ಸೋಮವಾರ, ಮೇ 23, 2022
26 °C
ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಡೆರೇಕ್ ಒಬ್ರಿಯಾನ್

ದೂರ ದೃಷ್ಟಿಯಿಲ್ಲದ ಬಜೆಟ್, ದೇಶ ಮಾರುವುದೇ ಇದರ ಉದ್ದೇಶ: ಟಿಎಂಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಇದು ನೂರಕ್ಕೆ ನೂರರು ದೂರದೃಷ್ಟಿ ಇಲ್ಲದ ಬಜೆಟ್‌. ದೇಶವನ್ನು‌ ಮಾರಾಟ ಮಾಡುವುದೇ ಈ ಬಜೆಟ್‌ನ ಪರಿಕಲ್ಪನೆ‘ – ಇದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೇಂದ್ರದ ಬಜೆಟ್‌ ಕುರಿತು ಪ್ರತಿಕ್ರಿಯಿಸಿರುವ ಪರಿ.

ಸಂಸತ್ತಿನಲ್ಲಿ ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ಗೆ ಪ್ರತಿಕ್ರಿಯಿಸಿದ ಟಿಎಂಸಿ ವಕ್ತಾರ ಡೆರೇಕ್ ಒಬ್ರಿಯನ್, ‘ಇದೊಂದು ನಕಲಿ ಬಜೆಟ್‌. ಇದರ ಉದ್ದೇಶ ದೇಶವನ್ನು ಮಾರುವುದು‘ ಎಂದು ಹೇಳಿದರು. ‘ಈಗಾಗಲೇ ರೈಲ್ವೆ, ವಿಮಾನನಿಲ್ದಾಣ, ಬಂದರು, ವಿಮಾ ಕಂಪನಿ ಮಾರಾಟವಾಗಿದೆ. ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳೂ ಮಾರಾಟವಾಗಿವೆ‘ ಎಂದು ಹೇಳಿದ್ದಾರೆ.

‘ಶ್ರೀಸಾಮಾನ್ಯ ಮತ್ತು ರೈತರನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ‘ ಎಂದು ದೂರಿದ ಒಬ್ರಿಯಾನ್, ‘ಈ ಬಜೆಟ್‌ ಬಡವರನ್ನು ಬಡವರಾಗಿಯೂ, ಶ್ರೀಮಂತರನ್ನು ಶ್ರೀಮಂತರನ್ನಾಗಿಯೂ ಮಾಡುತ್ತಿದ್ದು, ಮಧ್ಯಮವರ್ಗದವರಿಗೆ ಏನೂ ಇಲ್ಲದಂತೆ ಮಾಡಿದೆ‘ ಎಂದು ಆರೋಪಿಸಿದರು.

ಇದೇ ವೇಳೆ ಪಶ್ಚಿಮ ಬಂಗಾಳ ಸರ್ಕಾರ ಗ್ರಾಮೀಣ ರಸ್ತೆಗಳನ್ನು ಹೇಗೆ ಅಭಿವೃದ್ಧಿ ಮಾಡಿದೆ ಎಂಬುದನ್ನು ರಾಜ್ಯಸಭಾ ಸದಸ್ಯರೂ ಆದ ಒಬ್ರಿಯಾನ್ ಹೀಗೆ ವಿವರಿಸಿದರು;

‘2011ರವರೆಗೆ 39705 ಕಿ.ಮೀ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು. 2011–20ರ ಅವಧಿಯಲ್ಲಿ 88841 ಕಿ.ಮೀ ಉದ್ದದ ರಸ್ತೆಗಳು ಹಳ್ಳಿಗಳಲ್ಲಿ ಅಭಿವೃದ್ಧಿಯಾಗಿವೆ. ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಯಲ್ಲಿ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

‘ಅಂದು ಪಶ್ಚಿಮ ಬಂಗಾಳ ಮಾಡಿದ ಅಭಿವೃದ್ಧಿ ಕಾರ್ಯವನ್ನು ಕೇಂದ್ರ ಸರ್ಕಾರ ಈಗ ಮಾಡುವುದಾಗಿ ಭರವಸೆ ನೀಡುತ್ತಿದೆ. ಈ ಬಜೆಟ್‌ನಲ್ಲಿ ಪಶ್ಚಿಮ ಬಂಗಾಳದಲ್ಲಿ 625 ಕಿ.ಮೀ ರಸ್ತೆ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದೆ.  ಪಶ್ಚಿಮ ಬಂಗಾಳ ಸರ್ಕಾರ (2018–19) – 5111 ಕಿ.ಮೀ ಉದ್ದದಷ್ಟು ಹೊಸ ರಸ್ತೆಗಳನ್ನು ನಿರ್ಮಾಣ ಮಾಡಿದೆ. ದೇಶದಲ್ಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರವಾಗಿ ಹೊರ ಹೊಮ್ಮಿದೆ. 2019–20ರಲ್ಲಿ ಹೆಚ್ಚುವರಿಯಾಗಿ 1165 ಕಿ.ಮೀ ಉದ್ದ ರಸ್ತೆ ನಿರ್ಮಾಣ ಮಾಡಿದೆ.

ಇವುಗಳನ್ನೂ ಓದಿ...

Union Budget 2021 Live Updates| ಕೇಂದ್ರ ಬಜೆಟ್‌ನ ಸಂಪೂರ್ಣ ಮಾಹಿತಿ ​

Budget 2021: ದೇಶಾದ್ಯಂತ ಒಂದೇ ಪಡಿತರ ಕಾರ್ಡ್ ಯೋಜನೆ ಶೀಘ್ರದಲ್ಲೇ ಜಾರಿ

Budget 2021: ದೇಶದ ವಿವಿಧೆಡೆ 7 ಜವಳಿ ಪಾರ್ಕ್‌ ಸ್ಥಾಪನೆ

ಬಜೆಟ್ 2021: ಯಾವುದರ ದರ ಏರಿತು, ಯಾವುದಕ್ಕೆ ಇಳಿಯಿತು? ​

Budget 2021: ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉನ್ನತೀಕರಣ, ₹ 18 ಸಾವಿರ ಕೋಟಿ ​

Union Budget 2021: ಬೆಂಗಳೂರು ಮೆಟ್ರೋ ಯೋಜನೆಗೆ ₹14,788 ಕೋಟಿ ಘೋಷಣೆ ​

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು