ಭಾನುವಾರ, ಆಗಸ್ಟ್ 1, 2021
22 °C

ವಾರದ ಬಿಡುವಿನ ಬಳಿಕ ಡೀಸೆಲ್‌ ಬೆಲೆ 25 ಪೈಸೆ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಂದು ವಾರದ ಬಿಡುವಿನ ನಂತರ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ 25 ಪೈಸೆಯಂತೆ ಹೆಚ್ಚಿಸಿವೆ.

ಪೆಟ್ರೋಲ್‌ ಬೆಲೆಯಲ್ಲಿ ಸತತ 8ನೇ ದಿನವೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಜೂನ್‌ 29ರಂದು ಇಂಧನಗಳ ಬೆಲೆಗಳನ್ನು ಪರಿಷ್ಕರಿಸಿದ ನಂತರ ಇಂದಿನವರೆಗೆ ಬೆಲೆ ಏರಿಸಿರಲಿಲ್ಲ. ಇದುವರೆಗಿನ ಬೆಲೆ ಏರಿಕೆಯಿಂದಾಗಿ ಡೀಸೆಲ್‌ ಬೆಲೆ ₹ 11.39  ಮತ್ತು ಪೆಟ್ರೋಲ್‌ ಬೆಲೆ ₹ 9.17ರಷ್ಟು ತುಟ್ಟಿಯಾಗಿದೆ. ಮುಂಬೈನಲ್ಲಿ ಪೆಟ್ರೋಲ್‌ ಬೆಲೆ ₹ 87.19ಕ್ಕೆ ತಲುಪಿದ್ದರೆ ಬೆಂಗಳೂರಿನಲ್ಲಿ ₹ 83.04ರಲ್ಲಿದೆ. ಡೀಸೆಲ್‌ ಬೆಲೆ 21 ಪೈಸೆ ಏರಿಕೆಯಾಗಿ ₹ 76.79 ಕ್ಕೆ ತಲುಪಿದೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು