ನವದೆಹಲಿ: ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ ಕಂಪನಿಯು ಏರ್‌ಬಸ್ ಹಾಗೂ ಬೋಯಿಂಗ್ ಕಂಪನಿಗಳಿಂದ ಒಟ್ಟು 840 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರಲ್ಲಿ 470 ವಿಮಾನಗಳನ್ನು ಏರ್ ಇಂಡಿಯಾ ಖರೀದಿ ಮಾಡುವುದು ಖಚಿತ. ಇನ್ನುಳಿದ 370 ವಿಮಾನಗಳ ಖರೀದಿಯನ್ನು ಕಂಪನಿಯು ಒಂದು ಆಯ್ಕೆಯನ್ನಾಗಿ ಇರಿಸಿಕೊಂಡಿದೆ. ಏರ್ ಇಂಡಿಯಾ ಕಂಪನಿಯು ಏರ್‌ಬಸ್‌ನಿಂದ 250 ವಿಮಾನಗಳನ್ನು ಹಾಗೂ ಬೋಯಿಂಗ್‌ನಿಂದ 220 ವಿಮಾನಗಳನ್ನು ಖರೀದಿಸುವುದು ಖಚಿತವಾಗಿದೆ.
‘370 ವಿಮಾನಗಳ ಖರೀದಿಯು ಒಂದು ಆಯ್ಕೆಯಾಗಿ ಇದೆ’ ಎಂದು ಕಂಪನಿಯ ಮುಖ್ಯ ವಾಣಿಜ್ಯ ಮತ್ತು ಪರಿವರ್ತನೆ ಅಧಿಕಾರಿ ನಿಪುಣ್ ಅಗರ್ವಾಲ್ ಹೇಳಿದ್ದಾರೆ.
ಏರ್ ಇಂಡಿಯಾ ಕಂಪನಿಯು ಕಡೆಯ ಬಾರಿ ವಿಮಾನ ಖರೀದಿ ಒಪ್ಪಂದ ಮಾಡಿಕೊಂಡಿದ್ದು 2005ರಲ್ಲಿ. ಆಗ ಕಂಪನಿಯು ಸರ್ಕಾರದ ಅಧೀನದಲ್ಲಿತ್ತು. ಆ ಸಂದರ್ಭದಲ್ಲಿ ಅದು 111 ವಿಮಾನಗಳನ್ನು (ಬೋಯಿಂಗ್‌ನಿಂದ 68 ಹಾಗೂ ಏರ್‌ಬಸ್‌ನಿಂದ 43) ಖರೀದಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.