ಶುಕ್ರವಾರ, ಫೆಬ್ರವರಿ 3, 2023
23 °C

ಮುಂಬೈನ ಕೊಳೆಗೇರಿ ಧಾರಾವಿ ಅಭಿವೃದ್ಧಿಗೆ ಅದಾನಿ ಅತಿಹೆಚ್ಚಿನ ಬಿಡ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಧಾರಾವಿ ಮರುಅಭಿವೃದ್ಧಿ ಯೋಜನೆಗೆ ಅದಾನಿ ಸಮೂಹವು ಅತಿಹೆಚ್ಚಿನ ಮೊತ್ತದ ಬಿಡ್ ಸಲ್ಲಿಸಿದೆ ಎಂದು ಯೋಜನೆಯ ಸಿಇಒ ಎಸ್.ವಿ.ಆರ್. ಶ್ರೀನಿವಾಸ್ ತಿಳಿಸಿದ್ದಾರೆ.

ವಿಶ್ವದ ಅತಿದೊಡ್ಡ ಕೊಳೆಗೇರಿಗಳಲ್ಲಿ ಒಂದಾಗಿರುವ ಈ ಪ್ರದೇಶದ ಮರುಅಭಿವೃದ್ಧಿಗೆ ಸಮೂಹವು ₹ 5069 ಕೋಟಿ ಮೊತ್ತದ ಬಿಡ್ ಸಲ್ಲಿಸಿದೆ. ಪ್ರತಿಸ್ಪರ್ಧಿ ಕಂಪನಿಯಾದ ಡಿಎಲ್‌ಎಫ್‌ ₹ 2025 ಕೋಟಿ ಮೊತ್ತದ ಬಿಡ್ ಸಲ್ಲಿಸಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ.

‘ಈ ವಿವರಗಳನ್ನು ನಾವು ಈಗ ಸರ್ಕಾರಕ್ಕೆ ಕಳುಹಿಸುತ್ತೇವೆ. ಅದು ಅಂತಿಮ ಒಪ್ಪಿಗೆ ನೀಡಲಿದೆ’ ಎಂದು ಅವರು ತಿಳಿಸಿದ್ದಾರೆ.

ಬಿಡ್‌ ಗೆದ್ದವರು, ಈ ಕೊಳೆಗೇರಿಯಲ್ಲಿ ವಾಸಿಸುತ್ತಿರುವ 6.5 ಲಕ್ಷ ಜನರಿಗೆ ಏಳು ವರ್ಷಗಳಲ್ಲಿ ಪುನರ್ವಸತಿ ಕಲ್ಪಿಸಬೇಕು. ಬಿಡ್ ಗೆದ್ದವರಿಗೆ ಮುಂಬೈನ ಕೇಂದ್ರ ಭಾಗದಲ್ಲಿರುವ ಈ ಪ್ರದೇಶದ ವಾಣಿಜ್ಯ ಮತ್ತು ವಸತಿ ಜಾಗವನ್ನು ಮಾರಾಟ ಮಾಡಿ ವರಮಾನ ಪಡೆಯುವ ಅವಕಾಶ ಕೂಡ ಸಿಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು