ಶನಿವಾರ, ಡಿಸೆಂಬರ್ 7, 2019
24 °C

ಅಂಚೆ ಉಳಿತಾಯ ಖಾತೆಗೆ ಡಿಜಿಟಲ್‌ ಬ್ಯಾಂಕಿಂಗ್ ಸೇವೆ

Published:
Updated:
ಅಂಚೆ ಉಳಿತಾಯ ಖಾತೆಗೆ ಡಿಜಿಟಲ್‌ ಬ್ಯಾಂಕಿಂಗ್ ಸೇವೆ

ನವದೆಹಲಿ: ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಡಿಜಿಟಲ್‌ ಬ್ಯಾಂಕಿಂಗ್ ಸೇವೆ ನೀಡಲು ಸರ್ಕಾರ ಮುಂದಾಗಿದೆ.

‘ಅಂಚೆ ಉಳಿತಾಯ ಖಾತೆಗಳನ್ನು ಭಾರತೀಯ ಅಂಚೆ ಪೇಮೆಂಟ್ಸ್‌ ಬ್ಯಾಂಕ್‌ಗೆ (ಐಪಿಪಿಬಿ) ಸಂಪರ್ಕಿಸಲು ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದೆ. ಇದರಿಂದ ಗ್ರಾಹಕರು ಯಾವುದೇ ಬ್ಯಾಂಕ್‌ ಖಾತೆಗೆ ಬೇಕಿದ್ದರೂ ಹಣ ವರ್ಗಾವಣೆ ಮಾಡಲು ಸಾಧ್ಯವಾಗಲಿದೆ’ ಎಂದು ಮೂಲಗಳು ತಿಳಿಸಿವೆ. ಇದು ಕಡ್ಡಾಯವಲ್ಲ. ಗ್ರಾಹಕರು ಬಯಸಿದರೆ ಮಾತ್ರವೇ ಐಪಿಪಿಬಿ ಸಂಪರ್ಕಿಸಲಾಗುವುದು. ಮೇ ತಿಂಗಳಿನಿಂದ ಡಿಜಿಟಲ್‌ ಬ್ಯಾಂಕಿಂಗ್‌ ಸೇವೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂಚೆ ಇಲಾಖೆಯ ಕೋರ್‌ ಬ್ಯಾಂಕಿಂಗ್‌ ಸೇವೆಯಲ್ಲಿ ಅಂಚೆ ಕಚೇರಿಯ ಉಳಿತಾಯ ಬ್ಯಾಂಕ್‌ ಖಾತೆಗಳಿಗೆ ಮಾತ್ರವೇ ಹಣ ವರ್ಗಾವಣೆ ಸಾಧ್ಯವಾಗಲಿದೆ.

ಪ್ರತಿಕ್ರಿಯಿಸಿ (+)