ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಐ ಹೂಡಿಕೆ ರೂ. 49000 ಕೋಟಿ

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ(ಎಫ್‌ಐಐ) ಭಾರತದ ಷೇರುಪೇಟೆಗೆ ಹರಿದು ಬರುವ ಬಂಡವಾಳ 2012ರಲ್ಲಿ 1000 ಕೋಟಿ ಡಾಲರ್(ಅಂದಾಜು ರೂ. 49,349 ಕೋಟಿ) ಗಡಿ ದಾಟಿದೆ ಎಂದು  ಮಾರುಕಟ್ಟೆ ನಿಯಂತ್ರಣ ಸಂಸ್ಥೆ `ಸೆಬಿ~ ಹೇಳಿದೆ.

ಜುಲೈನ ಮೊದಲ ಎರಡು ವಾರಗಳಲ್ಲಿ `ಎಫ್‌ಐಐ~ ಹೂಡಿಕೆದಾರರು ಮುಂಬೈ ಷೇರು ಪೇಟೆಯಲ್ಲಿ ರೂ. 100 ಕೋಟಿ ಡಾಲರ್‌ಬಂಡವಾಳ ತೊಡಗಿಸಿದ್ದಾರೆ. ಸಂವೇದಿ ಸೂಚ್ಯಂಕ 200 ಅಂಶ ಕುಸಿತ ಕಂಡ ಅವಧಿಯಲ್ಲೇ ಈ ಹೂಡಿಕೆ ದಾಖಲಾಗಿರುವುದು ವಿಶೇಷ. ಹಣಕಾಸು ಖಾತೆ ಜವಾಬ್ದಾರಿ ಪ್ರಧಾನಿ ಹೆಗಲೇರಿದ ನಂತರ `ಎಫ್‌ಐಐ~ ಚಟುವಟಿಕೆ ಹೆಚ್ಚಿದೆ.

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ `ಎಫ್‌ಐಐ~ ಒಟ್ಟು ರೂ. 44 ಸಾವಿರ ಕೋಟಿ ಬಂಡವಾಳ ವಾಪಸ್ ಪಡೆದಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ಜಾಗತಿಕ ಮಟ್ಟದ ಋಣಾತ್ಮಕ ಸಂಗತಿಗಳು ಇದಕ್ಕೆ ಕಾರಣ ಎಂದು `ಸೆಬಿ~ ವಿಶ್ಲೇಷಿಸಿದೆ.

ಜುಲೈ 3ರಿಂದ 13ರ ನಡುವೆ `ಎಫ್‌ಐಐ~ಗಳು ರೂ. 24,626   ಕೋಟಿ ಮೊತ್ತದ ಷೇರು ಖರೀದಿಸಿದ್ದು, ರೂ. 17,270 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ.  ನಿವ್ವಳ ಹೂಡಿಕೆ ರೂ. 7,356 ಕೋಟಿಗಳಷ್ಟಾಗಿದೆ.

ಜಾಗತಿಕ ಆರ್ಥಿಕ ಅಸ್ಥಿರತೆಯಿಂದ 2011ರಲ್ಲಿ `ಎಫ್‌ಐಐ~ ಚಟುವಟಿಕೆ ಅಷ್ಟೊಂದು ಚುರುಕಾಗಿರಲಿಲ್ಲ. ಕೇವಲ ರೂ. 20,293 ಕೋಟಿ ಬಂಡವಾಳ ಹರಿದು ಬಂದಿತ್ತು. ಸದ್ಯ ಭಾರತೀಯ  ಷೇರುಪೇಟೆಯಲ್ಲಿ 1,754 ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಚಟುವಟಿಕೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT