2022ರ ವೇಳೆಗೆ ‘5ಜಿ’ ಸೇವೆ

7
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಕಾರ್ಯದರ್ಶಿ ಹೇಳಿಕೆ

2022ರ ವೇಳೆಗೆ ‘5ಜಿ’ ಸೇವೆ

Published:
Updated:
Deccan Herald

ನವದೆಹಲಿ: ‘ದೇಶಿ ದೂರಸಂಪರ್ಕ ವಲಯವು 2022ರ ವೇಳೆಗೆ ‘5ಜಿ’ ತಂತ್ರಜ್ಞಾನ ಅಳವಡಿಸಿಕೊಳ್ಳಲಿದೆ’ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಕಾರ್ಯದರ್ಶಿ ಎಸ್‌. ಜೆ. ಗುಪ್ತಾ ಹೇಳಿದ್ದಾರೆ.

‘ಮುಂದಿನ ಐದು ವರ್ಷಗಳಲ್ಲಿ ಡಿಜಿಟಲ್‌ ಸೌಲಭ್ಯವು ಅತ್ಯಾಧುನಿಕ ಸ್ವರೂಪ ಪಡೆದುಕೊಳ್ಳಲಿದೆ. ಕೃತಕ ಬುದ್ಧಿಮತ್ತೆ ಮತ್ತು ಬಿಗ್ ಡೇಟಾ ವಿಶ್ಲೇಷಣೆಯು ಬಳಕೆದಾರರ ವರ್ತನೆಯನ್ನೂ ಬದಲಾಯಿಸಲಿದೆ’ ಎಂದು ಅವರು ವಿಶ್ಲೇಷಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

‘ಮಾಧ್ಯಮ ಉದ್ದಿಮೆಯಲ್ಲಿ ನಾಟಕೀಯ ಬದಲಾವಣೆಗಳು ಕಂಡು ಬರಲಿವೆ. ಹೊಸ ತಂತ್ರಜ್ಞಾನ ಅಳವಡಿಕೆಯು ಮಾಧ್ಯಮ ಸಂಸ್ಥೆಗಳು ಯಶಸ್ಸು ಸಾಧಿಸಲು ನೆರವಾಗಲಿದೆ. ಡಿಜಿಟಲ್‌ ಸೌಲಭ್ಯದ ಮೂಲಕ ಮಾಧ್ಯಮ ಮಾಹಿತಿ ಸಂಗ್ರಹಿಸುವುದು ಗರಿಷ್ಠ ಮಟ್ಟದಲ್ಲಿ ಇರಲಿದೆ. ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚುತ್ತಿರುವುದರಿಂದ ಮಾಧ್ಯಮ ಮಾಹಿತಿ ಅಭಿವೃದ್ಧಿಯ ಸ್ವರೂಪವೂ ವ್ಯಾಪಕವಾಗಿ ಬದಲಾಗಲಿದೆ. ದೇಶದಲ್ಲಿ ಸದ್ಯಕ್ಕೆ 40 ಕೋಟಿ ಬಳಕೆದಾರರು ಉತ್ತಮ ಗುಣಮಟ್ಟದ ಅಂತರ್ಜಾಲ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಒನ್‌ಪ್ಲಸ್‌ನಿಂದ ‘5ಜಿ’ ಫೋನ್‌

ಹುವಾಯಿ: ಚೀನಾದ ಮೊಬೈಲ್‌ ತಯಾರಿಕಾ ಕಂಪನಿ ಒನ್‌ ಪ್ಲಸ್‌, ಮುಂದಿನ ವರ್ಷ ‘5ಜಿ’ ಸ್ಮಾರ್ಟ್‌ಫೋನ್‌ ತಯಾರಿಸುವ ಸಂಸ್ಥೆಗಳ ಸಾಲಿಗೆ ಸೇರ್ಪಡೆಯಾಗಲಿದೆ.

ಸ್ನ್ಯಾಪ್‌ಡ್ರಾಗನ್‌ ತಂತ್ರಜ್ಞಾನ ಶೃಂಗಸಭೆಯಲ್ಲಿ, ಸಂಸ್ಥೆಯ ಸಿಇಒ ಪೆಟೆ ಲಾವು ಈ ವಿಷಯ ತಿಳಿಸಿದ್ದಾರೆ. ದೂರಸಂಪರ್ಕ ಸಂಸ್ಥೆ ‘ಇಇ’ ಸಹಯೋಗದಲ್ಲಿ ಮುಂದಿನ ವರ್ಷ ಯುರೋಪ್‌ ಮಾರುಕಟ್ಟೆಗೆ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !