ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಥವ್ಯವಸ್ಥೆ ಕೆಟ್ಟಿದೆ, ಪ್ಯಾಕೇಜ್‌ ಸಾಕಾಗದು’

Last Updated 30 ಸೆಪ್ಟೆಂಬರ್ 2020, 2:50 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದಲ್ಲಿ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಇರುವ ಅರ್ಥವ್ಯವಸ್ಥೆಗಳ ಸಾಲಿನಲ್ಲಿ ಭಾರತದ ಅರ್ಥವ್ಯವಸ್ಥೆಯೂ ಒಂದು ಎಂದು ಹೇಳಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ‘ಸಮಸ್ಯೆಯನ್ನುನಿಭಾಯಿಸಲು ಸರ್ಕಾರ ಘೋಷಿಸಿರುವ ಆರ್ಥಿಕ ಉತ್ತೇಜನ ಪ್ಯಾಕೇಜ್‌ ಸಾಕಾಗುವುದಿಲ್ಲ’ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಗಿದ್ದರೂ, ಹಾಲಿ ಆರ್ಥಿಕ ವರ್ಷದ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲೇ ದೇಶದ ಅರ್ಥ ವ್ಯವಸ್ಥೆಯು ಚೇತರಿಕೆ
ಯನ್ನು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್‌ ಮೂಲಕ ನಡೆದ ಕಾರ್ಯಕ್ರಮವೊಂದರಲ್ಲಿ ಮಾತ
ನಾಡಿದ ಬ್ಯಾನರ್ಜಿ, ‘ಕೋವಿಡ್–19 ಕಾಯಿಲೆ ಹರಡುವ ಮೊದಲೂ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ವೇಗ ಕಡಿಮೆ ಆಗುತ್ತಿತ್ತು’ ಎಂದರು.

2021ರಲ್ಲಿ ಆರ್ಥಿಕ ಬೆಳವಣಿಗೆಯು ಈ ವರ್ಷದ ಸ್ಥಿತಿಗಿಂತ ಉತ್ತಮವಾಗಿರುತ್ತದೆ ಎಂದರು.‘ಭಾರತದಲ್ಲಿ ಘೋಷಿಸಿರುವ ಆರ್ಥಿಕ ಪುನಶ್ಚೇತನ ಪ್ಯಾಕೇಜ್‌ ಸೀಮಿತ ವಾದುದು. ದಿವಾಳಿ ಅಂಚಿಗೆ ತಲುಪಿದ್ದವರಿಗೆ ಆರ್ಥಿಕ ನೆರವು ಘೋಷಿಸುವ ರೀತಿಯಲ್ಲಿ ಅದು ಇದೆ. ಆದರೆ, ಇನ್ನೂ ಹೆಚ್ಚಿನದನ್ನು ಮಾಡಬಹುದಿತ್ತು ಎಂಬುದು ನನ್ನ ನಂಬಿಕೆ’ ಎಂದು ಬ್ಯಾನರ್ಜಿ ಹೇಳಿದರು. ‘ಪುನಶ್ಚೇತನ ಕ್ರಮಗಳು ಕಡಿಮೆ ಆದಾಯ ಹೊಂದಿರು ವವರು ಖರೀದಿ ಹೆಚ್ಚಿಸುವಂತೆ ಮಾಡಲಿಲ್ಲ. ಕಡಿಮೆ ಆದಾಯ ಹೊಂದಿರುವ ಜನರ ಕೈಗೆ ಹಣ ನೀಡಲು ಸರ್ಕಾರ ಸಿದ್ಧವಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT