ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಕೋಟಿ ಜನಧನ ಖಾತೆ ನಿಷ್ಕ್ರಿಯ: ಸಚಿವ ಭಾಗವತ್‌ ಕರಾಡ್‌

Published 19 ಡಿಸೆಂಬರ್ 2023, 16:18 IST
Last Updated 19 ಡಿಸೆಂಬರ್ 2023, 16:18 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಪ್ರಧಾನ ಮಂತ್ರಿ ಜನಧನ ಯೋಜನೆಯಡಿ (ಪಿಎಂಜೆಡಿವೈ) ತೆರೆದಿರುವ ಶೇ 20ರಷ್ಟು ಖಾತೆಗಳು ನಿಷ್ಕ್ರಿಯವಾಗಿವೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಭಾಗವತ್‌ ಕರಾಡ್‌ ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.

ದೇಶದಲ್ಲಿ ಅಂದಾಜು 51.11 ಕೋಟಿ ಜನಧನ ಖಾತೆಗಳಿದ್ದು, ಈ ಪೈಕಿ ಡಿಸೆಂಬರ್‌ 6ರ ವೇಳೆಗೆ 10.34 ಕೋಟಿ ಖಾತೆಗಳು ನಿಷ್ಕ್ರಿಯವಾಗಿವೆ. ಇದರಲ್ಲಿ ಮಹಿಳೆಯರು ತೆರೆದಿರುವ 4.93 ಕೋಟಿ ಖಾತೆಗಳಿವೆ ಎಂದು ಹೇಳಿದ್ದಾರೆ.

ನಿಷ್ಕ್ರಿಯ ಖಾತೆಗಳಲ್ಲಿ ಸುಮಾರು ₹12,779 ಕೋಟಿ ಠೇವಣಿ ಇದೆ. ಈ ಮೊತ್ತ ಜನಧನ ಖಾತೆಗಳಲ್ಲಿ ಸಂಗ್ರಹವಾಗಿರುವ ಠೇವಣಿಯ ಒಟ್ಟು ಮೊತ್ತದ ಶೇ 6.12ರಷ್ಟಿದೆ ಎಂದು ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT