ಬಡ್ಡಿದರ ಹೆಚ್ಚಿಸಿದ ಫೆಡರಲ್‌ ರಿಸರ್ವ್‌

7
ಇನ್ನಷ್ಟು ಬಡ್ಡಿದರ ಏರಿಕೆ ಸುಳಿವು ನೀಡಿದ ಬ್ಯಾಂಕ್‌

ಬಡ್ಡಿದರ ಹೆಚ್ಚಿಸಿದ ಫೆಡರಲ್‌ ರಿಸರ್ವ್‌

Published:
Updated:

ವಾಷಿಂಗ್ಟನ್‌ (ಎಎಫ್‌ಪಿ): ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆಗಿರುವ ಫೆಡರಲ್ ರಿಸರ್ವ್, 2018ರಲ್ಲಿ ಸತತ ಎರಡನೇ ಬಾರಿಗೆ ಸಾಲದ ಮೇಲಿನ ಬಡ್ಡಿದರದಲ್ಲಿ ಏರಿಕೆ ಮಾಡಿದೆ.

ಈ ಹಣಕಾಸು ವರ್ಷದಲ್ಲಿ ಇನ್ನೂ ಎರಡು ಬಾರಿ ಹಾಗೂ 2019ರಲ್ಲಿ ನಾಲ್ಕು ಬಾರಿ ಬಡ್ಡಿದರ ಹೆಚ್ಚಿಸುವ ಸುಳಿವನ್ನೂ ನೀಡಿದೆ. ಹಣದುಬ್ಬರ ಏರಿಕೆಯಾಗುವ ಸಾಧ್ಯತೆಯನ್ನು ಮನಗಂಡು ಬಡ್ಡಿದರ ಹೆಚ್ಚಿಸುತ್ತಿರುವುದಾಗಿ ಹೇಳಿದೆ.

ಶೇ 0.25 ರಷ್ಟು ಬಡ್ಡಿದರ ಏರಿಕೆ ಮಾಡಲು ಕೇಂದ್ರೀಯ ಬ್ಯಾಂಕ್‌ನ ಮುಕ್ತ ಮಾರುಕಟ್ಟೆ ಸಮಿತಿಯ ಸದಸ್ಯರು ಸಮ್ಮತಿ ಸೂಚಿಸಿದ್ದಾರೆ. ಇದರಿಂದ ಶೇ 1.75 ರಷ್ಟಿದ್ದ ಮೂಲ ಬಡ್ಡಿದರವು ಶೇ 2ಕ್ಕೆ ಏರಿಕೆಯಾಗಿದೆ.

2018ರ ಮಾರ್ಚ್‌ನಲ್ಲಿ ಶೇ 0.25 ರಷ್ಟು ಹೆಚ್ಚಿಸಿದ್ದರಿಂದ ಮೂಲ ಬಡ್ಡಿದರ ಶೇ 1.75ಕ್ಕೆ ತಲುಪಿತ್ತು.

**

2015ರ ನಂತರ 6ನೇ ಬಾರಿ ಬಡ್ಡಿದರ ಏರಿಕೆ

* ಸುಸ್ಥಿರ ಅಭಿವೃದ್ಧಿಗೆ ಕ್ರಮ

* ಶೇ 2 ರಲ್ಲಿ ಹಣದುಬ್ಬರ ನಿಯಂತ್ರಿಸುವ ನಿರೀಕ್ಷೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry