ಗುರುವಾರ , ಆಗಸ್ಟ್ 6, 2020
27 °C

ಮುಂಗಾರು ವಿಳಂಬ: ಬಿತ್ತನೆಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮುಂಗಾರು ವಿಳಂಬ ಆಗಿರುವುದರಿಂದ ಹತ್ತಿ, ಸೋಯಾಬೀನ್‌, ಕಡಲೆ ಮತ್ತು ಬೇಳೆಕಾಳು ಬಿತ್ತನೆಗೆ ಹಿನ್ನಡೆಯಾಗಿದೆ. ಹೀಗಾಗಿ ಇಳುವರಿ ತಡವಾಗಲಿದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಸ್‌ಇಎ) ಹೇಳಿದೆ.

ಸೋಯಾಬೀನ್‌, ಬೇಳೆಕಾಳು ಮತ್ತು ಕಡಲೆ ಬಿತ್ತನೆ 8ರಿಂದ 10 ದಿನ ತಡವಾಗುವ ಅಂದಾಜು ಮಾಡಲಾಗಿದೆ. ಮುಂಗಾರು ಇನ್ನಷ್ಟು ವಿಳಂಬವಾದಲ್ಲಿ ರೈತರು ಬೇರೆ ಬೆಳೆಗಳನ್ನು ಬಿತ್ತನೆ ಮಾಡುವ ಸಾಧ್ಯತೆ ಇದೆ ಎಂದು ಎಸ್‌ಇಎನ ಕಾರ್ಯಕಾರಿ ನಿರ್ದೇಶಕ ಬಿ.ವಿ. ಮೆಹ್ತಾ ತಿಳಿಸಿದ್ದಾರೆ.

‘ಹತ್ತಿ ಬೆಳೆಯುವ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹತ್ತಿ ಬಿತ್ತನೆ ಎರಡು ವಾರಗಳವರೆಗೆ ತಡವಾಗಿದೆ. ಹಿಂದಿನ ವರ್ಷ ಜೂನ್‌ ಮೊದಲ ವಾರದಲ್ಲಿ ಮಳೆಯಾಗಿತ್ತು. ಆದರೆ ಈ ವರ್ಷ ಎರಡನೇ ವಾರ ಕಳೆದರೂ ಈ ರಾಜ್ಯಗಳಲ್ಲಿ ಮಳೆಯಾಗುತ್ತಿಲ್ಲ’ ಎಂದು ಹತ್ತಿ ಒಕ್ಕೂಟದ ಅಧ್ಯಕ್ಷ ಅತುಲ್‌ ಗಣಾತ್ರ ತಿಳಿಸಿದ್ದಾರೆ.

‘ಮುಂಗಾರು ವಿಳಂಬವಾದಷ್ಟೂ ಇಳುವರಿ ಸಿಗಲು ತಡವಾಗುತ್ತದೆ. ಸಾಮಾನ್ಯವಾಗಿ ಅಕ್ಟೋಬರ್‌ ಮೊದಲ ವಾರದಲ್ಲಿ ಬೆಳೆ ಬರಲು ಆರಂಭವಾಗುತ್ತದೆ. ಆದರೆ, ಈ ಬಾರಿ ಅಕ್ಟೋಬರ್‌ನ ಮೂರನೇ ಅಥವಾ ನಾಲ್ಕನೇ ವಾರಕ್ಕೆ ಹೋಗಲಿದೆ. ಕಾರ್ಖಾನೆಗಳಿಗೆ ಹತ್ತಿ ಪೂರೈಕೆ ವಿಳಂಬವಾದರೆ, ಬೆಲೆಯಲ್ಲಿ ವ್ಯತ್ಯಾಸ ಆಗಬಹುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು