ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಪುನರ್ಧನ ಯೋಜನೆಯಡಿ ₹ 80 ಸಾವಿರ ಕೋಟಿ ವೆಚ್ಚ ಮಾಡಲು ಒಪ್ಪಿಗೆ ನೀಡಬೇಕೆಂಬ ಪ್ರಸ್ತಾವವನ್ನು ಕೇಂದ್ರ ಸರ್ಕಾರವು ಸಂಸತ್ತಿನ ಮುಂದಿಟ್ಟಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿಯೇ ಈ ಪುನರ್ಧನ ಯೋಜನೆ ಜಾರಿಗೆ ಬರಲಿದೆ. ಬಡ್ಡಿ ಪಾವತಿ ಮತ್ತು ಇತರ ಸಂಗತಿಗಳನ್ನು ಆರ್ಥಿಕ ವ್ಯವಹಾರಗಳ ಸಚಿವಾಲಯ ನೋಡಿಕೊಳ್ಳಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

ಉದ್ದೇಶಿತ ಪುನರ್ಧನ ಬಾಂಡ್‌ಗಳು ಶಾಸನಬದ್ಧ ನಗದು ಅನುಪಾತ (ಎಸ್‌ಎಲ್‌ಆರ್) ಸ್ಥಾನಮಾನ ಹೊಂದಿರುವುದಿಲ್ಲ ಮತ್ತು ಅವುಗಳ ವಹಿವಾಟನ್ನೂ ನಡೆಸುವಂತಿಲ್ಲ. ಬ್ಯಾಂಕ್‌ಗಳು ತಮ್ಮ ಠೇವಣಿಗಳ ನಿರ್ದಿಷ್ಟ ಮೊತ್ತವನ್ನು ಸರ್ಕಾರಿ ಸಾಲಪತ್ರಗಳಲ್ಲಿ ತೊಡಗಿಸುವುದಕ್ಕೆ ‘ಎಸ್‌ಎಲ್‌ಆರ್’ ಎನ್ನುತ್ತಾರೆ.

‘ಎಸ್‌ಎಲ್‌ಆರ್’ ಸ್ಥಾನಮಾನ ಹೊಂದಿರುವ ಸಾಲಪತ್ರಗಳನ್ನು ಮಾತ್ರ ಷೇರುಪೇಟೆಗಳಲ್ಲಿ ಖರೀದಿ ಮತ್ತು ಮಾರಾಟ ಮಾಡಬಹುದಾಗಿದೆ.

ಬ್ಯಾಂಕ್ ಪುನರ್ಧನದ ಈ ₹ 80 ಸಾವಿರ ಕೋಟಿಗಳ ಹೆಚ್ಚುವರಿ ವೆಚ್ಚವನ್ನು ಸರ್ಕಾರಿ ಸಾಲಪತ್ರ ನೀಡಿಕೆ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.