ಹೊಸ ಸ್ವಿಫ್ಟ್‌ ದಾಖಲೆ ಮಾರಾಟ

7

ಹೊಸ ಸ್ವಿಫ್ಟ್‌ ದಾಖಲೆ ಮಾರಾಟ

Published:
Updated:
ಹೊಸ ಸ್ವಿಫ್ಟ್‌ ದಾಖಲೆ ಮಾರಾಟ

ಬೆಂಗಳೂರು: ಮಾರುತಿ ಸುಜುಕಿಯ ಹೊಸ ಸ್ವಿಫ್ಟ್‌ ಕಾರ್‌ ಮಾರಾಟ ದಾಖಲೆ ಬರೆದಿದೆ.

145 ದಿನಗಳಲ್ಲಿ ಒಂದು ಲಕ್ಷ ಕಾರ್‌ಗಳು ಮಾರಾಟವಾಗಿವೆ. ಮೂರನೇ ತಲೆಮಾರಿನ ಈ ಸ್ವಿಫ್ಟ್‌ ಕಾರ್‌ ಅತ್ಯಲ್ಪ ಅವಧಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ದೇಶದ ಎಲ್ಲ ಭಾಗಗಳಿಂದ ಈ ಕಾರ್‌ಗೆ ಉತ್ತೇಜಕರ ಸ್ಪಂದನೆ ಸಿಕ್ಕಿದೆ.

‘ಕಡಿಮೆ ಸಮಯದಲ್ಲಿ ಮಾರಾಟ ದಾಖಲೆ ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಉತ್ಕೃಷ್ಟ ಕಾರ್ಯಕ್ಷಮತೆ ಮತ್ತು ಸುರಕ್ಷತೆ ಅಳವಡಿಸಿರುವ ಕಾರ್‌ ಅನ್ನು ಪೈಪೋಟಿ ಮೇಲೆ ಖರೀದಿಸಿದ ಗ್ರಾಹಕರಿಗೆ ಕೃತಜ್ಞರಾಗಿದ್ದೇವೆ. ಸ್ವಿಫ್ಟ್‌ನಲ್ಲಿ ಜನರು ಇರಿಸಿರುವ ವಿಶ್ವಾಸಕ್ಕೆ ಇದು ಪ್ರತೀಕವಾಗಿದೆ’ ಎಂದು ಸಂಸ್ಥೆಯ ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಆರ್‌. ಎಸ್‌. ಕಲ್ಸಿ ಅವರು ಪ್ರತಿಕ್ರಿಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry