ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಟೆಕ್ ಮೋಟರ್ಸ್‌ನಿಂದ ಎಲ್ಮೊ ಇ.ವಿ.

Last Updated 20 ಮೇ 2022, 16:14 IST
ಅಕ್ಷರ ಗಾತ್ರ

ಬೆಂಗಳೂರು: ಆಫ್ಟೆಕ್ ಮೋಟರ್ಸ್ ಇಂಡಿಯಾ ಕಂಪನಿಯು ವಿದ್ಯುತ್ ಚಾಲಿತ (ಇ.ವಿ.) ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಎಲ್ಮೊ ಹೆಸರಿನ ಇ.ವಿ. ದ್ವಿಚಕ್ರ ವಾಹನವು ಶೀಘ್ರದಲ್ಲಿಯೇ ರಸ್ತೆಗಿಳಿಯಲಿದೆ.

ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ಆಫ್ಟೆಕ್ ಗ್ರೂಪ್‌ನ ಅಂಗಸಂಸ್ಥೆ ಆಫ್ಟೆಕ್ ಮೋಟರ್ಸ್ ಇಂಡಿಯಾ ಪ್ರೈ.ಲಿ. ಸವಾರರ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಂಡು ಇ.ವಿ. ದ್ವಿಚಕ್ರ ವಾಹನ ವಿನ್ಯಾಸ ಮಾಡಲಾಗಿದೆ, ಇದು ಎಲ್ಲ ವಯಸ್ಸಿನವರಿಗೂ ಹೊಂದುವಂತಿದೆ ಎಂದು ಕಂಪನಿ ಹೇಳಿದೆ.

ಆಫ್ಟೆಕ್ ಮೋಟರ್ಸ್ ಕಂಪನಿಯು ಡೀಲರ್‌ಗಳ ಜಾಲವನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೊಂದಿದೆ. ಕರ್ನಾಟಕದಲ್ಲಿ ಇ.ವಿ. ತಯಾರಿಕಾ ಘಟಕವೊಂದನ್ನು ಆರಂಭಿಸುವ ಆಲೋಚನೆ ಕೂಡ ಇದೆ ಎಂದು ಕಂಪನಿ ಹೇಳಿದೆ.

ಎಲ್ಮೊ ದ್ವಿಚಕ್ರ ವಾಹನವು ಒಂದು ಬಾರಿ ಚಾರ್ಜ್‌ ಮಾಡಿದರೆ 90 ಕಿ.ಮೀ. ಸಾಗುತ್ತದೆ. ಗಂಟೆಗೆ ಗರಿಷ್ಠ 75 ಕಿ.ಮೀ. ವೇಗದಲ್ಲಿ ಇದು ಸಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT