ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹8.34 ಲಕ್ಷ ಕೋಟಿ ಹೂಡಿಕೆ: ಅದಾನಿ

Published 19 ಜೂನ್ 2024, 15:17 IST
Last Updated 19 ಜೂನ್ 2024, 15:17 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಶಕ್ತಿ ಪರಿವರ್ತನೆಯ ಯೋಜನೆಗಳಲ್ಲಿ ₹8.24 ಲಕ್ಷ ಕೋಟಿ ಬಂಡವಾಳ ಹೂಡಲು ಅದಾನಿ ಸಮೂಹ ನಿರ್ಧರಿಸಿದೆ ಎಂದು ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ ತಿಳಿಸಿದ್ದಾರೆ. 

ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ ಕ್ರಿಸಿಲ್‌ ಬುಧವಾರ ‘ಮೂಲಸೌಕರ್ಯ–ಭಾರತದ ಭವಿಷ್ಯಕ್ಕೆ ವೇಗವರ್ಧಕ’ ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಸಿರು ಶಕ್ತಿ ಉತ್ಪಾದನಾ ಘಟಕಗಳಿಗೆ ಅಗತ್ಯವಿರುವ ಪರಿಕರಗಳ ತಯಾರಿಕೆಗೂ ಒತ್ತು ನೀಡಲಾಗುವುದು ಎಂದರು.

ಪವನ ಮತ್ತು ಸೌರ ವಿದ್ಯುತ್‌ ಪಾರ್ಕ್‌ಗಳನ್ನು ನಿರ್ಮಿಸಲಾಗುವುದು. ಹಸಿರು ಜಲಜನಕ ಶಕ್ತಿ ಉತ್ಪಾದನೆಗೆ ಅಗತ್ಯವಿರುವ ವಿದ್ಯುದ್ವಿಭಜಕಗಳು, ಸೌರ ಫಲಕಗಳು ಹಾಗೂ ವಿಂಡ್‌ ಟರ್ಬೈನ್‌ಗಳನ್ನು ತಯಾರಿಸಲಾಗುವುದು ಎಂದು ತಿಳಿಸಿದರು.

ಶಕ್ತಿ ಪರಿವರ್ತನೆ ವಲಯದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗಲಿದೆ. ಇದರಿಂದ ನವೀಕರಿಸಬಹುದಾದ ಇಂಧನ ಸರಪಳಿಯನ್ನು ವಿಸ್ತರಿಸಲಿದೆ. ಈಗಾಗಲೇ, ಹಸಿರು ಶಕ್ತಿ ಉತ್ಪಾದನೆಗೆ ಅಗತ್ಯವಿರುವ ಪರಿಕರಗಳ ತಯಾರಿಕೆಗೆ ಚಾಲನೆ ಸಿಕ್ಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT