ಭಾನುವಾರ, ಏಪ್ರಿಲ್ 2, 2023
33 °C

Union Budget 2023 highlights: ಕೇಂದ್ರ ಬಜೆಟ್ ಮುಖ್ಯಾಂಶಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದರು. ಬಜೆಟ್ ಮುಖ್ಯಾಂಶಗಳು ಇಂತಿವೆ.

ಬಜೆಟ್ ಕುರಿತು ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಕೇಂದ್ರ ಬಜೆಟ್ 2023

ಯಾವ ಇಲಾಖೆಗೆ ಎಷ್ಟು ಅನುದಾನ? (ಲಕ್ಷ ಕೋಟಿ ರೂಪಾಯಿಗಳಲ್ಲಿ)

ರಕ್ಷಣೆ: 5.94
ರಸ್ತೆ ಹಾಗೂ ಹೆದ್ದಾರಿ: 2.70
ರೈಲ್ವೆ: 2.41
ಗ್ರಾಹಕ ವ್ಯವಹಾರ, ಆಹಾರ & ನಾಗರಿಕ ಪೂರೈಕೆ: 2.06 
ಗೃಹ: 1.96
ರಾಸಾಯನಿಕ ಹಾಗೂ ರಸಗೊಬ್ಬರ: 1.78
ಗ್ರಾಮೀಣಾಭಿವೃದ್ಧಿ: 1.60
ಕೃಷಿ ಹಾಗೂ ರೈತ ಕಲ್ಯಾಣ: 1.25
ದೂರಸಂಪರ್ಕ: 1.23

ಬಜೆಟ್ 2023: ನಿಮ್ಮ ಆದಾಯ ತೆರಿಗೆ ಲೆಕ್ಕಾಚಾರ ಹಾಕಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ ಪ್ರತಿಕ್ರಿಯೆ...
ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸಲು ಅಮೃತ ಕಾಲದ ಮೊದಲ ಬಜೆಟ್ ಬುನಾದಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 

ಸಂಪೂರ್ಣ ಮಾಹಿತಿಗಾಗಿ ಕ್ಲಿಕ್ ಮಾಡಿರಿ...

ಸಿಬಿಐಗೆ ₹946 ಕೋಟಿ 
ಕೇಂದ್ರ ಸರ್ಕಾರ 2023–24ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ತನಿಖಾ ದಳಕ್ಕೆ(ಸಿಬಿಐ) ₹946 ಕೋಟಿ  ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅನುದಾನ ಶೇಕಡ 4.4ರಷ್ಟು ಹೆಚ್ಚಾಗಿದೆ. ದೇಶದ ಅತ್ಯುನ್ನತ ತನಿಖಾ ಸಂಸ್ಥೆ ವಿವಿಧ ರಾಜ್ಯಗಳು, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಿಂದ ಹಸ್ತಾಂತರಿಸಲ್ಪಟ್ಟ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ದೇಶದಲ್ಲಿನ ಬಹುತೇಕ ಅಪರಾಧ ಮತ್ತು ವಂಚನೆ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ತನ್ನ ಮಾನವಸಂಪನ್ಮೂಲವನ್ನು ಸಾಕಷ್ಟು ವಿಸ್ತರಿಸಿಕೊಂಡಿದೆ.
2022–23ರ ಬಜೆಟ್‌ನಲ್ಲಿ ಸಂಸ್ಥೆಗೆ ₹ 841.9 ಕೋಟಿ ಲಭಿಸಿತು.

ರಕ್ಷಣಾ ವಲಯಕ್ಕೆ ₹5.94 ಲಕ್ಷ ಕೋಟಿ
2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ₹5.94 ಲಕ್ಷ ಕೋಟಿ ಮೀಸಲಿಡಲಾಗಿದೆ. ಕಳೆದ ಬಾರಿ ರಕ್ಷಣಾ ವಲಯಕ್ಕೆ ₹5.25 ಕೋಟಿ ಮೀಸಲಿಡಲಾಗಿತ್ತು. 

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ...

* ₹7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ

ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕೇಂದ್ರ ಬಜೆಟ್‌ನಲ್ಲಿ ಪರಿಷ್ಕರಿಸಲಾಗಿದ್ದು, ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂಪಾಯಿಯಿಂದ 7 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಹೀಗಾಗಿ, 7.ಲಕ್ಷದವರೆಗೆ ಆದಾಯವುಳ್ಳವರಿಗೆ ಯಾವುದೇ ತೆರಿಗೆ ಇರುವುದಿಲ್ಲ.

ಹಳೆ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂಪಾಯಿಯಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. 3 ಲಕ್ಷದಿಂದ 6 ಲಕ್ಷದವರಗೆ ಶೇಕಡ 5ರಷ್ಟು, 6 ರಿಂದ 9 ಲಕ್ಷದವರೆಗೆ ಶೇಕಡ10 ರಷ್ಟು, 9 ಲಕ್ಷದಿಂದ 12 ಲಕ್ಷದವರೆಗೆ ಶೇಕಡ 15ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಬೆಲೆ ಏರಿಕೆಯಾದ ಸರಕುಗಳ ವಿವರ: ಸಿಗರೇಟ್, ಎಲೆಕ್ಟ್ರಿಕ್ ಚಿಮಣಿ, ಆಮದು ಮಾಡಿಕೊಂಡ ರಬ್ಬರ್, ಚಿನ್ನ, ಬೆಳ್ಳಿ, ಬ್ರಾಂಡೆಡ್ ಬಟ್ಟೆಗಳು, ಪ್ಲಾಟಿನಮ್, ವಜ್ರ, ಎಕ್ಸ್​ರೇ, ಹೆಡ್​ಫೋನ್, ಇಯರ್ ಫೋನ್, ವೈದ್ಯಕೀಯ ಉತ್ಪನ್ನಗಳು ದುಬಾರಿಯಾಗಲಿವೆ.

* ಬೆಲೆ ಕಡಿಮೆಯಾದ ಸರಕುಗಳ ವಿವರ: ಮೊಬೈಲ್ ಫೋನ್, ಲ್ಯಾಪ್‌ಟಾಪ್‌, ಸೈಕಲ್, ಎಲ್​ಇಡಿ ಟಿವಿ, ಟಿವಿ ಪ್ಯಾನಲ್, ಆಟೊಮೊಬೈಲ್, ಜವಳಿ, ಎಲೆಕ್ಟ್ರಿಕ್ ವಾಹನ, ಕ್ಯಾಮೆರಾ ಲೆನ್ಸ್, ಜೈವಿಕ ಅನಿಲ ಆಧಾರಿತ ಉತ್ಪನ್ನಗಳು

* ಕೃಷಿ ವೇಗವರ್ಧಕ ನಿಧಿ ಸ್ಥಾಪನೆ

ಯುವ ಉದ್ಯಮಿಗಳು ಕೃಷಿ-ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಲು ಉತ್ತೇಜಕ ಕ್ರಮವಾಗಿ ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು. ರಾಜ್ಯಗಳ ಸಕ್ರಿಯ ಭಾಗವಹಿಸುವಿಕೆ, ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮಕ್ಕೆ ಉತ್ತೇನ ನೀಡಲಾಗುವುದು. 

* ಸೂಕ್ಷ್ಮ ನೀರಾವರಿ ಪ್ರೋತ್ಸಾಹಿಸಲು ಭದ್ರಾ ಮೇಲ್ದಂಡೆಗೆ ₹5,300 ಕೋಟಿ

ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಸೂಕ್ಷ್ಮ ನೀರಾವರಿ ಒದಗಿಸುವ ಗುರಿಯನ್ನು ಹೊಂದಿರುವ ಭದ್ರಾ ಮೇಲ್ಡಂಡೆ ಯೋಜನೆಗೆ 5,300 ಕೋಟಿ ರೂಪಾಯಿಗಳ ಕೇಂದ್ರ ನೆರವು ನೀಡಲಾಗುವುದು. 

* 157 ಹೊಸ ನರ್ಸಿಂಗ್ ಕಾಲೇಜು

2014ರ ನಂತರ ಆರಂಭವಾಗಿರುವ 157 ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜು ಆರಂಭಿಸಲಾಗುವುದು. 

* ಪ್ರಧಾನ ಮಂತ್ರಿ ಆವಾಸ್ ಯೋಜನೆ ಶೇಕಡ 66ರಷ್ಟು ವಿಸ್ತರಿಸಲಾಗಿದ್ದು, ಅನುದಾನ ₹79,000 ಕೋಟಿಗೆ ಹೆಚ್ಚಿಸಲಾಗಿದೆ

* ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರ ನೇಮಕ

3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿರುವ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಕೇಂದ್ರ ಸರ್ಕಾರವು ಮುಂದಿನ ಮೂರು ವರ್ಷಗಳಲ್ಲಿ  38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ.

ಶೇ 7.5  ಬಡ್ಡಿಯೊಂದಿಗೆ ಗರಿಷ್ಠ 2 ಲಕ್ಷ ರೂ.ವರೆಗೆ ಠೇವಣಿ ಮಾಡಲು ಮಹಿಳಾ ಸಮ್ಮಾನ್‌ ಅಡಿ ಅವಕಾಶ

ಶೇ 7.5  ಬಡ್ಡಿಯೊಂದಿಗೆ ಗರಿಷ್ಠ 2 ಲಕ್ಷ ರೂ.ವರೆಗೆ ಠೇವಣಿ ಇಡಲು ‘ಮಹಿಳಾ ಸಮ್ಮಾನ್’ ಉಳಿತಾಯ ಪ್ರಮಾಣಪತ್ರದ ಅಡಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಇದನ್ನು 2025ರ ವರೆಗೆ ವಿಸ್ತರಿಸಲಾಗುತ್ತದೆ. 

* ಒಂದು ಜಿಲ್ಲೆ, ಒಂದು ಉತ್ಪನ್ನಕ್ಕೆ ಪ್ರೋತ್ಸಾಹ

'ಒಂದು ಜಿಲ್ಲೆ ಒಂದು ಉತ್ಪನ್ನ' ವಸ್ತುಗಳು ಮತ್ತು ಜಿಐ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ಯೂನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ಉತ್ತೇಜನ ನೀಡಲಾಗುತ್ತದೆ. 

* ಯುವಕರ ಕೌಶಲ್ಯ ತರಬೇತಿಗಾಗಿ ‘ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0’ ಅನ್ನು ಪ್ರಾರಂಭಿಸಲಾಗುವುದು

* ಪ್ರವಾಸೋದ್ಯಮವನ್ನು ಉತ್ತೇಜಿಸಲು 'ಚಾಲೆಂಜ್ ಮೋಡ್' ಮೂಲಕ 50 ಸ್ಥಳಗಳನ್ನು ಆಯ್ಕೆ ಮಾಡಲು ಸರ್ಕಾರ ನಿರ್ಧರಿಸಿದೆ. 

ಇವನ್ನೂ ಓದಿ..

Union Budget 2023: ಧೂಮಪಾನಿಗಳ ಜೇಬಿಗೆ ಬಿಸಿ ಮುಟ್ಟಿಸಿದ ‘ಅಮೃತಕಾಲದ ಬಜೆಟ್’

Union Budget 2023 | ದೂರದೃಷ್ಟಿ ಇಲ್ಲದ ಬಜೆಟ್‌: ಮಲ್ಲಿಕಾರ್ಜುನ ಖರ್ಗೆ ಟೀಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು