ಮಾತುಕತೆ ಮೂಲಕ ಕಾನೂನು ವಿವಾದ ಇತ್ಯರ್ಥಕ್ಕೆ ಅಮೆಜಾನ್–ಫ್ಯೂಚರ್ ಗ್ರುಪ್ ಒಪ್ಪಿಗೆ

ನವದೆಹಲಿ: ಅಮೆಜಾನ್ ಮತ್ತು ಫ್ಯೂಚರ್ ಸಮೂಹವು ಮಾತುಕತೆಯ ಮೂಲಕ ಕಾನೂನು ವಿವಾದವನ್ನು ಬಗೆಹರಿಸಿಕೊಳ್ಳಲು ಮುಂದಾಗಿವೆ.
ಫ್ಯೂಚರ್ ಸಮೂಹವು ತನ್ನ ರಿಟೇಲ್ ಹಾಗೂ ಸಗಟು ವಹಿವಾಟು ವಿಭಾಗಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಮಾರಾಟ ಮಾಡುವುದನ್ನು ವಿರೋಧಿಸಿ ಅಮೆಜಾನ್ ನ್ಯಾಯಾಲಯದ ಮೆಟ್ಟಿಲೇರಿದೆ.
ಎರಡೂ ಕಂಪನಿಗಳ ಪ್ರತಿನಿಧಿಗಳು ಸಂಧಾನ ಮಾತುಕತೆ ನಡೆಸುವಂತೆ ಅಮೆಜಾನ್ ಪರ ವಕೀಲ ಗೋಪಾಲ್ ಸುಬ್ರಮಣಿಯಂ ಅವರು ಗುರುವಾರ ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ ಸಲಹೆ ನೀಡಿದರು.
‘ಈ ಕಾನೂನು ಸಮರದಲ್ಲಿ ಯಾರೊಬ್ಬರೂ ಜಯಿಸುವುದಿಲ್ಲ’ ಎಂದು ಹೇಳುವ ಮೂಲಕ ಫ್ಯೂಚರ್ ಸಮೂಹದ ವಕೀಲರು ಮಾತುಕತೆಗೆ ಒಪ್ಪಿಗೆ ನೀಡಿದರು. ಮಾತುಕತೆ ನಡೆಸಿ ಒಂದು ತೀರ್ಮಾನಕ್ಕೆ ಬರಲು ಎರಡೂ ಕಡೆಯವರು 10 ದಿನ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಾಗರದಲ್ಲಿ ಮುಳುಗಿತು 4,000 ಐಷಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಹಡಗು!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.