ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಅಡ ಇರಿಸಿದ ಅದಾನಿ ಸಮೂಹ

Last Updated 21 ಸೆಪ್ಟೆಂಬರ್ 2022, 15:33 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಸಮೂಹವು ತಾನು ಅಂಬುಜಾ ಸಿಮೆಂಟ್ಸ್‌ ಮತ್ತು ಎಸಿಸಿ ಕಂಪನಿಗಳಲ್ಲಿ ಹೊಂದಿರುವ ಅಷ್ಟೂ ಷೇರುಗಳನ್ನು (ಅಂದಾಜು ₹ 1.03 ಲಕ್ಷ ಕೋಟಿ ಮೌಲ್ಯ) ಡಾಯಿಚ್‌ ಬ್ಯಾಂಕ್‌ನ ಹಾಂಗ್‌ಕಾಂಗ್‌ ಶಾಖೆಯಲ್ಲಿ ಅಡ ಇರಿಸಿದೆ.

ಅಂಬುಜಾ ಸಿಮೆಂಟ್ಸ್‌ನಲ್ಲಿ ಅದಾನಿ ಸಮೂಹವು ಶೇಕಡ 63.15ರಷ್ಟು, ಎಸಿಸಿ ಕಂಪನಿಯಲ್ಲಿ ಶೇ 56.7ರಷ್ಟು ಷೇರುಗಳನ್ನು ಹೊಂದಿದೆ. ‘ಕೆಲವು ಸಾಲಗಾರರು ಹಾಗೂ ಇತರ ಹಣಕಾಸು ಸಂಸ್ಥೆ/ವ್ಯಕ್ತಿಗಳ ಪ್ರಯೋಜನಕ್ಕಾಗಿ ಹೀಗೆ ಮಾಡಲಾಗಿದೆ’ ಎಂದು ಸಮೂಹವು ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.

ಅಂಬುಜಾ ಸಿಮೆಂಟ್ಸ್‌ ಹಾಗೂ ಎಸಿಸಿ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದಾಗಿ ಅದಾನಿ ಸಮೂಹವು ಹಿಂದಿನ ವಾರ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT