸರಕ್ಕೆ ಪೂರಕವಾಗಿ ಇರುವ ಅಂಶಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾವು ವಿಫಲರಾಗಿದ್ದೇವೆ. ಪ್ಲಾಸ್ಟಿಕ್ ಮರುಬಳಕೆಯ ಮಹತ್ವವನ್ನು ಅರಿತುಕೊಳ್ಳುವುದನ್ನು ನಾವು ಮರೆತಿದ್ದೇವೆ. ಪ್ಲಾಸ್ಟಿಕ್ ಮರುಬಳಕೆಯಿಂದ ಪರಿಸರಕ್ಕೆ ಮತ್ತು ಮಾನವನ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ ಎಂಬುದು ಒಪ್ಪಬೇಕಾದ ವಿಚಾರ. ಪ್ರತಿ ದಿನ ನಾವು ಬಳಸುವ ಪ್ಲಾಸ್ಟಿಕ್‌ಗಳ ಬಗ್ಗೆ ಗಮನಹರಿಸಿದರೆ, ಅದಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳು ಅನೇಕ ದೊರೆಯುತ್ತವೆ. ಆದರೆ ವಿಲೇವಾರಿ ವಿಚಾರದಲ್ಲಿ ಅವುಗಳೂ ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಇದನ್ನು ತಿಳಿಯಲು ಪ್ಲಾಸ್ಟಿಕ್ ಪರ್ಯಾಯಗಳ ಮಿತಿಗಳೇನು ಮತ್ತು ಅಂತಿಮ ಪರಿಹಾರ ಏನು ಎಂಬುನ್ನು ಕಂಡುಕೊಳ್ಳಬೇಕಿದೆ.

ಪೆಟ್ ಅಥವಾ ಪಾಲಿಥಿಲೀನ್ ಟೆರೆಫ್ಥಲೇಟ್ ಎಂಬುದು ಒಂದು ಥರ್ಮೋಪ್ಲಾಸ್ಟಿಕ್ ಪಾಲಿಮರ್ ಆಗಿದ್ದು, ಪಾಲಿಸ್ಟರ್ ವರ್ಗಕ್ಕೆ ಸೇರಿದೆ. ಎಲ್ಲ ಪ್ಲಾಸ್ಟಿಕ್‌ಬಾಟಲ್‌ಗಳ, ಪಾನೀಯ ಬಾಟಲ್‌ಗಳ, ದಿನಬಳಕೆಯ ಆಹಾರವಸ್ತುಗಳ ಪೊಟ್ಟಣಗಳಲ್ಲಿ ಪೆಟ್ ಪ್ಲಾಸ್ಟಿಕ್ಕನ್ನೇ ಬಳಸಲಾಗುತ್ತಿದೆ. ಕಡಲೆಕಾಯಿ ಎಣ್ಣೆ, ತೈಲ, ತುಪ್ಪ, ಸಾಫ್ಟ್‌ಡ್ರಿಂಕ್ಸ್‌, ತಂಪು ಪಾನೀಯಗಳು, ಹ್ಯಾಂಡ್‌ವಾಶ್‌, ಸೋಪ್‌ಇತ್ಯಾದಿಗಳ ಪೊಟ್ಟಣಗಳೂ ಪೆಟ್ ಪ್ಲಾಸ್ಟಿಕ್‌ನಿಂದಲೇ ತಯಾರಾಗುವವು. ಜಗತ್ತಿನ ಬಹುದೊಡ್ಡ ಉತ್ಪಾದಕರೆಲ್ಲ ಪೆಟ್ ಪ್ಲಾಸ್ಟಿಕ್ಕನ್ನೇ ಬಳಸುತ್ತಿದ್ದಾರೆ. ಇದಕ್ಕೆ ಪೆಟ್ ಪ್ಲಾಸ್ಟಿಕ್‌ನ ಹಗುರ, ಒಡೆದು ಚೂರಾಗದಿರುವ ಮತ್ತು ಸಾಗಾಟಕ್ಕೆ ಪೂರಕವಾಗಿರುವ ಗುಣಗಳೇ ಕಾರಣ.

ಆಹಾರ, ಪಾನೀಯ ಮತ್ತು ಔಷಧೋತ್ಪನ್ನಗಳ ಪ್ಯಾಕಿಂಗ್‌ನಲ್ಲಿ ಪೆಟ್‌ಬಳಕೆಯೇ ಸುರಕ್ಷಿತ ಎಂದು ಸುರಕ್ಷತಾ ಪರೀಕ್ಷೆ ನಡೆಸುವ ಅನೇಕ ಆರೋಗ್ಯ ಸಂಘಟನೆಗಳು ಹೇಳಿವೆ.

ಪೆಟ್‌ನ ಕೆಲವು ಪ್ರಯೋಜನಗಳ ಮಾಹಿತಿ ಇಲ್ಲಿದೆ:

* ಸೂಕ್ಷ್ಮಜೀವಿ ನಿರೋಧಕ.

* ಹೊರಗಿನ ಯಾವುದೇ ಅಂಶಗಳ ಜತೆ ಪೆಟ್‌ಬೆರೆಯುವುದಿಲ್ಲ. ಅಂದರೆ, ಜೈವಿಕ ವಿಘಟನೆಗೆ (ಬಯೋ–ಡಿಗ್ರೆಡೇಷನ್) ಒಳಗಾಗುವುದಿಲ್ಲ.

* ಪೆಟ್‌ಸಂಪೂರ್ಣವಾಗಿ ಮರುಬಳಕೆಯೋಗ್ಯ. ಶುಚಿಗೊಳಿಸುವ, ಕರಗಿಸುವ ಅಥವಾ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಇತರ ಪೆಟ್‌ಉತ್ಪನ್ನಗಳನ್ನು ತಯಾರಿಸಬಹುದು.

* ಅನುಕೂಲ ಮತ್ತು ಕೈಗೆಟಕುವ ದರದಲ್ಲಿ ಲಭ್ಯವಿರುವ ಪೆಟ್‌ಉತ್ಪನ್ನಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕಾದದ್ದು ಬಳಕೆದಾರರ ಜವಾಬ್ದಾರಿಯೂ ಹೌದು. ಇದರಿಂದ ಪೆಟ್ ಉತ್ಪನ್ನಗಳ ಮರುಬಳಕೆ ಸುಲಭವಾಗುತ್ತದೆ. ಪೆಟ್‌ಅನ್ನು ಸೂಕ್ತ ರೀತಿಯಲ್ಲಿ ಮರುಬಳಕೆ ಮಾಡಿದರೆ ಇಂಧನ ಬಳಕೆ ಮತ್ತು ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಯಾಕೆಂದರೆ, ಹೀಗೆ ಮಾಡುವುದರಿಂದ ಕಚ್ಚಾ ಉತ್ಪನ್ನಗಳ ಬಳಕೆ ಕಡಿಮೆಯಾಗುತ್ತದೆ.

* ಪೆಟ್ ಮರುಬಳಕೆಯು ಪರಿಸರಕ್ಕೆ ಹಾನಿಯುಂಟುಮಾಡುವ ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುತ್ತದೆ ಮತ್ತು ಇದರಿಂದ ವಿಶ್ವಮಟ್ಟದಲ್ಲಿ ಮಾಲಿನ್ಯ ಕಡಿಮೆಯಾಗಲಿದೆ.

* ಭಾರತ ದೇಶವೊಂದರಲ್ಲೇ ಶೇ 90ಕ್ಕಿಂತಲೂ ಹೆಚ್ಚು ಪೆಟ್‌ಪ್ಲಾಸ್ಟಿಕ್‌ಗಳು ಮರುಬಳಕೆಯಾಗುತ್ತಿವೆ.

ಗಾಜಿಗಿಂತ ಪೆಟ್‌ಪ್ಲಾಸ್ಟಿಕ್ಕೇ ಮೇಲು: ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪ್ಯಾಕೇಜಿಂಗ್ ವಸ್ತುವಾಗಿ ಗ್ರಾಹಕರು ಆದ್ಯತೆ ನೀಡುವುದು ಗಾಜಿನ ಉತ್ಪನ್ನಗಳಿಗೆ. ಯಾಕೆಂದರೆ ಗಾಜಿನ ಉತ್ಪನ್ನ ತಯಾರಿಕೆಯಲ್ಲಿ ಮರಳು, ಸೋಡಾ ಬೂದಿ, ಸುಣ್ಣದ ಕಲ್ಲಿನಂತಹ ನೈಸರ್ಗಿಕ ವಸ್ತುಗಳನ್ನೇ ಬಳಸಲಾಗುತ್ತಿದೆ. ಗಾಜು ಶೇ 100ರಷ್ಟು ಮರುಬಳಕೆಯೋಗ್ಯವೂ ಹೌದು. ಮರುಬಳಕೆಯ ಗಾಜು ಕೇವಲ 30 ದಿನಗಳಲ್ಲಿ ಅಂಗಡಿಗಳ ಕಪಾಟು ತಲುಪಬಹುದು ಎಂಬುದು ನಿಮಗೆ ತಿಳಿದಿದೆಯೇ? ಆದರೆ, ಗಾಜಿನ ಉತ್ಪನ್ನಗಳು ಅನೇಕ ಅನನುಕೂಲತೆಗಳನ್ನೂ ಹೊಂದಿವೆ. ಅವುಗಳೆಂದರೆ:

* ಪೆಟ್‌ನಲ್ಲಿ ಪ್ಯಾಕಿಂಗ್‌ಗೆ ಹೋಲಿಸಿದರೆ ಗಾಜು ಸಾಗಾಟದ ಸಮಯದಲ್ಲಿ ತೂಕದ ಸಮಸ್ಯೆ ಎದುರಿಸುತ್ತದೆ ಮತ್ತು ಒಡೆಯುವ ಸಾಧ್ಯತೆ ಇದೆ.

* ಗಾಜಿನ ಉತ್ಪಾದನಾ ವೆಚ್ಚ ತುಂಬಾ ದುಬಾರಿ. ಕಚ್ಚಾ ವಸ್ತುಗಳನ್ನು ಸಂಸ್ಕರಿಸುವ ಮತ್ತು ಗಾಜಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಹೆಚ್ಚಿನ ತಾಪಮಾನದ ಅಗತ್ಯವಿದೆ.

* ಗಾಜು ಬಿರುಕುಬಿಟ್ಟರೆ ಅಥವಾ ಒಡೆದರೆ ಅಪಾಯಕಾರಿ. ಗಾಜಿನ ಪೊಟ್ಟಣದ ಒಳಗಿರುವ ಆಹಾರೋತ್ಪನ್ನ ಸೇವಿಸುವ ವ್ಯಕ್ತಿಗೆ ಮಾರಕವಾಗಿ ಪರಿಣಮಿಸಬಲ್ಲದು.

* ಶೇ 20–30ರಷ್ಟು ಗಾಜಿನ ಉತ್ಪನ್ನ ಮರುಬಳಕೆಗೆ ಲಭ್ಯವಾಗುವುದೇ ಇಲ್ಲ. ಅವು ಭೂಮಿಯಲ್ಲಿ ತ್ಯಾಜ್ಯವಾಗುವುದು ಹೆಚ್ಚು ಅಪಾಯಕಾರಿ ಮತ್ತು ಹಾನಿಕಾರಕ.

ಸರಿಯಾದ ನೈರ್ಮಲ್ಯೀಕರಣ ಪ್ರಕ್ರಿಯೆ ಇಲ್ಲದೆ ಸೂಕ್ಷ್ಮಜೀವಿಗಳು ಬಯೋಫಿಲ್ಮ್‌ಗಳಾಗಿ ಗಾಜಿನ ಮೇಲ್ಮೈನಲ್ಲಿ ಬೆಳೆಯುವ ಸಾಧ್ಯತೆ ಇದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬಯೋಫಿಲ್ಮ್‌ಸೃಷ್ಟಿಗೆ ಕಾರಣವಾಗುವ ಬ್ಯಾಕ್ಟೀರಿಯಾ, ಫಂಗೈ, ಪ್ರೊಟಿಸ್ಟ್‌ಮತ್ತಿತರ ಸೂಕ್ಷ್ಮಜೀವಿಗಳು ನಿರಂತರವಾಗಿ ತೇವಾಂಶದಿಂದ ಕೂಡಿರುವ ಜಾಗದಲ್ಲಿರುವುದು ಕಂಡುಬಂದಿದೆ. ಮಾನವ ಮತ್ತು ಪ್ರಾಣಿಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲ ಅಪಾರ ಪ್ರಮಾಣದ ಬ್ಯಾಕ್ಟೀರಿಯಾಗಳು ಬಯೋಫಿಲ್ಮ್‌ನಲ್ಲಿರುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಪರಿಣಾಮವಾಗಿ ಜೀವಕ್ಕೇ ಅಪಾಯವಾಗುವ ಸಾಧ್ಯತೆ ಇದೆ. ಒಮ್ಮೆ ಬಯೋಫಿಲ್ಮ್‌ಸೃಷ್ಟಿಯಾದ ಗಾಜು ಅಥವಾ ತಾಮ್ರದ ಬಾಟಲ್‌ಗಳನ್ನು ದಿನಾ 20–30 ನಿಮಿಷಗಳ ಕಾಲ ನಿರ್ದಿಷ್ಟ ತಾಪಮಾನದಲ್ಲಿ ಬಿಸಿ ಮಾಡದೆ ಶುಚಿಗೊಳಿಸಲು ಸಾಧ್ಯವೇ ಇಲ್ಲ.

ಮತ್ತೊಂದೆಡೆ, ಸಿದ್ಧ ಆಹಾರ (ರೆಡಿ ಟು ಈಟ್) ಮತ್ತು ತಂಪಾದ ಆಹಾರ ವಸ್ತುಗಳ ಪ್ಯಾಕಿಂಗ್‌ನಲ್ಲಿ ಅಲ್ಯೂಮಿನಿಯಂ ಉತ್ಪನ್ನಗಳನ್ನು ಬಳಸಲಾಗುತ್ತಿದೆ. ಫಾಸ್ಟ್‌ಫುಡ್ ಮತ್ತು ಸಿದ್ಧ ಆಹಾರ ಪ್ಯಾಕೇಜಿಂಗ್‌ನಲ್ಲಿ ಅಲ್ಯೂಮಿನಿಯಂ ಬಳಕೆ ಹೆಚ್ಚುತ್ತಿದೆ. ಯಾಕೆಂದರೆ ಅದರಲ್ಲಿರುವ ಲೋಹದ ಅಂಶವು ನೇರಳಾತೀತ ವಿಕಿರಣಗಳು, ಸೂಕ್ಷ್ಮಜೀವಿಗಳು ಆಹಾರವನ್ನು ಸೋಕದಂತೆ ಮತ್ತು ಆಹಾರ ಸೋರಿಕೆಯಾಗದಂತೆ ರಕ್ಷಣೆ ಒದಗಿಸುತ್ತದೆ. ಆದಾಗ್ಯೂ, ಅಲ್ಯೂಮಿನಿಯಂ ಬಳಕೆಯಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳು ಹೀಗಿವೆ:

* ಅಲ್ಯೂಮಿನಿಯಂ ಹೊರತೆಗೆಯುವುದರಿಂದ ತೊಡಗಿ ಅದರ ಸಂಸ್ಕರಿಸುವವರೆಗೆ ಪರಿಸರಕ್ಕೆ ತುಂಬಾ ಹಾನಿ ಇದೆ.

* ಕೈಗಾರಿಕೆಗಳಲ್ಲಿ ಉತ್ಪನ್ನಗಳನ್ನು ಕರಗಿಸುವುದರಿಂದ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿರುವ ‘ಹಸಿರುಮನೆ ಅನಿಲ (ಗ್ರೀನ್‌ಹೌಸ್ ಗ್ಯಾಸ್)’ ಬಿಡುಗಡೆಯಾಗುತ್ತದೆ.

ಅಲ್ಯೂಮಿನಿಯಂ ಮರುಬಳಕೆಯೋಗ್ಯ ಎಂಬುದು ಶೇ 100ರಷ್ಟು ನಿಜ. ಆದರೆ, ಇದು ಅಂತಿಮವಾಗಿ ಭೂಮಿ ಸೇರುವುದಲ್ಲದೆ ಇತರ ತ್ಯಾಜ್ಯಗಳೊಂದಿಗೆ ಬೆರೆತಾಗ ಹಾನಿಕಾರಕ ವಿಷವನ್ನು ಸೂಸುತ್ತದೆ.

ಪ್ರಸ್ತುತ, ಪರಿಸರದ ಬಗ್ಗೆ ಕಾಳಜಿ ಹೆಚ್ಚಿರುವುದರಿಂದಾಗಿ ಅನೇಕ ಉತ್ಪಾದಕರು ಪರಿಸರಸ್ನೇಹಿ ಉತ್ಪಾದನಾ ಪ್ರಕ್ರಿಯೆಯತ್ತ ವಾಲುತ್ತಿದ್ದಾರೆ. ಇದಕ್ಕೆ, ಪ್ಯಾಕಿಂಗ್‌ನಲ್ಲಿ ಕಾಗದ (ಪೇಪರ್‌) ಬಳಕೆ ಒಂದು ಉದಾಹರಣೆ. ಕಾಗದವನ್ನು ಅತಿ ಕಡಿಮೆ ವೆಚ್ಚದಲ್ಲಿ ಖರೀದಿಸಬಹುದು ಮತ್ತು ಬೃಹತ್ ಪ್ರಮಾಣದಲ್ಲಿ ಉತ್ಪಾದನೆಗೆ ಬಳಸಬಹುದು. ಆದರೆ, ಪೆಟ್, ಅಲ್ಯೂಮಿನಿಯಂ ಮತ್ತು ಗಾಜಿನ ಜತೆ ಹೋಲಿಸಿದರೆ ಜೈವಿಕ ವಿಘಟನೆಗೆ ಒಳಗಾಗುವ ಕಾಗದವು ಪ್ಯಾಕಿಂಗ್‌ಗೆ ಉತ್ತಮವಲ್ಲ. ಯಾಕೆಂದರೆ:

* ಕಾಗದವು ಜಲ–ನಿರೋಧಕವಲ್ಲ (ವಾಟರ್ ಪ್ರೂಫ್).

* ಇದನ್ನು ಬಾಹ್ಯವಸ್ತುಗಳು ಸುಲಭವಾಗಿ ಭೇದಿಸಬಹುದು.

* ಕಾಗದ ತಯಾರಿಗೆ ಮರಗಳು ಬೇಕಾಗಿರುವುದರಿಂದ ಇದು ಪರಿಸರಕ್ಕೆ ಮಾರಕ.

* ಜೈವಿಕ ವಿಘಟನೀಯ ಮತ್ತು ಮರುಬಳಕೆಗೆ ಯೋಗ್ಯವಾದದ್ದರಿಂದ ಕಾಗದವನ್ನು ಪ್ಲಾಸ್ಟಿಕ್‌ಗೆ ಪರ್ಯಾಯ ಎಂದು ಹೇಳಲಾಯಿತು. ನೀರನ್ನು ಹೊರತುಪಡಿಸಿ ದಿನಸಿಯಂತಹ ಇತರ ವಸ್ತುಗಳನ್ನು ಕೊಂಡೊಯ್ಯಲು ಇದನ್ನು ಬಳಸಬಹುದು. ಇದು ಕಡಿಮೆ ವೆಚ್ಚದ ಪರ್ಯಾಯವೂ ಹೌದು. ಆದರೆ, ಸರಿಯಾಗಿ ಮರುಬಳಕೆಯಾಗದಿದ್ದರೆ ತ್ಯಾಜ್ಯವಾಗಲಿದ್ದು, ಪರಿಸರಕ್ಕೆ ಹಾನಿಯುಂಟುಮಾಡಲಿದೆ.

ಪೆಟ್, ಗಾಜು, ಮೆಟಲ್, ಕಾಗದಗಳ ಸಾಧಕ–ಬಾಧಕಗಳನ್ನು ಅಳೆದು–ತೂಗಿ ನೋಡಿದ ಬಳಿಕ ಪರಿಣಾಮಕಾರಿಯಾಗಿ ಮರುಬಳಕೆ ಮಾಡಿದರೆ ಪೆಟ್‌ಪ್ಲಾಸ್ಟಿಕ್ಕೇ ವರದಾನ ಎಂಬುದು ಸಾಬೀತಾಗಿದೆ. ಗಾಜಿಗೆ ಹೋಲಿಸಿದರೆ ಪೆಟ್ ಕಡಿಮೆ ಇಂಗಾಲ (ಕಾರ್ಬನ್) ಹೊರಸೂಸುವುದಲ್ಲದೆ ಉತ್ಪನ್ನಗಳ ಪ್ಯಾಕಿಂಗ್‌ಗೆ ಸೂಕ್ತವಾಗಿಯೂ ಇದೆ. ಆಹಾರ ಮತ್ತು ಪಾನಿಯಗಳ ಪ್ಯಾಕಿಂಗ್‌ಗೆ ಪೆಟ್‌ಬಳಕೆ ಸುರಕ್ಷಿತವೆಂದು ಅಮೆರಿಕದ ಎಫ್‌ಡಿಎ, ಹೆಲ್ತ್‌ಕೆನಡಾ, ಇಎಫ್‌ಎಸ್‌ಎ (European Food Safety Authority) ಹಾಗೂ ಇತರ ಸಂಸ್ಥೆಗಳು ಪ್ರಮಾಣೀಕರಿಸಿವೆ. ಭಾರತದಲ್ಲಿ ಹೆಚ್ಚಿನ ಪೆಟ್‌ಪ್ಲಾಸ್ಟಿಕ್ ಮರುಬಳಕೆಯಾಗುವುದರಿಂದ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳ ಉಳಿತಾಯವಾಗುತ್ತದೆ ಮತ್ತು ಆ ಮೂಲಕ ಮಾಲಿನ್ಯಕ್ಕೆ ತಡೆಯುಂಟಾಗುತ್ತಿದೆ. ಗಾಜು, ಮೆಟಲ್, ಅಲ್ಯೂಮಿನಿಯಂ ಮತ್ತು ಕಾಗದವು ಪೆಟ್‌ಗೆ ಪರ್ಯಾಯವಾದರೂ ಅವುಗಳ ಮರುಬಳಕೆ ತೀರಾ ವಿರಳ ಎಂಬುದನ್ನು ನಾವು ಮರೆಯಬಾರದು.

ನಮ್ಮ ಸುತ್ತಲಿನ ಪರಿಸರವನ್ನು ರಕ್ಷಿಸಲು ಇರುವ ಒಂದೇ ದಾರಿಯೆಂದರೆ ಎಲ್ಲ ಮಾದರಿಯ ಪ್ಲಾಸ್ಟಿಕ್‌ಅನ್ನು ಮರುಬಳಕೆ ಮಾಡಬೇಕು. ಪ್ಲಾಸ್ಟಿಕ್‌ನಿರ್ವಹಿಸುವ ವಿಚಾರದಲ್ಲಿ ನಿಮ್ಮ ಅಭ್ಯಾಸವನ್ನು ಬದಲಾಯಿಸುವ ಮೂಲಕ ಇದನ್ನು ಸಾಧಿಸಲು ಸಾಧ್ಯ. ಎಲ್ಲೆಂದರಲ್ಲಿ ಬಿಸಾಡುವ ಬದಲು ನೀವದನ್ನು ಮರುಬಳಕೆಗೆ ಕಳುಹಿಸಿಕೊಡಬೇಕು. ಅದೃಷ್ಟವಶಾತ್, ಮರುಬಳಕೆಯ ಮೂಲಕ ಎಲ್ಲ ರೀತಿಯ ಪ್ಯಾಕಿಂಗ್‌ವಸ್ತುಗಳನ್ನು ತಯಾರಿಸುವ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳು ಈಗಾಗಲೇ  ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ನಿಟ್ಟಿನಲ್ಲಿ ನಿಮ್ಮ ಕೊಡುಗೆಯೂ ಅವಶ್ಯವಾಗಿದ್ದು, ಅವು ನಿಮಗೆ ಮರುಬಳಕೆ ಆರ್ಥಿಕತೆಯ ಭಾಗವಾಗಲು ಸಹಾಯ ಮಾಡುತ್ತವೆ.
 

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT