ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 16ರಿಂದ ದೆಹಲಿ- ಟೆಲ್‌ ಅವಿವ್‌ ನಡುವೆ ವಿಮಾನ ಸೇವೆ ಪುನರಾರಂಭ

Published 4 ಮೇ 2024, 14:19 IST
Last Updated 4 ಮೇ 2024, 14:19 IST
ಅಕ್ಷರ ಗಾತ್ರ

ನವದೆಹಲಿ: ನವದೆಹಲಿ ಮತ್ತು ಇಸ್ರೇಲ್‌ನ ಟೆಲ್ ಅವಿವ್‌ ನಗರದ ನಡುವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಏರ್‌ ಇಂಡಿಯಾದ ವಿಮಾನ ಸೇವೆಯು ಮೇ 16ರಿಂದ ಪುನರಾರಂಭವಾಗಲಿದೆ.

ಇಸ್ರೇಲ್‌ ಮತ್ತು ಇರಾನ್‌ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿದ್ದರಿಂದ ವಿಮಾನ ಸೇವೆಯನ್ನು ರದ್ದುಪಡಿಸಲಾಗಿತ್ತು. ಮತ್ತೆ ಸೇವೆ ಆರಂಭಿಸಲಾಗುತ್ತಿದ್ದು, ವಾರದಲ್ಲಿ ಐದು ವಿಮಾನಗಳು ಟೆಲ್‌ ಅವಿವ್‌ಗೆ ಹಾರಾಟ ನಡೆಸಲಿವೆ ಎಂದು ಕಂಪನಿಯು ತಿಳಿಸಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹಮಾಸ್‌ ಬಂಡುಕೋರರು, ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದರು. ಇದರಿಂದ ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ನಡುವೆ ಬಿಕ್ಕಟ್ಟು ತಲೆದೋರಿದ್ದರಿಂದ ಟೆಲ್‌ ಅವಿವ್‌ಗೆ ಏರ್‌ ಇಂಡಿಯಾವು ವಿಮಾನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಬಳಿಕ ಮಾರ್ಚ್‌ 3ರಿಂದ ಸೇವೆಯನ್ನು ಪುನರಾರಂಭಿಸಿತ್ತು.‌ 

ಮತ್ತೆ ಮಧ್ಯಪ್ರಾಚ್ಯ ಬಿಕ್ಕಟ್ಟು ಉಲ್ಬಣಗೊಂಡಿದ್ದರಿಂದ ಏಪ್ರಿಲ್‌ 30ರ ವರೆಗೆ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಬಳಿಕ ಇದನ್ನು ಮೇ 15ರ ವರೆಗೂ ವಿಸ್ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT