ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

11ನೇ ಪೀಳಿಗೆಯ Intel® Core™ ಬೆಂಬಲಿತ ಹಗುರ ಮತ್ತು ತೆಳುವಾದ ಲ್ಯಾಪ್‌ಟಾಪ್ ಕೊಳ್ಳಲು ಇಲ್ಲಿವೆ 5 ಪ್ರಮುಖ ಕಾರಣಗಳು

Last Updated 25 ಜೂನ್ 2021, 15:09 IST
ಅಕ್ಷರ ಗಾತ್ರ

ನಮ್ಮ ಸುತ್ತಲಿನ ಜಗತ್ತು ಅತ್ಯಂತ ವೇಗದಲ್ಲಿ ಬದಲಾಗುತ್ತಿರುವಾಗ ಅದಕ್ಕೆ ತಕ್ಕಂತೆ ನಾವು ಕೂಡ ಪ್ರಮುಖ ಕೆಲಸಗಳನ್ನು ಸ್ಮಾರ್ಟ್ ಆಗಿ ಮತ್ತು ಸೂಕ್ತ ತಂತ್ರಜ್ಞಾನ ಬಳಕೆಯಿಂದ ತ್ವರಿತವಾಗಿ ಮುಗಿಸಿಕೊಳ್ಳುವುದು ಅಗತ್ಯವಾಗುತ್ತದೆ. ಹೀಗಾಗಿ ನೀವು ವೃತ್ತಿಪರರಾಗಿದ್ದರೆ, ಅಥವಾ ವಿದ್ಯಾರ್ಥಿಯಾಗಿದ್ದರೆ ಇಲ್ಲವೇ ಸದಾ ಸಂಪರ್ಕದಲ್ಲಿರಲು ಬಯಸುವ ವ್ಯಕ್ತಿಯಾಗಿದ್ದರೆ, ನಿಮಗೆ ಇಂದಿನ ಜಗತ್ತಿನಲ್ಲಿ ಗರಿಷ್ಠ ಪರ್ಫಾಮೆನ್ಸ್ ಹೊಂದಿರುವ ಲ್ಯಾಪ್‌ಟ್ಯಾಪ್ ಬೇಕಾಗುತ್ತದೆ. ಇಂತಹ ಸಮಯದಲ್ಲಿ 11ನೇ ಪೀಳಿಗೆಯ Intel® Core™ ಬೆಂಬಲಿತ ಲ್ಯಾಪ್‌ಟಾಪ್ ಹೇಗೆ ನಿಮಗೆ ಸಹಾಯ ಮಾಡುತ್ತದೆ ಮತ್ತು ಅದರಿಂದ ಇನ್ನಷ್ಟು ಹೆಚ್ಚಿನ ಕೆಲಸ ಮಾಡಲು ಅನುಕೂಲವಾಗುತ್ತದೆ ಎನ್ನಲು 5 ಕಾರಣಗಳು ಇಲ್ಲಿವೆ.

1. ಕೆಲಸ, ಗೇಮ್ಸ್ ಅಥವಾ ಇಂಟಲಿಜೆಂಟ್ ಪರ್ಫಾಮೆನ್ಸ್ ಜತೆಗೆ ಸ್ಮಾರ್ಟ್ ಕಲಿಕೆ: 11ನೇ ಪೀಳಿಗೆಯ Intel® Core™ ಪ್ರೊಸೆಸರ್ ಬೆಂಬಲಿತ ಲ್ಯಾಪ್‌ಟಾಪ್‌ಗಳು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಧಾರಿತ ಕಾರ್ಯಾಚರಣೆ ಹೊಂದಿದ್ದು, ಹೆಚ್ಚು ವೇಗವಾಗಿ ಮತ್ತು ಸುಲಭದಲ್ಲಿ ನಿಮ್ಮ ಕೆಲಸ ಮಾಡುವ ಸಾಮರ್ಥ್ಯ ಹೊಂದಿವೆ. ಅವೆಂದರೆ ಬ್ಲರ್ ಇರುವ ಫೋಟೊವನ್ನು ಕ್ರಿಸ್ಪ್ ಆಗಿಸುವುದು, ಫೋಟೊದಲ್ಲಿರುವ ಅನಗತ್ಯ ಅಂಶಗಳನ್ನು ಕೆಲವೇ ಸೆಕೆಂಡ್‌ಗಳಲ್ಲಿ ತೆಗೆದುಹಾಕುವುದು, ಕಾನ್ಫರೆನ್ಸ್ ಕರೆಯಲ್ಲಿ ಹೊರಗಿನ ಗದ್ದಲವನ್ನು ಕಡಿಮೆ ಮಾಡುವುದು ಹೀಗೆ ಹಲವು ಅನುಕೂಲವಿದೆ. ಅಲ್ಲದೆ, ಮೈಕ್ರೋಸಾಫ್ಟ್ ಆಫೀಸ್, ಗೂಗಲ್ ಕ್ರೋಮ್ ಮತ್ತು ಝೂಮ್ ಸಹಿತ ವಿವಿಧ ದಿನನಿತ್ಯ ಬಳಸುವ ಅಪ್ಲಿಕೇಶನ್‌ಗಳಲ್ಲಿ ಅತ್ಯಂತ ತ್ವರಿತ ಕಾರ್ಯಾಚರಣೆ ಮತ್ತು ಅಚ್ಚರಿಯ ವೇಗವನ್ನು ನೀವು ಕಾಣಬಹುದಾಗಿದೆ.

2. ತೆಳು & ಹಗುರ ಲ್ಯಾಪ್‌ಟಾಪ್‌ನಲ್ಲಿ ಮುಂದಿನ ಪೀಳಿಗೆಯ ಗ್ರಾಫಿಕ್ಸ್: 11ನೇ ಪೀಳಿಗೆಯ Intel® Core™ ಸಹಿತ ಬರುವ ಲ್ಯಾಪ್‌ಟಾಪ್‌ನಲ್ಲಿ ಅತ್ಯಂತ ಪವರ್‌ಫುಲ್ ಆಗಿರುವ GPU ಒಳಗೊಂಡಿರುವ Intel® Iris® Xe ಗ್ರಾಫಿಕ್ಸ್ ಜತೆಗಿದೆ. ಇದರಿಂದಾಗಿ ನೀವು ಅತ್ಯಂತ ಕಡಿಮೆ ಅವಧಿಯಲ್ಲಿ ನಿಮ್ಮ ಕ್ರಿಯಾಶೀಲ ಕೆಲಸವನ್ನು ಇಂಟಲಿಜೆನ್ಸ್ ಪರ್ಫಾಮೆನ್ಸ್ ಫೀಚರ್ಸ್ ಅಥವಾ ಗೇಮ್ ಮತ್ತು ಜನಪ್ರಿಯ ಸೀರೀಸ್‌ಗಳನ್ನು 1080p ಮತ್ತು 60 FPSನಲ್ಲಿ ಇಲ್ಲವೇ 4K HDRನಲ್ಲಿ ಒಂದೇ ಬಾರಿಗೆ ನಾಲ್ಕು ಡಿಸ್‌ಪ್ಲೇ ಮೂಲಕ ಸ್ಟ್ರೀಮ್ ಮಾಡಬಹುದಾಗಿದೆ.

3. ಮುಂದಿನ ಹಂತದ ಕನೆಕ್ಟಿವಿಟಿ ಜತೆಗೆ ಅತಿ ಹೆಚ್ಚು ಸ್ಟ್ರೀಮ್ ಮಾಡಿ: ನಿಮಗೆ ಅತ್ಯುತ್ತಮ ಎನ್ನಿಸುವ ಕನೆಕ್ಟಿವಿಟಿ ಆಯ್ಕೆಗಳು ಬೇಕಾದಲ್ಲಿ ನಿಮ್ಮಲ್ಲಿ 11ನೇ ಪೀಳಿಗೆಯ Intel® Core™ ಪ್ರೊಸೆಸರ್ ಆಧಾರಿತ ಲ್ಯಾಪ್‌ಟಾಪ್ ಇರುವುದನ್ನು ಖಚಿತಪಡಿಸಿಕೊಳ್ಳಿ. ಇದು ಮಿಂಚಿನ ವೇಗದ ಗಿಗಾಬೈಟ್ ವೈ-ಫೈ ವೇಗವನ್ನು ಅನುಕೂಲಕರವಾಗಿ ಒಂದೇ ಕೇಬಲ್ ಸಂಪರ್ಕದ ಮೂಲಕ ನಿಮಗೆ ಒದಗಿಸುತ್ತದೆ. ಜತೆಗೆ ನೀವು ಒಂದೇ ಕೇಬಲ್ ಮೂಲಕ ತ್ವರಿತ ಚಾರ್ಜಿಂಗ್, ಮಿಂಚಿನ ವೇಗದ ಡಾಟಾ ಟ್ರಾನ್ಸ್‌ಫರ್ ಮತ್ತು ಹೆಚ್ಚುವರಿ ಮಾನಿಟರ್ ಹಾಗೂ ಸ್ಟೋರೇಜ್ ಸಂಪರ್ಕವನ್ನು ಒಂದೇ ಕೇಬಲ್ ಮೂಲಕ ಮಾಡಬಹುದಾಗಿದೆ. ಇದರಿಂದಾಗಿ ಅತ್ಯುತ್ತಮ ವೈ-ಫೈ ಸಂಪರ್ಕ ಮೂಲಕ ನೀವು ಮನೆಯ ಯಾವುದೇ ಕೋಣೆಯಲ್ಲಿದ್ದರೂ ವಿಡಿಯೋ ಕಾನ್ಫರೆನ್ಸ್, ರಿಯಲ್ ಟೈಮ್ ಗೇಮಿಂಗ್, ತಡೆರಹಿತ ಸ್ಟ್ರೀಮಿಂಗ್ ಮೂಲಕ ಲೇಟೆಸ್ಟ್ ಮೂವೀಗಳನ್ನು ವೀಕ್ಷಿಸಬಹುದು.1

4. ಅಲ್ಟ್ರಾಪೋರ್ಟೆಬಲ್ ಗೇಮಿಂಗ್ ಅನುಭವ: ನೀವು ಯಾವತ್ತಾದರೂ ಅತ್ಯಂತ ತೆಳುವಾದ ಮತ್ತು ಹಗುರವಿರುವ ಲ್ಯಾಪ್‌ಟಾಪ್‌ನಲ್ಲಿ ಅತ್ಯುತ್ತಮವಾದ ಗೇಮಿಂಗ್ ಅನುಭವ ಪಡೆಯಲು ಸಾಧ್ಯವಿದೆ ಎಂದು ಯೋಚಿಸಿದ್ದೀರಾ?

ಈಗ ನೀವಿದನ್ನು 11ನೇ ಪೀಳಿಗೆಯ Intel® Core™ ಪ್ರೊಸೆಸರ್ ಸಾಮರ್ಥ್ಯದ ಲ್ಯಾಪ್‌ಟಾಪ್ ಮೂಲಕ ಮಾಡಬಹುದು. ಸುಲಲಿತ ಗೇಮಿಂಗ್ ಮತ್ತು ಸ್ಪಷ್ಟ ಹಾಗೂ ಬಿಲಿಯನ್‌ಗಟ್ಟಲೆ ಕಲರ್‌ಗಳ ಬೆಂಬಲವಿರುವ ವೇಗದ ಗೇಮಿಂಗ್ ಅನುಭವ ನಿಮ್ಮದಾಗಿಸಿಕೊಳ್ಳಿ. ಅಲ್ಲದೆ, ಫುಲ್ HDಯಲ್ಲಿ ನೀವು ಮತ್ತಷ್ಟು ಹೆಚ್ಚಿನ AAA ಸರಣಿಯ ಗರಿಷ್ಠ ಫ್ರೇಮ್‌ಗಳ ಗೇಮಿಂಗ್ ಅನ್ನು ಕೂಡ ಈಗ ಪಡೆಯಬಹುದು.

5. ಅತಿ ಹೆಚ್ಚು ಸಮಯದವರೆಗೆ ತಲ್ಲೀನಗೊಳಿಸುವ ಅನುಭವ ಆನಂದಿಸಿ: 11th Gen Intel® Core™ ಪ್ರೊಸೆಸರ್ ಬೆಂಬಲಿತ ಲ್ಯಾಪ್‌ಟಾಪ್ ಮೂಲಕ ನೀವು ಎಲ್ಲಿ ಬೇಕಾದರೂ, ಯಾವುದೇ ತಡೆಯಿಲ್ಲದಂತೆ ಬಳಕೆಗೆ ಅನುವು ಮಾಡಿಕೊಡುತ್ತದೆ. ತ್ವರಿತವಾಗಿ ಚಾರ್ಜಿಂಗ್ ಮಾತ್ರವಲ್ಲದೆ, ಅಧಿಕ ಸಮಯ ಬಾಳಿಕೆ ಬರುವ ಬ್ಯಾಟರಿ ಇದರಲ್ಲಿದೆ. ಅದನ್ನು ವಿವಿಧ ರೀತಿಯ ಲ್ಯಾಪ್‌ಟಾಪ್ ಬಳಕೆಯ ರೀತಿಯಲ್ಲಿ ಅಂದರೆ, ವೈ-ಫೈ ಸಂಪರ್ಕದಲ್ಲಿರುವಾಗ, ಪರದೆಯ ಬೆಳಕು ಮತ್ತು ಏಕಕಾಲಕ್ಕೆ ವಿವಿಧ ಕೆಲಸದಲ್ಲಿ ಬಳಕೆ ಪ್ರಕ್ರಿಯೆಯಲ್ಲಿ ಬಳಸಿ ಪರಿಶೀಲಿಸಲಾಗಿದೆ.

ಹಾಗಾದರೆ ನೀವೇಕೆ ಕಾಯುತ್ತಿದ್ದೀರಿ? ಇದು 11ನೇ ಪೀಳಿಗೆಯ Intel® Core™ ಪ್ರೊಸೆಸರ್ ಬೆಂಬಲಿತ ತೆಳುವಾದ ಮತ್ತು ಹಗುರ ಲ್ಯಾಪ್‌ಟಾಪ್ ಖರೀದಿಗೆ ಅತ್ಯಂತ ಸೂಕ್ತ ಸಮಯವಾಗಿದೆ.

11th Gen Intel® Core™ ಪ್ರೊಸೆಸರ್ ಕುರಿತು ಮತ್ತಷ್ಟು ಹೆಚ್ಚಿಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಡಿಸ್‌ಕ್ಲೇಮರ್ಸ್:

1Intel® Wi-Fi 6 (Gig+) ಉತ್ಪನ್ನಗಳು ವೈ-ಫೈ ಬಳಕೆಯಲ್ಲಿ ಲ್ಯಾಪ್‌ಟಾಪ್‌ನಲ್ಲಿ ಲಭ್ಯವಿರುವ ಅತಿ ಹೆಚ್ಚಿನ ವೇಗವನ್ನು ಒದಗಿಸುತ್ತವೆ. Thunderbolt™ 4 ಎನ್ನುವುದು ಲ್ಯಾಪ್‌ಗಳಲ್ಲಿ ಲಭ್ಯವಿರುವ ಅತಿವೇಗದ ಪೋರ್ಟ್ ಆಗಿದ್ದು, ಇತರ ಲ್ಯಾಪ್‌ಟಾಪ್ eSATA, USB ಮತ್ತು IEEE 1394 Firewire ನಂತಹ ವಿವಿಧ  I/O ಸಂಪರ್ಕ ತಂತ್ರಜ್ಞಾನಕ್ಕೆ ಹೋಲಿಸಿದಾಗ 40 Gb/s ವೇಗ ಒದಗಿಸುತ್ತದೆ.

ಅಂತರ್ಗತ Intel® Wi-Fi 6 (Gig+) and Thunderbolt™ 4 ತಂತ್ರಜ್ಞಾನ ಆಧಾರಿತವಾಗಿದೆ. Intel® Wi-Fi 6 (Gig+) ಉತ್ಪನ್ನಗಳು ಲ್ಯಾಪ್‌ಟಾಪ್‌ನಲ್ಲಿ ವೈ-ಫೈ ಬಳಸಿದಾಗ ಲಭ್ಯವಿರುವ ಗರಿಷ್ಠ ವೇಗವನ್ನು ಒದಗಿಸುತ್ತವೆ. Thunderbolt™ 4 ಎನ್ನುವುದು ಲ್ಯಾಪ್‌ಗಳಲ್ಲಿ ಲಭ್ಯವಿರುವ ಅತಿವೇಗದ ಪೋರ್ಟ್ ಆಗಿದ್ದು, ಇತರ ಲ್ಯಾಪ್‌ಟಾಪ್ eSATA, USB ಮತ್ತು IEEE 1394 Firewire ನಂತಹ ವಿವಿಧ  I/O ಸಂಪರ್ಕ ತಂತ್ರಜ್ಞಾನಕ್ಕೆ ಹೋಲಿಸಿದಾಗ 40 Gb/s ವೇಗ ಒದಗಿಸುತ್ತದೆ.* ಬಳಕೆಯ ವಿಧಾನ, ತಾಂತ್ರಿಕ ವೈಶಿಷ್ಟ್ಯ ಮತ್ತು ಇತರ ಅಂಶಗಳನ್ನು ಗಮನಿಸಿದರೆ ಪರ್ಫಾಮೆನ್ಸ್‌ನಲ್ಲಿ ವ್ಯತ್ಯಾಸ ಕಾಣಿಸಬಹುದು.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT