ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್‌ ವಿಆರ್‌ಎಸ್‌ಗೆ 70 ಸಾವಿರ ಸಿಬ್ಬಂದಿ ಸಮ್ಮತಿ

Last Updated 11 ನವೆಂಬರ್ 2019, 12:54 IST
ಅಕ್ಷರ ಗಾತ್ರ

ನವದೆಹಲಿ: ‘ಬಿಎಸ್‌ಎನ್‌ಎಲ್‌ನ 70 ಸಾವಿರ ಸಿಬ್ಬಂದಿಯು ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್‌) ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಸಂಸ್ಥೆಯ ಅಧ್ಯಕ್ಷ ಪಿ.ಕೆ. ಪೂರ್ವರ್‌ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದ ನಿರ್ದೇಶನದಂತೆ ಸಂಸ್ಥೆಯು ವಿಆರ್‌ಎಸ್‌ ಆಯ್ಕೆ ಮಾಡಿಕೊಳ್ಳಲು ನವೆಂಬರ್‌ 4 ರಿಂದ ಡಿಸೆಂಬರ್‌ 3ರ ಕಾಲಮಿತಿ ನಿಗದಿಪಡಿಸಿದೆ. 2020ರ ಜನವರಿ 31ರಿಂದ ಯೋಜನೆಯು ಅನ್ವಯಿಸಲಿದೆ.

50 ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಣೆ ಮತ್ತು ವಹಿವಾಟು ಯಾವುದೇ ಸಮಸ್ಯೆಗಳಿಲ್ಲದೆ ಸುಗಮವಾಗಿ ನಡೆಯುವಂತೆ ಕ್ರಮ ಕೈಗೊಳ್ಳುವಂತೆ ದೂರಸಂಪರ್ಕ ಇಲಾಖೆಯು ಸಂಸ್ಥೆಗೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT