ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22ರಿಂದ ಏರ್‌ ಇಂಡಿಯಾದ ಏರ್‌ಬಸ್‌ ವಿಮಾನ ಸೇವೆ ಆರಂಭ

Published 1 ಜನವರಿ 2024, 16:17 IST
Last Updated 1 ಜನವರಿ 2024, 16:17 IST
ಅಕ್ಷರ ಗಾತ್ರ

ನವದೆಹಲಿ: ಏರ್‌ ಇಂಡಿಯಾ ಕಂಪನಿಯ ಮೊದಲ ಏರ್‌ಬಸ್ ಎ350 ವಿಮಾನ ಸೇವೆಯು ಜನವರಿ 22ರಿಂದ ಬೆಂಗಳೂರು ಮತ್ತು ಮುಂಬೈ ನಡುವೆ  ಆರಂಭವಾಗಲಿದೆ.

ಎ350–900 ವಿಮಾನವು ಮೂರು ವರ್ಗದ ಕ್ಯಾಬಿನ್‌ ಹೊಂದಿದ್ದು, ಒಟ್ಟು 316 ಸೀಟುಗಳಿವೆ. 28 ಬ್ಯುಸಿನೆಸ್‌ ಕ್ಲಾಸ್‌, 24 ಪ್ರೀಮಿಯಂ ಎಕಾನಮಿ ಹಾಗೂ 264 ಎಕಾನಮಿ ದರ್ಜೆಯ ಸೀಟುಗಳಿವೆ. 

ದೇಶೀಯ ಮಾರ್ಗದಲ್ಲಿ ಏರ್‌ಬಸ್‌ನ ಪ್ರಥಮ ವಾಣಿಜ್ಯ ಸಂಚಾರ ಸೇವೆ ಆರಂಭಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಎಲ್ಲಾ ಸಿಬ್ಬಂದಿಗೂ ಸೂಕ್ತ ತರಬೇತಿ ನೀಡಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಸೋಮವಾರದಿಂದಲೇ ಏರ್‌ಬಸ್‌ನ ಪ್ರಯಾಣ ಸೇವೆಗೆ ಸಂಬಂಧಿಸಿದಂತೆ ಬುಕ್ಕಿಂಗ್‌ ಆರಂಭಿಸಲಾಗಿದೆ. ಫ್ರಾನ್ಸ್‌ನ ಏರ್‌ಬಸ್‌ ಕಂಪನಿ ನಿರ್ಮಿಸಿರುವ ಈ ವಿಮಾನವು ಡಿಸೆಂಬರ್‌ 23ರಂದು ನವದೆಹಲಿಗೆ ಬಂದಿಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT