ಶುಕ್ರವಾರ, ಮೇ 27, 2022
21 °C

ಮೌಲ್ಯಯುತ ಕಂಪನಿ: 8ನೇ ಸ್ಥಾನಕ್ಕೇರಿದ ಅದಾನಿ ಗ್ರೀನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂಬೈ ಷೇರುಪೇಟೆಯಲ್ಲಿ ಅತಿ ಹೆಚ್ಚಿನ ಬಂಡವಾಳ ಮೌಲ್ಯ ಹೊಂದಿರುವ ಪ್ರಮುಖ 10 ಕಂಪನಿಗಳ ಪಟ್ಟಿಯಲ್ಲಿ ಅದಾನಿ ಗ್ರೀನ್‌ ಎನರ್ಜಿ ಬುಧವಾರ 8ನೇ ಸ್ಥಾನಕ್ಕೆ ಏರಿದೆ. ಕಂಪನಿಯ ಒಟ್ಟಾರೆ ಬಂಡವಾಳ ಮೌಲ್ಯವು ₹ 4.48 ಲಕ್ಷ ಕೋಟಿಗೆ ತಲುಪಿದೆ.

ಸೋಮವಾರದ ವಹಿವಾಟಿನಲ್ಲಿ 10ನೇ ಸ್ಥಾನ ಪಡೆದುಕೊಂಡಿದ್ದ ಕಂಪನಿಯು ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಬಜಾಜ್ ಫೈನಾನ್ಸ್‌ ಮತ್ತು ಎಚ್‌ಡಿಎಫ್‌ಸಿ ಕಂಪನಿಗಳನ್ನು ಹಿಂದಿಕ್ಕುವ ಮೂಲಕ ಎಂಟನೇ ಸ್ಥಾನ ಪಡೆದುಕೊಂಡಿತು. ಬಜಾಜ್‌ ಫೈನಾನ್ಸ್‌ ಮಾರುಕಟ್ಟೆ ಮೌಲ್ಯ 4.43 ಲಕ್ಷ ಕೋಟಿ ಮತ್ತು ಎಚ್‌ಡಿಎಫ್‌ಸಿ ಮಾರುಕಟ್ಟೆ ಮೌಲ್ಯ ₹ 4.31 ಲಕ್ಷ ಕೋಟಿಯಷ್ಟಿದೆ.

ಬುಧವಾರದ ವಹಿವಾಟಿನಲ್ಲಿ ಬಿಎಸ್‌ಇನಲ್ಲಿ ಕಂಪನಿಯ ಷೇರು ಮೌಲ್ಯ ಶೇ 2.70ರಷ್ಟು ಹೆಚ್ಚಾಗಿ ಪ್ರತಿ ಷೇರಿನ ಬೆಲೆ ₹ 2,864.75ಕ್ಕೆ ತಲುಪಿತು. ವಹಿವಾಟಿನ ಒಂದು ಹಂತದಲ್ಲಿ ಷೇರು ಮೌಲ್ಯವು ಶೇ 5.75ರವರೆಗೂ ಏರಿಕೆ ಆಗಿತ್ತು. ಈ ವರ್ಷದಲ್ಲಿ ಈವರೆಗೆ ಕಂಪನಿಯ ಷೇರು ಮೌಲ್ಯವು ಒಟ್ಟಾರೆ ಶೇ 115.75ರಷ್ಟು ಏರಿಕೆ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು