‘ವಾರಾಂತ್ಯದೊಳಗೆ ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ’

ನವದೆಹಲಿ: ಏರ್ ಇಂಡಿಯಾ ಕಂಪನಿಯನ್ನು ಈ ವಾರದ ಅಂತ್ಯದೊಳಗೆ ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಬಿಡ್ ಪ್ರಕ್ರಿಯೆಯ ಮೂಲಕ, ಏರ್ ಇಂಡಿಯಾವನ್ನು ಟಾಟಾ ಸಮೂಹದ ಅಂಗಸಂಸ್ಥೆ ಟೆಲೆಸ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡುವ ನಿರ್ಧಾರವನ್ನು ಅಕ್ಟೋಬರ್ 8ರಂದು ಘೋಷಿಸಿತು.
ಬಳಿಕ ಅಕ್ಟೋಬರ್ 11ರಂದು ವಿಮಾನಯಾನ ಕಂಪನಿಯನ್ನು ₹ 18 ಸಾವಿರ ಕೋಟಿಗೆ ಮಾರಾಟ ಮಾಡುವ ಆಸಕ್ತಿ ಇದೆ ಎಂಬ ಪತ್ರವನ್ನು ಕೇಂದ್ರ ಸರ್ಕಾರವು ಟಾಟಾ ಸಮೂಹಕ್ಕೆ ನೀಡಿತು. ಅಕ್ಟೋಬರ್ 25ರಂದು ಕೇಂದ್ರ ಸರ್ಕಾರ ಮತ್ತು ಟಾಟಾ ಸನ್ಸ್ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.