ನವದೆಹಲಿ: ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನ ನಿವ್ವಳ ಲಾಭವು 2023–24ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹಲವು ಪಟ್ಟು ಹೆಚ್ಚಾಗಿ ₹7.7 ಕೋಟಿಗೆ ತಲುಪಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹3 ಕೋಟಿ ಲಾಭ ಆಗಿತ್ತು. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವರಮಾನವು ಶೇ 39ರಷ್ಟು ಏರಿಕೆಯಾಗಿ ₹427 ಕೋಟಿ ತಲುಪಿದೆ ಎಂದು ಕಂಪನಿಯು ಷೇರುಪೇಟೆಗೆ ಗುರುವಾರ ತಿಳಿಸಿದೆ.