ಅಮೆರಿಕ–ಜೀನಾ ವಾಣಿಜ್ಯ ಸಮರ ಮೂರ್ಖತನದ ಕೆಲಸ: ಜಾಕ್‌ ಮ

7

ಅಮೆರಿಕ–ಜೀನಾ ವಾಣಿಜ್ಯ ಸಮರ ಮೂರ್ಖತನದ ಕೆಲಸ: ಜಾಕ್‌ ಮ

Published:
Updated:

ಶಾಂಘೈ: ವಿಶ್ವದ ಎರಡು ಬಲಿಷ್ಠ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ನಡೆಯುತ್ತಿರುವ ವಾಣಿಜ್ಯ ಸಮರ ‘ಜಗತ್ತಿನ ಅತ್ಯಂತ ಮೂರ್ಖತನದ ವಿಷಯ’ ಎಂದು ಅಲಿಬಾಬಾದ ಸ್ಥಾಪಕ ಜಾಕ್‌ ಮ ಹೇಳಿದ್ದಾರೆ.

ಶಾಂಘೈನಲ್ಲಿ ನಡೆಯುತ್ತಿರುವ ಚೀನಾ ಅಂತರರಾಷ್ಟ್ರೀಯ ಆಮದು ಎಕ್ಸ್‌ಪೊನಲ್ಲಿ ಅವರು ಮಾತನಾಡಿದರು. ಇತ್ಮಧ್ಯೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮುಕ್ತ ವ್ಯಾಪಾರ ವ್ಯವಸ್ಥೆ ಒದಗಿಸುವುದಾಗಿ ಸೋಮವಾರ ಶಪತ ಮಾಡುವ ಮೂಲಕ ಅಮೆರಿಕದ ನಡೆಗೆ ಪ್ರರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೇಶಿಯ ಬಳಕೆಯ ಆಮದು, ಕಡಿಮೆ ಸುಂಕ, ಕಸ್ಟಮ್ಸ್ ಕ್ಲಿಯರೆನ್ಸ್ ಪ್ರಕ್ರಿಯೆಗಳನ್ನು ಸರಾಗಗೊಳಿಸುವುದು ಮತ್ತು ಬೌದ್ಧಿಕ ಆಸ್ತಿ ಹಕ್ಕನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವುದು ಸೇರಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅಲ್ಲದೆ, ಜೀನಾದಲ್ಲಿ ವಿಶ್ವದ ಶ್ರೇಷ್ಟ ದರ್ಜೆಯ ವ್ಯಾಪಾರ ವಾತಾವರಣ ನಿರ್ಮಿಸುತ್ತೇವೆ’ ಎಂದು ಎಕ್ಸ್‌ಪೋದಲ್ಲಿ ಜಿನ್‌ಪಿಂಗ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !