ಬೆಂಗಳೂರು: ಐ.ಟಿ. ಸೇವಾ ವಲಯದಲ್ಲಿ ವಿಶೇಷವಾದ ಕೌಶಲಗಳನ್ನು ಹೊಂದಿರುವ ಹೊಸಬರಿಗೆ ಈಗ ಐ.ಟಿ. ಕಂಪನಿಗಳು ₹10 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ವೇತನವನ್ನು ನೀಡಲು ಮುಂದಾಗುತ್ತಿವೆ..

ಹೊಸಬರಿಗೆ ತೀರಾ ಈಚಿನವರೆಗೆ ಐ.ಟಿ. ಉದ್ಯಮದಲ್ಲಿ ₹3.5 ಲಕ್ಷದಿಂದ ₹5 ಲಕ್ಷದವರೆಗೆ ಮಾತ್ರ ವಾರ್ಷಿಕ ವೇತನ ಇತ್ತು. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ವಿಶೇಷ ಕೌಶಲಗಳನ್ನು ಹೊಂದಿರುವವರಿಗೆ ಈಗ ವಾರ್ಷಿಕ ₹21 ಲಕ್ಷದವರೆಗೂ ವೇತನ ನೀಡಲು ಕಂಪನಿಗಳು ಮುಂದೆಬರುತ್ತಿವೆ.

ವಿಶೇಷ ಜವಾಬ್ದಾರಿಗಳನ್ನು ನಿರ್ವಹಿಸುವ ಹುದ್ದೆಗಳಿಗೆ ನೇಮಕಗೊಳ್ಳುವ ನೌಕರರಿಗೆ ವಾರ್ಷಿಕ ₹21 ಲಕ್ಷದವರೆಗೂ ವೇತನ ನೀಡಲು ದೇಶದ ಎರಡನೆಯ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಇನ್ಫೊಸಿಸ್ ಮುಂದೆಬಂದಿದೆ.

ಅಪ್ಲೈಡ್ ಎ.ಐ/ಎಂಎಲ್, ಡೇಟಾ ಎಂಜಿನಿಯರಿಂಗ್, ಕ್ಲೌಡ್ ಪ್ಲ್ಯಾಟ್ಫಾರ್ಮ್ ಎಂಜಿನಿಯರಿಂಗ್, ಸೈಬರ್ ಭದ್ರತೆ ಕೌಶಲಗಳು ಈಗ ಹೆಚ್ಚಿನ ವೇತನವನ್ನು ಆಕರ್ಷಿಸುತ್ತಿವೆ.

ದೊಡ್ಡ ಮಟ್ಟದ ವೇತನವು ಎಲ್ಲರಿಗೂ ಸಿಗುತ್ತಿಲ್ಲ. ಅದು ವಿಶೇಷವಾದ ಕೌಶಲಗಳನ್ನು ಹೊಂದಿರುವ ಕೆಲವರಿಗೆ ಮಾತ್ರ ಸೀಮಿತ. ಹೊಸಬರು ₹10 ಲಕ್ಷಕ್ಕಿಂತ ಹೆಚ್ಚಿನ ಮಟ್ಟದ ವಾರ್ಷಿಕ ವೇತನ ಪಡೆಯುವುದು ಮುಂದಿನ ದಿನಗಳಲ್ಲಿಯೂ ಸೀಮಿತ ಪ್ರಮಾಣದಲ್ಲಿಯೇ ಇರಲಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.