ದುಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಭಾರತ ತಂಡದ ನಾಯಕ ಶುಭಮನ್ ಗಿಲ್, ದೀರ್ಘ ಮಾದರಿಯ ಬ್ಯಾಟರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಎಜ್ಬಾಸ್ಟನ್ನಲ್ಲಿ ನಡೆದ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 269 ರನ್ ಹಾಗೂ ಎರಡನೇ ಇನಿಂಗ್ಸ್ನಲ್ಲಿ 161 ರನ್ ಗಳಿಸಿದ್ದ ಗಿಲ್, ಪಂದ್ಯವೊಂದರಲ್ಲಿ ಎರಡು ಬಾರಿ 150ಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಎರಡನೇ ಬ್ಯಾಟರ್ ಎನಿಸಿಕೊಂಡರು. ಅದರೊಂದಿಗೆ, ಭಾರತ ತಂಡವು 336 ರನ್ ಜಯಿಸಿ, ಸರಣಿಯಲ್ಲಿ 1–1 ಸಮಬಲ ಸಾಧಿಸಲು ನೆರವಾದರು.

24 ವರ್ಷ ಗಿಲ್, ಈ ಸರಣಿಗೂ ಮುನ್ನ 23ನೇ ಸ್ಥಾನದಲ್ಲಿದ್ದರು. ಮೊದಲ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ 20ನೇ ಸ್ಥಾನಕ್ಕೆ ಜಿಗಿದಿದ್ದ ಅವರು, ಇದೀಗ 15 ಸ್ಥಾನ ಮೇಲೇರಿ 6ರಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಖಾತೆಯಲ್ಲಿ ಒಟ್ಟು 807 ಪಾಯಿಂಟ್ಗಳಿವೆ. 2023ರ ಸೆಪ್ಪೆಂಬರ್ನಲ್ಲಿ 14ನೇ ಸ್ಥಾನಕ್ಕೇರಿದ್ದು, ಅವರ ಅತ್ಯುತ್ತಮ ರ್ಯಾಂಕ್ ಆಗಿತ್ತು.

ಈ ಟೂರ್ನಿಯಲ್ಲಿ 2 ಪಂದ್ಯಗಳ ನಾಲ್ಕು ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಗಿಲ್, ಈವರೆಗೆ ಬರೋಬ್ಬರಿ 585 ರನ್ ಬಾರಿಸಿದ್ದಾರೆ.

ಭಾರತದ ಬ್ಯಾಟರ್ಗಳ ಪೈಕಿ ಯಶಸ್ವಿ ಜೈಸ್ವಾಲ್ (4) ಹಾಗೂ ರಿಷಭ್ ಪಂತ್ (8) ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಜೈಸ್ವಾಲ್ ಬಳಿ 858 ಪಾಯಿಂಟ್ ಹಾಗೂ ಪಂತ್ ಬಳಿ 790 ಪಾಯಿಂಟ್ಗಳಿವೆ.
.ನಾಯಕನಾಗಿ ಗಿಲ್ ಹನಿಮೂನ್ ಅವಧಿ ಆನಂದಿಸುತ್ತಿದ್ದಾರೆ: ಗಂಗೂಲಿ .ಟೆನಿಸ್ ಆಟಗಾರರು ಭಾರತ-ಪಾಕ್ ಪಂದ್ಯಕ್ಕೆ ಸಮನಾದ ಒತ್ತಡ ನಿಭಾಯಿಸುತ್ತಾರೆ: ಕೊಹ್ಲಿ.
ಇಂಗ್ಲೆಂಡ್ನವರಾದ ಹ್ಯಾರಿ ಬ್ರೂಕ್ (886 ಪಾಯಿಂಟ್), ಜೋ ರೂಟ್ (868 ಪಾಯಿಂಟ್) ಹಾಗೂ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ (867 ಪಾಯಿಂಟ್) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿ ಇದ್ದಾರೆ.

ತಂಡಗಳ ಲಿಸ್ಟ್ನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಭಾರತ ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಲ್ಲಿ ಇವೆ.

34 ಸ್ಥಾನ ಜಿಗಿದ ಮಲ್ಡರ್
ಜಿಂಬಾಬ್ವೆ ವಿರುದ್ಧದ ಟೆಸ್ಟ್ನಲ್ಲಿ ಅಜೇಯ 367 ರನ್ ಗಳಿಸಿದ್ದ ವಿಯಾನ್ ಮಲ್ಡರ್ 34 ಸ್ಥಾನ ಜಿಗಿತ ಕಂಡಿದ್ದಾರೆ. 669 ಪಾಯಿಂಟ್ಗಳೊಂದಿಗೆ 22ರಲ್ಲಿ ಕಾಣಿಸಿಕೊಂಡಿದ್ದಾರೆ. ಅವರು, ವೆಸ್ಟ್ ಇಂಡೀಸ್ ದಿಗ್ಗಜ ಬ್ರಯಾನ್ ಲಾರಾ ಅವರ (ಅಜೇಯ 400 ರನ್) ಸಾರ್ವಕಾಲಿಕ ದಾಖಲೆ ಮುರಿಯುವ ಅವಕಾಶವಿದ್ದರೂ, ಇನಿಂಗ್ಸ್ ಡಿಕ್ಲೇರ್ ಘೋಷಣೆ ಮಾಡಿ ಸುದ್ದಿಯಾಗಿದ್ದಾರೆ.

ಮುಂದುವರಿದ ಬೂಮ್ರಾ
ಬೌಲರ್ಗಳ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ (898 ಪಾಯಿಂಟ್) ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಕಾರ್ಯಭಾರದ ಭಾಗವಾಗಿ ಅವರು ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಆಡದಿದ್ದರೂ ಅಗ್ರಸ್ಥಾನಕ್ಕೆ ಚ್ಯುತಿಬಂದಿಲ್ಲ.

ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (851 ಪಾಯಿಂಟ್), ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (840 ಪಾಯಿಂಟ್) ನಂತರದ ಸ್ಥಾನಗಳಲ್ಲಿ ಇದ್ದಾರೆ.

6 ಸ್ಥಾನ ಮೇಲೇರಿರುವ ಮೊಹಮ್ಮದ್ ಸಿರಾಜ್, 619 ಪಾಯಿಂಟ್ಗಳೊಂದಿಗೆ 22ರಲ್ಲಿ ಕಾಣಿಸಿಕೊಂಡಿದ್ದಾರೆ.

ಆಲ್ರೌಂಡರ್ಗಳಲ್ಲಿ ಜಡೇಜ ಬೆಸ್ಟ್
ಭಾರತದ ರವೀಂದ್ರ ಜಡೇಜ, ಆಲ್ರೌಂಡರ್ಗಳ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ಖಾತೆಯಲ್ಲಿ 391 ಪಾಯಿಂಟ್ಗಳಿವೆ. ಬಾಂಗ್ಲಾದೇಶದ ಮೆಹದಿ ಹಸನ್ ಮಿರಾಜ್ (305 ಪಾಯಿಂಟ್) ಮತ್ತು ಮಲ್ಡರ್ (284 ಪಾಯಿಂಟ್) ನಂತರದ ಸ್ಥಾನಗಳಲ್ಲಿ ಇದ್ದಾರೆ.
.Ind vs Eng Test: ಲಾರ್ಡ್ಸ್ನಲ್ಲಿ ಸವಾಲಿನ ಪಿಚ್ ನಿರೀಕ್ಷೆ.RSA vs ZIM Test | ಮಲ್ಡರ್ ಅಜೇಯ 367 ‘ಡಿಕ್ಲೇರ್’: ಲಾರಾ ದಾಖಲೆ ಸುರಕ್ಷಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.