ಸಂಸತ್ತಿನ ಇತಿಹಾಸದಲ್ಲಿ ಅಪರೂಪ ಎಂಬಂತೆ ಇದೇ ಮೊದಲ ಬಾರಿ ಕೇಂದ್ರ ಬಜೆಟ್ ಫೆಬ್ರುವರಿ 1ರಂದು ಭಾನುವಾರ ಮಂಡನೆಯಾಗುತ್ತಿದೆ. ಇದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸತತ ಒಂಬತ್ತನೇ ಬಜೆಟ್ ಆಗಿದೆ. ಬಜೆಟ್ ಅಧಿವೇಶನದ ಮೊದಲ ಹಂತ ಫೆಬ್ರವರಿ 13ಕ್ಕೆ ಮುಕ್ತಾಯವಾಗಲಿದೆ. ಮಾರ್ಚ್ 9ರಂದು ಬಜೆಟ್ ಅಧಿವೇಶನದ ಎರಡನೇ ಹಂತ ಶುರುವಾಗಿ, ಏಪ್ರಿಲ್ 2ರಂದು ಅಂತ್ಯಗೊಳ್ಳಲಿದೆ.