ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union budget 2022 Live | ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನ ಪರಿಚಯ ಇಲ್ಲಿದೆ
LIVE

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ.ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಾವೇರಿ–ಪೆನ್ನಾರ್ ನದಿ ಜೋಡಣೆಗೆ ಒಪ್ಪಿಗೆ ಸೂಚಿಸಲಾಗಿದೆ. 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಕರೆನ್ಸಿ, ಈ ವರ್ಷದಿಂದಲೇ 5ಜಿ ಜಾರಿ ಮಾಡಲು ನಿರ್ಧರಿಸಲಾಗಿದೆ. ಸಹಕಾರ ಸಂಘಗಳ ತೆರಿಗೆ ದರ ಶೇ.15ಕ್ಕೆ ಇಳಿಕೆ ಮಾಡಲಾಗಿದೆ.
Last Updated 1 ಫೆಬ್ರುವರಿ 2022, 9:08 IST
ಅಕ್ಷರ ಗಾತ್ರ
09:0801 Feb 2022

ಕೇಂದ್ರ ಬಜೆಟ್‌ನಲ್ಲಿ ಡಿಜಿಟಲ್ ಯೂನಿವರ್ಸಿಟಿ ಘೋಷಣೆ: ಏನಿದರ ಅರ್ಥ? #UnionBudget

09:0501 Feb 2022

Union Budget 2022: ಕೇಂದ್ರ ಬಜೆಟ್‌ನಲ್ಲಿ ಯಾವುದು ಇಳಿಕೆ? ಯಾವುದು ಏರಿಕೆ?

07:5501 Feb 2022

ಮಾನಸಿಕ ಆರೋಗ್ಯ ಸಮಾಲೋಚನೆಗಾಗಿ ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮ

ಮಾನಸಿಕ ಆರೋಗ್ಯ ಸಮಾಲೋಚನೆಗಾಗಿ ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಐಐಟಿ ಬೆಂಗಳೂರು ಕಾರ್ಯಕ್ರಮಕ್ಕೆ ತಾಂತ್ರಿಕ ಬೆಂಬಲವನ್ನು ನೀಡುತ್ತದೆ.

ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಗಾಗಿ ಮುಕ್ತ ವೇದಿಕೆಯನ್ನು ಹೊರತರಲಾಗುವುದು ಎಂದು ಅವರು ಹೇಳಿದರು.

‘ಇದು ಆರೋಗ್ಯ ಪೂರೈಕೆದಾರರ ಡಿಜಿಟಲ್ ನೋಂದಣಿಗಳು ಮತ್ತು ಆರೋಗ್ಯ ಸೌಲಭ್ಯಗಳು, ಅನನ್ಯ ಆರೋಗ್ಯ ಗುರುತು ಮತ್ತು ಆರೋಗ್ಯ ಸೌಲಭ್ಯಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಒಳಗೊಂಡಿರುತ್ತದೆ’ಎಂದು ಅವರು ಹೇಳಿದರು.

ಈ ಕಾರ್ಯಕ್ರಮವು 23 ಟೆಲಿ ಮೆಂಟಲ್ ಹೆಲ್ತ್ ಕೇಂದ್ರಗಳ ನೆಟ್‌ವರ್ಕ್ ಅನ್ನು ಒಳಗೊಂಡಿರುತ್ತದೆ. ಇದಕ್ಕೆ ಪ್ರಧಾನ ಕೇಂದ್ರವಾಗಿ ಬೆಂಗಳೂರಿನ ನಿಮ್ಹಾನ್ಸ್ ಇರಲಿದೆ. ಬೆಂಗಳೂರಿನ ಐಐಐಟಿ ಸಂಸ್ಥೆ ತಾಂತ್ರಿಕ ಸಹಾಯವನ್ನು ನೀಡಲಿದೆ ಎಂದು ಸೀತಾರಾಮನ್ ತಿಳಿಸಿದರು.

07:3201 Feb 2022

ಸಹಕಾರ ಸಂಘಗಳ ತೆರಿಗೆ ದರ ಶೇ.15ಕ್ಕೆ ಇಳಿಕೆ

* ಸಹಕಾರ ಸಂಘಗಳ ತೆರಿಗೆ ದರ ಶೇ.15ಕ್ಕೆ ಇಳಿಕೆ

* ಡಿಜಿಟಲ್ ಆಸ್ತಿ ವರ್ಗಾವಣೆಯ ಮೇಲೆ 30% ತೆರಿಗೆ

07:3001 Feb 2022

ಇ-ಪಾಸ್‌ಪೋರ್ಟ್‌ಗಳು, 5ಜಿ

* 2022-23ರ ಒಳಗೆ 5G ಮೊಬೈಲ್ ಸೇವೆಗಳು ಬಿಡುಗಡೆ

* ಎಂಬೆಡೆಡ್ ಚಿಪ್ಸ್ ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನದೊಂದಿಗೆ ಇ-ಪಾಸ್‌ಪೋರ್ಟ್‌ಗಳನ್ನು ಮುಂದಿನ ವರ್ಷ ಹೊರತರಲಾಗುವುದು.

* ಎಲೆಕ್ಟ್ರಾನಿಕ್ ವಲಯಕ್ಕೆ ಉತ್ತೇಜನ ನೀಡಲು, ಬ್ಯಾಟರಿ ವಿನಿಮಯ ನೀತಿಯನ್ನು ಪರಿಚಯಿಸಲಾಗುವುದು

* 400 ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು

* 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು, ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ಸೇವೆ.
 

07:2101 Feb 2022

ಮಿಲಿಟರಿ ಉಪಕರಣ ಉದ್ಯಮದಲ್ಲಿ ಖಾಸಗಿ ಉದ್ಯಮಕ್ಕೆ ಪ್ರೋತ್ಸಾಹ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಉದ್ಯಮ, ಸ್ಟಾರ್ಟ್‌ಅಪ್‌ಗಳು ಮತ್ತು ಅಕಾಡೆಮಿಗಳಿಗೆ ತೆರೆಯಲಾಗುವುದು ಎಂದು ಸಚಿವೆ ನಿರ್ಮಲಾ ಘೋಷಿಸಿದರು.

ಮಿಲಿಟರಿ ಪ್ಲಾಟ್‌ಫಾರ್ಮ್‌ಗಳು ಮತ್ತು ಸಲಕರಣೆಗಳ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲು ಖಾಸಗಿ ಉದ್ಯಮವನ್ನು ಪ್ರೋತ್ಸಾಹಿಸಲಾಗುವುದು. ರಕ್ಷಣಾ ಕ್ಷೇತ್ರದಲ್ಲಿ ಆರ್ & ಡಿ ಬಜೆಟ್‌ನ 68% ಮೇಕ್ ಇನ್ ಇಂಡಿಯಾಗೆ ಮೀಸಲಿಡಲಾಗಿದೆ ಎಂದು ಸೀತಾರಾಮನ್ ಹೇಳಿದರು.

07:0901 Feb 2022

75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ

ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸಲು ದೇಶಾದ್ಯಂತ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಡಿಜಿಟಲ್ ಬ್ಯಾಂಕಿಂಗ್ ತನ್ನ ಪ್ರಯೋಜನಗಳನ್ನು ಗ್ರಾಹಕ ಸ್ನೇಹಿಯಾಗಿ ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯಲಿದೆ ಎಂದು ಸೀತಾರಾಮನ್ ಹೇಳಿದರು. "ಆರ್ಥಿಕ ಮತ್ತು ಬಳಕೆದಾರ ಸ್ನೇಹಿಯಾಗಿರುವ ಪಾವತಿ ಪ್ಲಾಟ್‌ಫಾರ್ಮ್‌ಗಳ ಬಳಕೆಯನ್ನು ಉತ್ತೇಜಿಸಲು ಸಹ ಗಮನಹರಿಸಲಾಗುವುದು" ಎಂದು ಅವರು ಹೇಳಿದರು
 

07:0301 Feb 2022

ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು 5% ಕ್ಕೆ ಇಳಿಕೆ

ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು 5% ಕ್ಕೆ ಇಳಿಸಲಾಗುವುದು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

07:0101 Feb 2022
06:5701 Feb 2022

ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು 10% ರಿಂದ 14% ಕ್ಕೆ

ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು 10% ರಿಂದ 14% ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ತರಲು ಸಹಾಯ ಮಾಡುತ್ತದೆ: ನಿರ್ಮಲಾ ಸೀತಾರಾಮನ್